Asianet Suvarna News Asianet Suvarna News

ಜನವರಿಯಲ್ಲಿ ಎಷ್ಟು ದಿನ ಬ್ಯಾಂಕಿಗೆ ರಜೆ? ಇಲ್ಲಿದೆ ಮಾಹಿತಿ

ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಆರ್ ಬಿಐ ಬ್ಯಾಂಕ್ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ 2023ರ ಜನವರಿ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದೆ. ಹಾಗಾದ್ರೆ ಜನವರಿಯಲ್ಲಿ ಎಷ್ಟು ದಿನ ಬ್ಯಾಂಕಿಗೆ ರಜೆಯಿದೆ? ಇಲ್ಲಿದೆ ಮಾಹಿತಿ. 
 

Bank holidays January 2023 Banks to be closed for 14 days check list here
Author
First Published Dec 24, 2022, 11:43 AM IST

ನವದೆಹಲಿ (ಡಿ.23): ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆರ್ ಬಿಐ ಆ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಬಾರಿ ಹೊಸ ತಿಂಗಳು ಮಾತ್ರವಲ್ಲ, ಹೊಸ ವರ್ಷಕ್ಕೆ ಕೂಡ ಕಾಲಿಡುತ್ತಿದ್ದು, ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಮೊದಲ  ತಿಂಗಳಾದ ಜನವರಿಯ ಬ್ಯಾಂಕ್ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದ್ದು, ಒಟ್ಟು 14 ದಿನಗಳ ಕಾಲ  ರಜೆಯಿದೆ. ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ  ಹಾಗೂ ಗೆಜೆಟೆಡ್ ರಜೆಗಳು  ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ.  ಇನ್ನು ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ  ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಹೀಗಾಗಿ ಜನವರಿಯಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಕೆಲಸವಿದ್ರೆ ಆರ್ ಬಿಐ ರಜಾಪಟ್ಟಿಯನ್ನು ಗಮನಿಸಿ ಹೋಗೋದು ಉತ್ತಮ. ಇಲ್ಲವಾದ್ರೆ ಸುಮ್ಮನೆ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ. 

ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ  (Regional banks) ಅನ್ವಯಿಸಲಿವೆ. 

ಹೊಸ ವರ್ಷದಲ್ಲಿ ಸಾಲಮುಕ್ತರಾಗಲು ಬಯಸಿದ್ದೀರಾ? ಹಾಗಾದ್ರೆ ಈ 5 ಟಿಪ್ಸ್ ಪಾಲಿಸಿ

ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ ವ್ಯವಹಾರಗಳಿಗೆ (ATM transaction) ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ (Bank) ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಜನವರಿ ಈ ವರ್ಷದ ಮೊದಲ ತಿಂಗಳಾಗಿದ್ದು, ಹೊಸ ವರ್ಷದಲ್ಲಿ ಮನೆ ಅಥವಾ ನಿವೇಶನ, ಕಾರ್ ಖರೀದಿಗೆ  ಏನಾದ್ರೂ ಪ್ಲ್ಯಾನ್ ಮಾಡಿದ್ರೆ ಸಾಲ ಪ್ರಕ್ರಿಯೆಗೆ ಸಂಬಂಧಿಸಿ ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಹಾಗೆಯೇ ಈ ವರ್ಷ ಬ್ಯಾಂಕ್ ಗಳಲ್ಲಿ ಎಫ್ ಡಿ ಮಾಡಿಸಲು ಅಥವಾ ಇನ್ಯಾವುದೋ ಹೂಡಿಕೆ ಯೋಜನೆಗಳಲ್ಲಿ ಹಂ ತೊಡಗಿಸುವ ಯೋಚನೆ ಮಾಡಿದ್ರು ಕೂಡ ಬ್ಯಾಂಕಿಗೆ ಹೋಗಬೇಕಾದ ಸಂದರ್ಭ ಎದುರಾಗುತ್ತದೆ. ಹೀಗಾಗಿ ಯಾವೆಲ್ಲ ದಿನ ರಜೆಯಿದೆ ಎಂಬುದನ್ನು ಮೊದಲೇ ಗಮನಿಸಿ ಆ ಬಳಿಕ ಭೇಟಿ ನೀಡುವ ಪ್ಲ್ಯಾನ್ ಮಾಡಿ. 

ಜನವರಿ ತಿಂಗಳ ರಜಾಪಟ್ಟಿ ಹೀಗಿದೆ:
ಜನವರಿ 1: ಭಾನುವಾರ, ಹೊಸ ವರ್ಷದ ಬ್ಯಾಂಕ್ ರಜೆ
ಜನವರಿ 2: ಹೊಸ ವರ್ಷದ ಬ್ಯಾಂಕ್ ಸಂಭ್ರಮಾಚರಣೆ (ಮಿಜೋರಂ)
ಜನವರಿ 5: ಗುರು ಗೋಬಿಂದ್ ಸಿಂಗ್ ಜಯಂತಿ (ಹರಿಯಾಣ ಹಾಗೂ ರಾಜಸ್ಥಾನ)
ಜನವರಿ 8: ಭಾನುವಾರ
ಜನವರಿ 11: ಮಿಷನರಿ ಡೇ (ಮೀಜೋರಂ)
ಜನವರಿ 14: ಎರಡನೇ ಶನಿವಾರ
ಜನವರಿ 15: ಭಾನುವಾರ
ಜನವರಿ 22: ಭಾನುವಾರ

ಎನ್ ಎಸ್ ಸಿ ಬಡ್ಡಿದರ ಹೊಸ ವರ್ಷದಲ್ಲಿ ಹೆಚ್ಚಳವಾಗುತ್ತಾ?

ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 25: ಹಿಮಾಚಲ ಪ್ರದೇಶ ರಾಜ್ಯ ದಿವಸ
ಜನವರಿ 26: ಗಣರಾಜ್ಯೋತ್ಸವ
ಜನವರಿ 28: ನಾಲ್ಕನೇ ಶನಿವಾರ
ಜನವರಿ 29: ಭಾನುವಾರ
ಜನವರಿ 31: ಮಿ-ಡ್ಯಾಮ್-ಮಿ-ಫಿ (ಅಸ್ಸಾಂ) 

Follow Us:
Download App:
  • android
  • ios