Asianet Suvarna News Asianet Suvarna News

ಹೊಸ ವರ್ಷದಲ್ಲಿ ಸಾಲಮುಕ್ತರಾಗಲು ಬಯಸಿದ್ದೀರಾ? ಹಾಗಾದ್ರೆ ಈ 5 ಟಿಪ್ಸ್ ಪಾಲಿಸಿ

ಸಾಲ ಪಡೆಯೋದು ಸುಲಭದ ಕೆಲಸ. ಆದರೆ, ಸಾಲ ಮರುಪಾವತಿ ಸುಲಭದ ಕೆಲಸವಲ್ಲ. ಎಷ್ಟೋ ಬಾರಿ ಸಾಲಗಳೇ ನಮಗೆ ಉರುಳಾಗೋದು ಇದೆ. ಹಾಗಾದ್ರೆ ಸಾಲದಿಂದ ಮುಕ್ತಿ ಹೊಂದಲು ಏನ್ ಮಾಡ್ಬೇಕು? ಹೊಸ ವರ್ಷದಲ್ಲಿ ಸಾಲ ತಗ್ಗಿಸಿಕೊಳ್ಳೋದು ಹೇಗೆ? 
 

Five strategies to help you be debt free in 2023
Author
First Published Dec 23, 2022, 6:40 PM IST

Business Desk:ಸಣ್ಣ ಹಾಗೂ ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ತಲುಪಲು ಸಾಲ ಮಾಡೋದು ಅನಿವಾರ್ಯ. ಆದರೆ, ಹೆಚ್ಚುತ್ತಿರುವ ಬಡ್ಡಿದರ ಹಾಗೂ ಸಾಲದ ಅವಧಿಗಳು ಸಾಲ ಪಡೆಯೋದನ್ನು ದುಬಾರಿ ಹಾಗೂ ಸವಾಲಿನ ಕೆಲಸವಾಗಿಸಿವೆ. ಅದರಲ್ಲೂ ಒಂದಕ್ಕಿಂತ ಹೆಚ್ಚಿನ ಸಾಲಗಳಿದ್ರೆ ನಿರ್ವಹಣೆ ಮಾಡೋದು ಕಷ್ಟದ ಕೆಲಸವೇ ಸರಿ. ಸಾಲವಿಲ್ಲದೆ ಇರೋದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟ. ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ ಎಂಬ ಮಾತಿದೆ. ಆದರೆ, ಎಲ್ಲದಕ್ಕೂ ಸಾಲ ಮಾಡುತ್ತಿದ್ರೆ ಮುಂದೆ ತೊಂದರೆ ತಪ್ಪಿದ್ದಲ್ಲ. ಎಷ್ಟೋ ಜನರು ಗೊತ್ತು ಗುರಿಯಿಲ್ಲದೆ ಸಾಲ ಮಾಡಿ ಆ ಬಳಿಕ ಸಂಕಷ್ಟಕ್ಕೆ ಸಿಲುಕಿದ ಅನೇಕ ನಿದರ್ಶನಗಳಿವೆ. ಅನಗತ್ಯವಾಗಿ ಸಾಲ ಪಡೆಯೋದ್ರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಕೂಡ. ಈ ವರ್ಷ ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಐದು ಬಾರಿ ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕು ಗಳು ಕೂಡ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಆದರೆ, ಸೂಕ್ತವಾದ ಹಣಕಾಸಿನ ಯೋಜನೆ ಹಾಗೂ ಶಿಸ್ತು ಅಳವಡಿಸಿಕೊಂಡರೆ ಸಾಲದಿಂದ ಬಿಡುಗಡೆ ಹೊಂದುವುದು ಕಷ್ಟದ ಕೆಲಸವೇನಲ್ಲ. ಒಂದು ವೇಳೆ ನೀವು 2023ರಲ್ಲಿ ಸಾಲಮುಕ್ತವಾಗುವ ಯೋಚನೆಯಲ್ಲಿದ್ದರೆ, ಇಲ್ಲಿದೆ ಐದು ಸೂತ್ರಗಳು. 

ನಿಮ್ಮ ಸಾಲಗಳ ಪೂರ್ಣ ಮಾಹಿತಿ ಇರಲಿ
ಈಗಿನ ನಿಮ್ಮ ಎಲ್ಲ ಸಾಲಗಳ ಮಾಹಿತಿಯನ್ನು ಪಟ್ಟಿ ಮಾಡಿ. ನೀವು ಈಗ ಪಾವತಿ ಮಾಡುತ್ತಿರುವ ಎಲ್ಲ ಇಎಂಐಗಳನ್ನು ಲೆಕ್ಕ ಹಾಕಿ. ಹಾಗೆಯೇ ನಿಮ್ಮ ಪ್ರತಿ ಸಾಲ ಈಗ ಮರುಪಾವತಿಯ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ. ಈಗ ಆದ್ಯತೆಯ ಆಧಾರದಲ್ಲಿ ಕಿರು ಅವಧಿಯ ಸಾಲಗಳನ್ನು ಮೊದಲು ಪಾವತಿಸಿ. ಅಂದ್ರೆ ಮೂರು ವರ್ಷಗಳ ತನಕದ ಸಾಲಗಳನ್ನು ಮೊದಲು ಪಾವತಿಸಿ. ಸಾಮಾನ್ಯವಾಗಿ ಕಡಿಮೆ ಅವಧಿಯ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಿರುತ್ತದೆ. ಇನ್ನು ದೀರ್ಘಾವಧಿಯ ಸಾಲಗಳನ್ನು ಪಾವತಿಸಲು ಸಮಯ ಇರುತ್ತದೆ. ಹೀಗಾಗಿ ನಿಯಮಿತವಾಗಿ ಇಎಂಐ ಪಾವತಿಸಿದರೆ ಆಯ್ತು. 

ಎನ್ ಎಸ್ ಸಿ ಬಡ್ಡಿದರ ಹೊಸ ವರ್ಷದಲ್ಲಿ ಹೆಚ್ಚಳವಾಗುತ್ತಾ?

ಖರ್ಚು ತಗ್ಗಿಸಿ, ಉಳಿತಾಯ ಹೆಚ್ಚಿಸಿ
ನಿಮ್ಮ ತಿಂಗಳ ವೆಚ್ಚವನ್ನು ಪರಿಶೀಲಿಸಿ. ಹಾಗೆಯೇ ಯಾವೆಲ್ಲ ಖರ್ಚುಗಳಿಗೆ ಕಡಿವಾಣ ಹಾಕಬಹುದು ಎಂಬುದನ್ನು ಲೆಕ್ಕ ಹಾಕಿ. ಹೋಟೆಲ್ ಊಟ, ವೀಕೆಂಡ್ ಪ್ರವಾಸಗಳು ಹಾಗೂ ಇಂಧನದ ಮೇಲಿನ ವೆಚ್ಚಗಳನ್ನು ಕಡಿತಗೊಳಿಸಿ. ಇದ್ರಿಂದ ನಿಮ್ಮ ಉಳಿತಾಯ ಹೆಚ್ಚಿಸಬಹುದು. ಒಂದು ವೇಳೆ ನೀವು ದುಬಾರಿ ಬಾಡಿಗೆಯ ಮನೆಗಳಲ್ಲಿ ವಾಸಿಸುತ್ತಿದ್ರೆ ಕಡಿಮೆ ಬಾಡಿಗೆಯಿರುವ ಮನೆಗೆ ಶಿಫ್ಟ್ ಆಗಿ. ವೇತನ ಹೆಚ್ಚಳ ಅಥವಾ ಬೋನಸ್ ಹಣವನ್ನು ಸಾಲಗಳ ಪಾವತಿಗೆ ಬಳಸಿ. ಇದ್ರಿಂದ ಸಾಲದ ಅವಧಿ ತಗ್ಗುತ್ತದೆ.

ಸಾಲ ಕ್ರೋಡೀಕರಿಸಿ
ಸಾಲ ಕ್ರೋಡೀಕರಣ ಸಾಲಗಳು ಸಾಲವನ್ನು ತಗ್ಗಿಸುವ ಅತ್ಯುತ್ತಮ ಮಾರ್ಗವಾಗಿವೆ. ಈ ಸಾಲ ಸ್ಥಿರ ಬಡ್ಡಿದರವನ್ನು ಹೊಂದಿರುವ ಸಾಲಗಳಾಗಿದ್ದು, ಅನೇಕ ಸಾಲಗಳನ್ನು ಒಟ್ಟುಗೂಡಿಸಿ ಒಂದೇ ಸಾಲವನ್ನಾಗಿಸುತ್ತದೆ. ಈ ಮೂಲಕ ಇಎಂಐ ಹಾಗೂ ಬಡ್ಡಿದರ ಉಳಿತಾಯಕ್ಕೆ ನೆರವು ನೀಡುತ್ತವೆ. ಉದಾಹರಣೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಸಾಲಕ್ಕೆ ನೀವು ಶೇ.29-42  ವಾರ್ಷಿಕ ಶೇಕಡಾವಾರು ದರ (APR) ಪಾವತಿಸುತ್ತಿರುತ್ತೀರಿ. ನೀವು ಕ್ರೆಡಿಟ್ ಕಾರ್ಡ್ ಸಾಲವನ್ನು ಶೇ.8 ಬಡ್ಡಿ ಹೊಂದಿರುವ ನಿಮ್ಮ ಗೃಹಸಾಲದೊಂದಿಗೆ ಸಂಯೋಜಿಸಿದ್ರೆ ಆಗ APR ಶೇ.30ಕ್ಕೆ ಇಳಿಕೆಯಾಗುತ್ತದೆ. ಆದರೆ, ಸಾಲ ಕ್ರೋಡೀಕರಣ ಸಾಲ ಪಡೆಯುವ ಮುನ್ನ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಶೀಲಿಸಿ.

ಬ್ಯಾಂಕ್ ಲಾಕರ್ ಹೊಂದಿರೋರು ಗಮನಿಸಿ, ಜ.1ರಿಂದ ಹೊಸ ನಿಯಮ ಜಾರಿ

ಬ್ಯಾಲೆನ್ಸ್ ವರ್ಗಾವಣೆ ಕ್ರೆಡಿಟ್ ಕಾರ್ಡ್ ಗಳನ್ನು ಆಯ್ಕೆ ಮಾಡಿ
ಬಡ್ಡಿದರದ ಹೊರೆಯನ್ನು ನೀವು ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ರೆ ಮೊದಲು ಸಾಲವನ್ನು ವೇಗವಾಗಿ ತೀರಿಸಲು ಪ್ರಯತ್ನಿಸಿ. ಆಯ್ದ ಕ್ರೆಡಿಟ್ ಕಾರ್ಡ್ ಗಳಿಗೆ ಮಾತ್ರ ಈ ಸೌಲಭ್ಯವಿದೆ. ಅತ್ಯಧಿಕ ಬಡ್ಡಿ ಹೊಂದಿರುವ ಕಾರ್ಡ್ ನಿಂದ ಕಡಿಮೆ ಬಡ್ಡಿಯ ಬ್ಯಾಲೆನ್ಸ್ ವರ್ಗಾವಣೆ ಕ್ರೆಡಿಟ್ ಕಾರ್ಡ್ ಗೆ ವರ್ಗಾಯಿಸಲು ಅವಕಾಶವಿದೆ. ಕೆಲವು ಬ್ಯಾಂಕ್ ಗಳು ಬ್ಯಾಲೆನ್ಸ್ ವರ್ಗಾವಣೆ ಮೇಲೆ ಶೂನ್ಯ ಶುಲ್ಕ ವಿಧಿಸುತ್ತವೆ. 
 

Follow Us:
Download App:
  • android
  • ios