Asianet Suvarna News Asianet Suvarna News

ಮುಂದಿನ ವರ್ಷ ಬೆಂಗಳೂರು ವಿಮಾನ ನಿಲ್ದಾಣದ ಐಪಿಒ; 30,000 ಕೋಟಿ ರೂ. ಮೌಲ್ಯದ ಷೇರು ಮಾರಾಟಕ್ಕೆ ನಿರ್ಧಾರ?

ಬೆಂಗಳೂರು ವಿಮಾನ ನಿಲ್ದಾಣದ ಐಪಿಒಗೆ ಸಂಬಂಧಿಸಿ ಮಾತುಕತೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ಮುಂದಿನ ವರ್ಷ ಐಪಿಒ ನಡೆಯುವ ನಿರೀಕ್ಷೆಯಿದೆ. 30,000 ಕೋಟಿ ರೂ. (300 ಬಿಲಿಯನ್ ರೂ.) ಮೌಲ್ಯದ ಷೇರು ಮಾರಾಟಕ್ಕೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. 
 

Bangalore airport IPO could be coming next year
Author
First Published Nov 17, 2022, 6:16 PM IST

ಬೆಂಗಳೂರು (ನ.17) : ಫೇರ್​ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಲಿಮಿಟೆಡ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್) ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಯೋಜನೆ ರೂಪಿಸುತ್ತಿರುವ ಬಗ್ಗೆ ವರದಿಯಾಗಿದೆ. ಮುಂದಿನ ವರ್ಷ ಐಪಿಒ ನಡೆಯುವ ಸಾಧ್ಯತೆಯಿದ್ದು, ಈ ಮೂಲಕ  30,000 ಕೋಟಿ ರೂ. (300 ಬಿಲಿಯನ್ ರೂ.) ಮೌಲ್ಯದ ಷೇರು ಮಾರಾಟ ಮಾಡುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಕೆನಡಿಯನ್ ಇನ್ವಿಸ್ಟ್ ಮೆಂಟ್ ಗ್ರೂಪ್ ನ ಭಾರತೀಯ ಅಂಗಸಂಸ್ಥೆಯಾಗಿರುವ ಫೇರ್​ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಲಿಮಿಟೆಡ್ ಮುಂದಿನ ವರ್ಷ ಐಪಿಒ ನಡೆಸುವ ಬಗ್ಗೆ ಸಲಹೆಗಾರರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಫೇರ್​ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಹುತೇಕ ಷೇರುಗಳನ್ನು ಹೊಂದಿದೆ.  ಫೇರ್​ಫ್ಯಾಕ್ಸ್ ಇಂಡಿಯಾ ಬಿಐಎಎಲ್  ನಲ್ಲಿ ಶೇ.54ರಷ್ಟು ಪಾಲು ಹೊಂದಿದೆ. ಐಪಿಒ ಕುರಿತ ಮಾತುಕತೆ ಪ್ರಗತಿಯಲ್ಲಿದ್ದು, ಲಿಸ್ಟಿಂಗ್ ಗೆ ಸಂಬಂಧಿಸಿದ ಮಾಹಿತಿಗಳು ಕೂಡ ಬದಲಾಗುವ ಸಾಧ್ಯತೆಯಿದೆ. ಹೀಗಾಗಿ ಮಾತುಕತೆ ಬಳಿಕ  ಫೇರ್​ಫ್ಯಾಕ್ಸ್ ಇಂಡಿಯಾ ಬೆಂಗಳೂರು ಅಮತಾರಾಷ್ಟ್ರೀಯ ವಿಮಾನ ನಿಲ್ದಾಣದ ಷೇರುಗಳ ಮಾರಾಟದ ನಿರ್ಧಾರ ಕೈಬಿಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಸಂಬಂಧ ಬಿಐಎಎಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫೇರ್​ಫ್ಯಾಕ್ಸ್ ಇಂಡಿಯಾ ಕೂಡ ಕರೆಗಳು ಹಾಗೂ ಇ-ಮೇಲ್ ಗಳಿಗೆ ಪ್ರತಿಕ್ರಿಯಿಸಿಲ್ಲ. 
ಫೇರ್​ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್  2017ರಲ್ಲಿ ಮೊದಲ ಬಾರಿಗೆ ಬಿಐಎಎಲ್ (BIAL) ಷೇರುಗಳನ್ನು (Shares) ಖರೀದಿಸಿತ್ತು. ಆ ಬಳಿಕ ಷೇರುಗಳ ಪ್ರಮಾಣವನ್ನು ಶೇ.54 ಕ್ಕೆ ಹೆಚ್ಚಿಸಿಕೊಂಡಿತು ಎಂದು ಬಿಐಎಎಲ್  (BIAL) ವೆಬ್ ಸೈಟ್ ತಿಳಿಸಿದೆ. ಸೈಮೆನ್ಸ್ ಪ್ರಾಜೆಕ್ಟ್ ವೆಂಚರ್ಸ್ (Siemens Projects Ventures) ಬಿಐಎಎಲ್ ನಲ್ಲಿ ಶೇ.20ರಷ್ಟು ಷೇರುಗಳನ್ನು ಹೊಂದಿದೆ. ಇನ್ನು ಕರ್ನಾಟಕ ರಾಜ್ಯ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿ. ಶೇ.13ರಷ್ಟು ಷೇರುಗಳನ್ನು ಹೊಂದಿದೆ. ಇನ್ನು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಶೇ. 13ರಷ್ಟು ಷೇರುಗಳನ್ನು ಹೊಂದಿದೆ. 

ಮುಂಬೈ ಷೇರು ಮಾರುಕಟ್ಟೆಲ್ಲಿ (BSE) ಆಫರಿಂಗ್ (Offering) 3,000 ಕೋಟಿ ರೂ.ನಿಂದ 4,000 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಐಪಿಒನಲ್ಲಿ (IPO) ಶೇ.75ರಷ್ಟು ಪ್ರಾಥಮಿಕ ಷೇರುಗಳು (Primary Shares) ಹಾಗೂ ಉಳಿದ ಷೇರುಗಳು (Shares) ಇರಲಿವೆ ಎಂದು ವರದಿ ತಿಳಿಸಿದೆ. 

ಎಟಿಎಂನಿಂದ ಡ್ಯಾಮೇಜ್ ಆಗಿರುವ ನೋಟು ಸಿಕ್ಕಿದ್ಯಾ? ಡೋಂಟ್ ವರಿ, ಹೊಸ ನೋಟು ಪಡೆಯಲು ಹೀಗೆ ಮಾಡಿ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2017ರಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಿದ್ದು, ಇದರ ಮೂಲಕ ಕಳೆದ ಜೂನ್ ತನಕ 25 ಕೋಟಿಗೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ. ದೇಶಾದ್ಯಂತ 61 ಪ್ರದೇಶಗಳಿಗೆ ಹಾಗೂ 14 ವಿದೇಶಿ ಸ್ಥಳಗಳಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳು ಹಾರಾಟ ನಡೆಸುತ್ತವೆ. 

ಈ ಐದು ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರಕ್ಕೆ ಸಿಗುತ್ತೆ ಐದು ಲಕ್ಷ ರೂ. ವೈಯಕ್ತಿಕ ಸಾಲ!

ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕೆಂಪೇಗೌಡ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ (Terminal) ಉದ್ಘಾಟಿಸಿದ್ದರು. ವಿಮಾನ ನಿಲ್ದಾಣದ ಮೊದಲ ಟರ್ಮಿನಲ್‌ 2008ರಲ್ಲಿ ಲೋಕಾರ್ಪಣೆಗೊಡಿದ್ದು, 1.50 ಲಕ್ಷ ಚದರ ಮೀ.ಇದ್ದು ವಾರ್ಷಿಕ 2 ಕೋಟಿ ಪ್ರಯಾಣಿಕರ (Passengers) ಸಂಚಾರಕ್ಕೆ ವ್ಯವಸ್ಥೆ ಇತ್ತು. ಆದರೆ, ಪ್ರಯಾಣಿಕರ ದಟ್ಟಣೆ 1.6 ಕೋಟಿಗೆ ತಲುಪಿದ್ದು, ಪ್ರಯಾಣಿಕರ ಚೆಕ್‌ಇನ್‌, ಇಮಿಗ್ರೆಶನ್‌, ಭದ್ರತಾ ತಪಾಸಣೆ, ಬ್ಯಾಗೇಜ್‌ ಹೀಗೆ ನಾನಾ ಪ್ರಕ್ರಿಯೆಗಳು ವಿಳಂಬವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. 

Follow Us:
Download App:
  • android
  • ios