ಈ ಐದು ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರಕ್ಕೆ ಸಿಗುತ್ತೆ ಐದು ಲಕ್ಷ ರೂ. ವೈಯಕ್ತಿಕ ಸಾಲ!

ಆರ್ಥಿಕ ಸಂಕಷ್ಟ ಎದುರಾದಾಗ ಸಾಲ ಮಾಡೋದು ಅನಿವಾರ್ಯ. ಈಗಂತೂ ಅನೇಕ ಬ್ಯಾಂಕ್ ಗಳು ವೈಯಕ್ತಿಕ ಸಾಲ ನೀಡುತ್ತವೆ. ಹಾಗಂತ ವೈಯಕ್ತಿಕ ಸಾಲವನ್ನು ಯಾವುದೇ ವಿಚಾರಣೆ ನಡೆಸದೆ ಸುಖಾಸುಮ್ಮನೆ ಯಾವುದೋ ಒಂದು ಬ್ಯಾಂಕಿನಿಂದ ಪಡೆಯಬಾರದು. ಬದಲಿಗೆ ಸಾಲ ಪಡೆಯುವ ಮುನ್ನ ವಿವಿಧ ಬ್ಯಾಂಕ್ ಗಳಲ್ಲಿ ವೈಯಕ್ತಿಕ ಸಾಲಕ್ಕೆ ಎಷ್ಟು ಬಡ್ಡಿದರವಿದೆ ಎಂಬುದನ್ನು ಪರಿಶೀಲಿಸಿ ಆ ಬಳಿಕ ತೀರ್ಮಾನ ಕೈಗೊಳ್ಳಬೇಕು. 

These 5 banks are offering lowest interest rate on Rs 5 lakh personal loan check list here

Business Desk: ಕೆಲವೊಮ್ಮೆ ಹಣದ ತುರ್ತು ಅಗತ್ಯ ಎದುರಾಗುತ್ತದೆ. ಆಗ ಸಾಲ ಮಾಡೋದು ಬಿಟ್ಟು ಬೇರೆ ಯಾವುದೇ ಮಾರ್ಗ ಉಳಿದಿರೋದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವರು ಹಣದ ಅಗತ್ಯ ಉಂಟಾದಾಗ ಕ್ರೆಡಿಟ್ ಕಾರ್ಡ್ ಸಾಲ ತೆಗೆದುಕೊಳ್ಳುತ್ತಾರೆ ಇಲ್ಲವೇ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಆ ಮೇಲೆ ನಿಗದಿತ ಸಮಯಕ್ಕೆ ಬಿಲ್ ಕಟ್ಟಲಾಗದೆ ಪರದಾಡುತ್ತಾರೆ. ಕ್ರೆಡಿಟ್ ಕಾರ್ಡ್ ಸಾಲಕ್ಕಿಂತ ವೈಯಕ್ತಿಕ ಸಾಲ ಉತ್ತಮ ಆಯ್ಕೆ ಎನ್ನುವುದು ತಜ್ಞರ ಅಭಿಪ್ರಾಯ. ಮನೆ ದುರಸ್ತಿ, ಶೈಕ್ಷಣಿಕ ವೆಚ್ಚ, ಮದುವೆ ಮುಂತಾದ ಖರ್ಚುಗಳನ್ನು ನಿಭಾಯಿಸಲು ವೈಯಕ್ತಿಕ ಸಾಲ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಿರುವ ಕಾರಣ ಆರ್ ಬಿಐ ರೆಪೋ ದರದಲ್ಲಿ ಭಾರೀ ಹೆಚ್ಚಳ ಮಾಡಿದೆ. ಪರಿಣಾಮ ಬ್ಯಾಂಕ್ ಗಳು ಕೂಡ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಉದಾಹರಣೆಗೆ ಇತ್ತೀಚೆಗಷ್ಟೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸಾಲದ ಮೇಲಿನ ಕನಿಷ್ಠ ಬಡ್ಡಿದರ ಅಥವಾ ಎಂಸಿಎಲ್ ಆರ್ ಅನ್ನು 10-15 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವ ಮುನ್ನ ಯಾವ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿದರವಿದೆ ಎಂದು ಪರಿಶೀಲಿಸೋದು ಅಗತ್ಯ. ಸಾಲ ಪಡೆಯುವ ಮುನ್ನ ಒಂದಿಷ್ಟು ಬ್ಯಾಂಕ್ ಗಳ ಬಡ್ಡಿದರವನ್ನು ತುಲನೆ ಮಾಡಿ ಆ ಬಳಿಕ ಬ್ಯಾಂಕ್ ಆಯ್ಕೆ ಮಾಡಿ. 5 ಲಕ್ಷ ರೂ. ವೈಯಕ್ತಿಕ ಸಾಲದ ಮೇಲೆ ಕಡಿಮೆ ಬಡ್ಡಿದರ ನೀಡುವ ಕೆಲವು ಬ್ಯಾಂಕ್ ಗಳ ಮಾಹಿತಿ ಇಲ್ಲಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ 
ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಐದು ವರ್ಷಗಳ ಮರುಪಾವತಿ ಅವಧಿ ಹೊಂದಿರುವ 5ಲಕ್ಷ ರೂ. ವೈಯಕ್ತಿಕ ಸಾಲಕ್ಕೆ ಅತೀ ಕಡಿಮೆ ಬಡ್ಡಿದರವಾದ ಶೇ.8.9 ವಿಧಿಸುತ್ತಿದೆ. ಐದು ವರ್ಷಗಳ ಅವಧಿಯ ಐದು ಲಕ್ಷ ರೂ. ಮೊತ್ತದ ಸಾಲಕ್ಕೆ 10,355ರೂ. ಇಎಂಐ (EMI)ಬರುತ್ತದೆ. 

FD ಇಡುವ ಮುನ್ನ ಸಾಲ, ತೆರಿಗೆ ಬಗ್ಗೆ ತಿಳಿದ್ಕೊಳ್ಳಿ, ಸುಮ್ಮ ಸುಮ್ಮನೆ ಠೇವಣಿ ಇಡ್ಬೇಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಐದು ವರ್ಷಗಳ ಅವಧಿಯ 5ಲಕ್ಷ ರೂ. ಮೊತ್ತದ ವೈಯಕ್ತಿಕ ಸಾಲಕ್ಕೆ ಶೇ. 9.8  ಬಡ್ಡಿ ವಿಧಿಸುತ್ತದೆ. ಐದು ವರ್ಷಗಳ ಅವಧಿಯ ಈ ಸಾಲಕ್ಕೆ ಪ್ರತಿ ತಿಂಗಳು 10,574ರೂ. ಇಎಂಐ (EMI) ಪಾವತಿಸಬೇಕಾಗುತ್ತದೆ. 

ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್ (Yes Bank) ಐದು ವರ್ಷಗಳ ಅವಧಿಯ ಐದು ಲಕ್ಷ ರೂ. ಸಾಲಕ್ಕೆ ಶೇ.10ರಷ್ಟು ಬಡ್ಡಿ ವಿಧಿಸುತ್ತದೆ. ಈ ಸಾಲಕ್ಕೆ 10,624ರೂ. ಇಎಂಐ ಪಾವತಿಸಬೇಕಾಗುತ್ತದೆ.

ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾ (Bank of Baroda) ಐದು ವರ್ಷಗಳ ಅವಧಿಯ ಐದು ಲಕ್ಷ ರೂ. ಮೊತ್ತದ ಸಾಲಕ್ಕೆ  10,673ರೂ. ಇಎಂಐ ನಿಗದಿಪಡಿಸಿದ್ದು, ಬಡ್ಡಿದರ ಶೇ.10.2ರಷ್ಟಿದೆ. 

ಕೋಟಕ್ ಮಹೀಂದ್ರಾ ಬ್ಯಾಂಕ್
ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಐದು ಲಕ್ಷ ರೂ. ಸಾಲಕ್ಕೆ ಶೇ.10.25 ಬಡ್ಡಿ ವಿಧಿಸುತ್ತದೆ. ಐದು ವರ್ಷಗಳ ಅವಧಿಯ ಈ ಸಾಲಕ್ಕೆ ಪ್ರತಿ ತಿಂಗಳು 10,685ರೂ. ಇಎಂಐ ಪಾವತಿಸಬೇಕು. 

ಚಿಲ್ಲರೆ ವಹಿವಾಟಿನಲ್ಲಿ ಡಿಜಿಟಲ್ ಕರೆನ್ಸಿ ಬಳಕೆಗೆ ಎಸ್ ಬಿಐ, ಐಸಿಐಸಿಐ ಸೇರಿ 5 ಬ್ಯಾಂಕ್ ಗಳು ಆಯ್ಕೆ

ಜಂಟಿ ಸಾಲ ಉತ್ತಮ
ವೈಯಕ್ತಿಕ ಸಾಲವನ್ನು ಒಬ್ಬರ ಹೆಸರಲ್ಲೇ ಪಡೆಯುವ ಬದಲು ಇಬ್ಬರು ಜಂಟಿಯಾಗಿ ಪಡೆಯೋದು ಉತ್ತಮ. ವೈಯಕ್ತಿಕ ಸಾಲಕ್ಕೆ ಜಂಟಿಯಾಗಿ ಅರ್ಜಿ ಸಲ್ಲಿಸಿದಾಗ ಸಿಗುವ ಸಾಧ್ಯತೆ ಜಾಸ್ತಿ. ಏಕೆಂದ್ರೆ ಸಾಲ ಮರುಪಾವತಿ ಜವಾಬ್ದಾರಿ ಇಬ್ಬರ ಮೇಲೂ ಇರುವ ಕಾರಣ ಸುಲಭವಾಗಿ ಸಾಲ ಸಿಗುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲದಿದ್ರೂ ನಿಮ್ಮ ಸಹ ಅರ್ಜಿದಾರರ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ರೆ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ. 

Latest Videos
Follow Us:
Download App:
  • android
  • ios