Asianet Suvarna News Asianet Suvarna News

ಬ್ಯಾಂಕ್ ಎಫ್ ಡಿಯಿಂದ ಅಧಿಕ ರಿಟರ್ನ್ಸ್ ಗಳಿಸ್ಬೇಕಾ? ಹಾಗಾದ್ರೆ ಲ್ಯಾಡರಿಂಗ್ ವಿಧಾನ ಅನುಸರಿಸಿ

ಬ್ಯಾಂಕ್ ಎಫ್ ಡಿಯಿಂದ ಉತ್ತಮ ರಿಟರ್ನ್ಸ್ ಗಳಿಸಲು ಲ್ಯಾಡರಿಂಗ್ ವಿಧಾನ ಅಳವಡಿಸಿಕೊಳ್ಳುವುದು ಉತ್ತಮ. ಇದರಿಂದ ಬಡ್ಡಿದರ ಹೆಚ್ಚಿದ್ದಂತೆ ನೀವು ಅದರ ಪ್ರಯೋಜನ ಪಡೆದುಕೊಳ್ಳಬಹುದು. 

Explained What Is Bank FD Laddering and How Can It Increase Your Returns anu
Author
First Published Nov 25, 2023, 5:08 PM IST

Business Desk: ಉಳಿತಾಯಕ್ಕಿರುವ ಅತ್ಯುತ್ತಮ ಮಾರ್ಗಗಳಲ್ಲಿ ಸ್ಥಿರ ಠೇವಣಿ (ಎಫ್ ಡಿ) ಕೂಡ ಒಂದು. ಬ್ಯಾಂಕ್ ಸ್ಥಿರ ಠೇವಣಿಯಲ್ಲಿ ನೀವು ನಿರ್ದಿಷ್ಟ ಅವಧಿಗೆ ಹಣ ಹೂಡಿಕೆ ಮಾಡಿದರೆ, ಆರಂಭದಲ್ಲಿ ನೀವು ನಿಗದಿತ ಬಡ್ಡಿದರಕ್ಕೆ ಹೂಡಿಕೆ ಮಾಡಿರುತ್ತೀರಿ. ಈ ಬಡ್ಡಿದರ ಎಫ್ ಡಿ ಅವಧಿ ಮುಗಿಯುವ ತನಕ ಒಂದೇ ಇರುತ್ತದೆ. ಆದರೆ, ನೀವು ಬ್ಯಾಂಕ್ ಎಫ್ ಡಿಯಲ್ಲಿ ನಿಗದಿತ ಬಡ್ಡಿದರಕ್ಕೆ ಠೇವಣಿಯಿಟ್ಟ ಬಳಿಕ ಬಡ್ಡಿದರದಲ್ಲಿ ಏರಿಕೆಯಾದ್ರೆ ಎಷ್ಟು ಬೇಸರವಾಗುತ್ತದೆ ಅಲ್ವಾ? ಎಫ್ ಡಿಯಲ್ಲಿ ಹೂಡಿಕೆ ಮಾಡುವ ಬಹುತೇಕರಿಗೆ ಇಂಥ ಅನುಭವ ಆಗಿರುತ್ತದೆ. ಇಂಥ ಸಮಯದಲ್ಲಿ ತಡವಾಗಿ ಎಫ್ ಡಿಯಲ್ಲಿ ಹೂಡಿಕೆ ಮಾಡಿದ್ರೆ ಅಧಿಕ ರಿಟರ್ನ್ಸ್ ಪಡೆಯಬಹುದಿತ್ತು ಎಂಬ ಯೋಚನೆ ಕೂಡ ಮೂಡುತ್ತದೆ. ಹಾಗಾದ್ರೆ ಎಫ್ ಡಿಯಲ್ಲಿ ಹೂಡಿಕೆ ಮಾಡಿದ ಬಳಿಕ ಬಡ್ಡಿದರ ಹೆಚ್ಚಳವಾದ್ರೆ ರಿಟರ್ನ್ಸ್ ಹೆಚ್ಚಿಸಿಕೊಳ್ಳಲು ಏನ್ ಮಾಡಬಹುದು? ಅದಕ್ಕಿರುವ ಉತ್ತರ ಎಫ್ ಡಿ ಲ್ಯಾಡರಿಂಗ್. ಹಾಗಾದ್ರೆ ಎಫ್ ಡಿ ಲ್ಯಾಡರಿಂಗ್ ಅಂದ್ರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಎಫ್ ಡಿ ಲ್ಯಾಡರಿಂಗ್ ಅಂದ್ರೇನು?
ಹೆಸರೇ ಸೂಚಿಸುವಂತೆ ಎಫ್ ಡಿಲ್ಯಾಡರಿಂಗ್ ಅಂದ್ರೆ ಹೂಡಿಕೆದಾರ ಎಫ್ ಡಿಯಿಂದ ಉತ್ತಮ ರಿಟರ್ನ್ಸ್ ಪಡೆಯಲು ಏಣಿಯೊಂದನ್ನು ನಿರ್ಮಿಸಿಕೊಳ್ಳುವುದು. ಇದನ್ನು ಮಾಡೋದು ಹೇಗೆ? ದೀರ್ಘಾವಧಿಯ ಒಂದೇ ಎಫ್ ಡಿಯಲ್ಲಿ ಹೂಡಿಕೆ ಮಾಡುವ ಬದಲು ಅನೇಕ ಎಫ್ ಡಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಇದನ್ನು ಸಾಧಿಸಬಹುದು. ಎಫ್ ಡಿ ಲ್ಯಾಡರಿಂಗ್ ನಲ್ಲಿ ನೀವು ಎಲ್ಲ ಹಣವನ್ನು ಒಂದೇ ಬಡ್ಡಿದರದಲ್ಲಿ ಹೂಡಿಕೆ ಮಾಡಲು ಬದ್ಧರಾಗಬೇಡಿ. ಅಂದರೆ ವಿವಿಧ ಮೊತ್ತಗಳನ್ನು ವಿವಿಧ ಅವಧಿಗೆ ವಿವಿಧ ಬಡ್ಡಿದರದಲ್ಲಿ ಹೂಡಿಕೆ ಮಾಡಿ. ಇದನ್ನು ಉದಾಹರಣೆ ಸಹಿತ ನೋಡೋಣ. 

ಮ್ಯೂಚುವಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡೋ ಬಹುತೇಕರಿಗೆ ತಿಳಿದಿಲ್ಲ ಈ 5 SIPs;ಇವುಗಳ ವಿಶೇಷತೆಯೇನು?

ಉದಾಹರಣೆಗೆ ನೀವು 6ಲಕ್ಷ ರೂ. ಹೂಡಿಕೆ ಮಾಡಲು ಬಯಸಿದ್ದೀರಾ. ಹಾಗಾದ್ರೆ ಮೊದಲಿಗೆ ಈ 6ಲಕ್ಷ ರೂ. ವನ್ನು ಒಂದೇ ಎಫ್ ಡಿಯಲ್ಲಿ ಹೂಡಿಕೆ ಮಾಡ್ಬೇಡಿ. ಬದಲಿಗೆ ಅದನ್ನು ವಿಂಗಡಿಸಿ ಬೇರೆ ಬೇರೆ ಅವಧಿಗೆ ಹೂಡಿಕೆ ಮಾಡಿ.6ಲಕ್ಷ ರೂ. ಅನ್ನು ತಲಾ 2ಲಕ್ಷ ರೂ. ಆಗಿ ಮೂರು ಭಾಗ ಮಾಡಿಕೊಳ್ಳಿ. ಈಗ 2ಲಕ್ಷ ರೂ. ಅನ್ನು ಶೇ.6 ಬಡ್ಡಿದರಕ್ಕೆ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿ. ಮತ್ತೆ 2ಲಕ್ಷ ರೂ. ಅನ್ನು ಶೇ.6.5 ಬಡ್ಡಿದರಕ್ಕೆ 2 ವರ್ಷಗಳ ಅವಧಿಗೆ ಹೂಡಿಕೆ ಮಾಡಿ. ಉಳಿದ 2ಲಕ್ಷ ರೂ. ಅನ್ನು ಶೇ.7.5 ಬಡ್ಡಿದರಕ್ಕೆ 3 ವರ್ಷಗಳ ಅವಧಿಗೆ ಹೂಡಿಕೆ ಮಾಡಿ.

ಇನ್ನು ಎರಡನೆಯದಾಗಿ ಪ್ರತಿ ವರ್ಷ ಮೆಚ್ಯೂರ್ ಆದ ಎಫ್ ಡಿಯನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಮರುಹೂಡಿಕೆ ಮಾಡಿ. ಉದಾಹರಣೆಗೆ ಒಂದು ವರ್ಷದ ಬಳಿಕ ಮೊದಲ ಎಫ್ ಡಿಯಿಂದ ಬಂದ ರಿಟರ್ನ್ಸ್ ಅನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಮರು ಹೂಡಿಕೆ ಮಾಡಿ. ಮತ್ತೆ ಎರಡು ವರ್ಷದ ಬಳಿಕ ಎರಡನೇ ಎಫ್ ಡಿ ಮೆಚ್ಯುರ್ ಆದ್ರೆ ಅದನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಹೂಡಿಕೆ ಮಾಡಿ. ಹೀಗೆ ಮಾಡೋದ್ರಿಂದ ಉತ್ತಮ ರಿಟರ್ನ್ಸ್ ಗಳಿಸಬಹುದು.

ನೀವು ಹೊಸ ಕಾರಿಗೆ ವಿಮೆ ಖರೀದಿಸುತ್ತಿದ್ರೆ 'ನೋ ಕ್ಲೇಮ್ ಬೋನಸ್' ಬಗ್ಗೆ ತಿಳಿಯಲೇಬೇಕು, ಯಾಕೆ ಗೊತ್ತಾ?

ಎಫ್ ಡಿ ಲ್ಯಾಡರಿಂಗ್ ಪ್ರಯೋಜನಗಳು
ಉತ್ತಮ ರಿಟರ್ನ್ಸ್ : ಉತ್ತಮ ಎಫ್ ಡಿ ದರಗಳಿಗಾಗಿ ನೀವು ಬೇರೆ ಬೇರೆ ಬ್ಯಾಂಕುಗಳಲ್ಲಿ ಹುಡುಕಾಟ ನಡೆಸಬಹುದು. ಹಾಗೆಯೇ ಪ್ರತಿ ವರ್ಷ ಮೆಚ್ಯೂರ್ ಆದ ಎಫ್ ಡಿಯನ್ನು ಮರುಹೂಡಿಕೆ ಮಾಡುವ ಮೂಲಕ ಉತ್ತಮ ರಿಟರ್ನ್ಸ್ ಕೂಡ ಗಳಿಸಬಹುದು. 

ಹೆಚ್ಚಿನ ಲಿಕ್ವಿಡಿಟಿ: ಎಫ್ ಡಿ ಲ್ಯಾಡರಿಂಗ್ ವಿಧಾನದಿಂದ ಪ್ರತಿವರ್ಷ ಒಂದಲ್ಲ ಒಂದು ಎಫ್ ಡಿ ಮೆಚ್ಯೂರ್ ಆಗುತ್ತದೆ. ಇದರಿಂದ ಉತ್ತಮ ಲಿಕ್ವಿಡಿಟಿ ಸಿಗುತ್ತದೆ. ಎಫ್ ಡಿ ಲ್ಯಾಡರಿಂಗ್ ವಿಧಾನ ಅನುಸರಿಸದಿದ್ರೆ ನಿಮ್ಮ ಹಣ ಅನೇಕ ವರ್ಷಗಳ ಕಾಲ ಲಾಕ್ ಆಗಿರುತ್ತದೆ. ಅವಧಿಗೂ ಮುನ್ನ ಎಫ್ ಡಿಯಲ್ಲಿರುವ ಹಣ ಹಿಂಪಡೆಯಲು ಅವಕಾಶವಿದೆ. ಆದರೆ, ಅದಕ್ಕೆ ನೀವು ದಂಡ ಪಾವತಿಸಬೇಕಾಗುತ್ತದೆ. 

ಹೆಚ್ಚಿನ ಸುರಕ್ಷತೆ: ನೀವು ಲ್ಯಾಡರಿಂಗ್ ವಿಧಾನದ ಮೂಲಕ ನಿಮ್ಮ ಎಫ್ ಡಿಗಳನ್ನು ವಿವಿಧ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಬಹುದು. ಇದ್ರಿಂದ ಹಣ ಒಂದೇ ಬ್ಯಾಂಕ್ ಅಥವಾ ಎನ್ ಬಿಎಫ್ ಸಿಯಲ್ಲಿಡುವ ಭಯವಿಲ್ಲ.


 

Follow Us:
Download App:
  • android
  • ios