Asianet Suvarna News Asianet Suvarna News

ವಿದೇಶದಲ್ಲಿ ಓದುವ ಮೊದಲು Education Loan ಬಗ್ಗೆ ತಿಳಿದ್ಕೊಳ್ಳಿ

ಬಡವರು, ಮಧ್ಯಮ ವರ್ಗದ ಜನರಿಗೆ ಶಿಕ್ಷಣ ದುಬಾರಿಯಾಗಿದೆ. ಅದ್ರಲ್ಲೂ ಬೇರೆ ದೇಶದಲ್ಲಿ ಅಧ್ಯಯನ ನಡೆಸೋದು ಕಷ್ಟಸಾಧ್ಯ. ಹಾಗಿರುವಾಗ ಮಕ್ಕಳು ಶಿಕ್ಷಣಕ್ಕಾಗಿ ಸಾಲ ಮಾಡ್ತಾರೆ. ಸಾಲ ಮಾಡುವ ಮೊದಲು ಕೆಲ ವಿಷ್ಯಗಳನ್ನು ಅವರು ತಿಳಿದಿರಬೇಕು. 
 

Avail education loan if interested to study in foreign universities
Author
Bangalore, First Published Jun 28, 2022, 12:23 PM IST

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಉನ್ನತ ಶಿಕ್ಷಣ (Higher Education)  ಕೈಗೆಟುಕದ ನಕ್ಷತ್ರವಾಗಿದೆ. ಉನ್ನತ ಶಿಕ್ಷಣದ ವೆಚ್ಚ (Cost) ವನ್ನು ಭರಿಸೋದು ಸುಲಭದ ಮಾತಲ್ಲ. ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಮಕ್ಕಳು ಸಾಮಾನ್ಯವಾಗಿ  ಎಜ್ಯುಕೇಷನ್ ಲೋನ್ ಮೊರೆ ಹೋಗ್ತಾರೆ. ಶಿಕ್ಷಣ (Education) ಕ್ಕಾಗಿ ಸಾಲ ಪಡೆದು ಅಧ್ಯಯನ (Study) ಮುಂದುವರೆಸುವ ಮಕ್ಕಳ (Children) ಸಂಖ್ಯೆ ಸಾಕಷ್ಟಿದೆ. ಮಕ್ಕಳು ಉನ್ನತ ಅಧ್ಯಯನದ ಕನಸನ್ನು ನನಸು ಮಾಡಿಕೊಳ್ಳಲು ಎಜ್ಯುಕೇಷನ್ ಲೋನ್ ಸಹಕಾರಿಯಾಗಿದೆ.

ಶಿಕ್ಷಣ ಪೈಪೋಟಿಯಾಗಿದೆ. ಇಲ್ಲಿ ಅತಿ ಹೆಚ್ಚು ಸ್ಪರ್ಧೆ (Competition) ಯಿದೆ. ಉತ್ತಮ ಉದ್ಯೋಗ ಪಡೆಯಬೇಕೆಂದ್ರೆ ಉನ್ನತ ಶಿಕ್ಷಣ ಪಡೆಯುವುದು ಬಹುಮುಖ್ಯವಾಗಿದೆ. ಆದರೆ ಉನ್ನತ ಶಿಕ್ಷಣಕ್ಕಾಗಿ ವಿದೇಶ (Abroad) ಕ್ಕೆ ಹೋಗುವುದು ಪ್ರತಿಯೊಬ್ಬರ ಬಜೆಟ್‌ (Budget) ನಲ್ಲಿ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಸಾಲದ ಮಹತ್ವ ಹೆಚ್ಚುತ್ತದೆ. ಉನ್ನತ ಶಿಕ್ಷಣದ ಲಾಭ ಪಡೆಯಲು ಅನೇಕ ವಿದ್ಯಾರ್ಥಿಗಳ ಮುಂದೆ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಬರುತ್ತದೆ. ನಿಮ್ಮ ಮನೆಯಲ್ಲಿಯೂ ಉತ್ತಮ ಶಿಕ್ಷಣಕ್ಕಾಗಿ ಯಾರಾದರೂ ಶಿಕ್ಷಣ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, ಅದಕ್ಕೂ ಮೊದಲು ಅದಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯ. 

ಭಾರತದಲ್ಲಿ ಎಜ್ಯುಕೇಷನ್ ಲೋನ್ ಗೆ ಸಂಬಂಧಿಸಿದಂತೆ ಕೆಲ ನಿಯಮಗಳಿವೆ. ಹಾಗೆಯೇ ಅದನ್ನು ವಿಭಾಗಿಸಲಾಗಿದೆ.  ಭಾರತದಲ್ಲಿ ಸಾಮಾನ್ಯವಾಗಿ 4 ವಿಧದ ವಿದ್ಯಾರ್ಥಿ ಸಾಲ ಸಿಗುತ್ತದೆ. 

ಆನ್‌ಲೈನ್‌ ಕೆಲಸ ಮಾಡುತ್ತಾ ಕೋಟ್ಯಾಧಿಪತಿಯಾದ ಹಳ್ಳಿಯ ಬಡ ಯುವಕ!

ವೃತ್ತಿ ಶಿಕ್ಷಣ ಸಾಲ :  ಒಬ್ಬ ವಿದ್ಯಾರ್ಥಿಯು ಸರ್ಕಾರಿ ಸಂಸ್ಥೆಯಿಂದ ಶಿಕ್ಷಣದ ಮೂಲಕ ವೃತ್ತಿಜೀವನವನ್ನು ಶುರು ಮಾಡಲು ಬಯಸಿದ್ದರೆ ಅವನು ಇದಕ್ಕಾಗಿ ವೃತ್ತಿ ಶಿಕ್ಷಣ ಸಾಲವನ್ನು ತೆಗೆದುಕೊಳ್ಳಬಹುದು.

ವೃತ್ತಿಪರ ಪದವೀಧರ ವಿದ್ಯಾರ್ಥಿ ಸಾಲ :  ಪದವಿ ಮುಗಿದ ನಂತರ, ವಿದ್ಯಾರ್ಥಿಗಳು ತಮ್ಮ ಮುಂದಿನ ಅಧ್ಯಯನವನ್ನು ಮುಂದುವರಿಸಲು ಬಯಸಿದಾಗ, ಇದಕ್ಕಾಗಿ ಅವರು ವೃತ್ತಿಪರ ಪದವೀಧರ ವಿದ್ಯಾರ್ಥಿ ಸಾಲವನ್ನು ಪಡೆಯಬಹುದು. 

ಪೋಷಕರ ಸಾಲ : ಪೋಷಕರು ತಮ್ಮ ಮಕ್ಕಳ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಲವನ್ನು ತೆಗೆದುಕೊಂಡಾಗ ಅದನ್ನು ಪೋಷಕ ಸಾಲ ಎಂದು ಕರೆಯಲಾಗುತ್ತದೆ. 

ಪದವಿಪೂರ್ವ ಸಾಲ : ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ, ದೇಶ ಮತ್ತು ವಿದೇಶಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಲು ಬಯಸಿದರೆ, ಇದಕ್ಕಾಗಿ ಪದವಿಪೂರ್ವ ಸಾಲದ ಪ್ರಯೋಜನವನ್ನು ಪಡೆಯಬಹುದು.

ಸರ್ಕಾರಿ ಶಾಲೆ ಶಿಕ್ಷಕಿಯ ಒಂದೊಳ್ಳೆ ಕೆಲ್ಸ ವೈರಲ್

ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು  ಈ ವಿಷಯವನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ತಿಳಿದುಕೊಳ್ಳಬೇಕು : 
ಮೊದಲು ನಿಮಗೆ ಯಾವ ರೀತಿಯ ಸಾಲ ಬೇಕು ಎಂಬುದನ್ನು ನಿರ್ಧರಿಸಬೇಕು. ನಂತ್ರ ಸಾಲವನ್ನು ತೆಗೆದುಕೊಳ್ಳಲು ಉತ್ತಮ ಬ್ಯಾಂಕ್ ಅಥವಾ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರ ನಂತರ ನೀವು ವಿದ್ಯಾರ್ಥಿ ಸಾಲಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಬ್ಯಾಂಕ್‌ಗಳು ನೀಡುವ ಬಡ್ಡಿ ದರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.  ಹಾಗೆಯೇ ಬ್ಯಾಂಕ್ ಯಾವ ವರ್ಷದಿಂದ ಸಾಲ ತೀರಿಸುವ ನಿಯಮ ವಿಧಿಸುತ್ತದೆ ಎಂಬುದನ್ನು ತಿಳಿಯಬೇಕು. ಮೂರ್ನಾಲ್ಕು ಬ್ಯಾಂಕ್ ಅಥವಾ ಸಂಸ್ಥೆಯನ್ನು ನೀವು ವಿಚಾರಿಸಬಹುದು. ಯಾವ ಬ್ಯಾಂಕ್ ನಲ್ಲಿ ಬಡ್ಡಿ ಕಡಿಮೆಯಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನೀವು ಸಂಪೂರ್ಣವಾಗಿ ತೃಪ್ತರಾದಾಗ ಹಾಗೂ ಎಜ್ಯುಕೇಷನ್ ಲೋನ್ ಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ಪಡೆದ ಮೇಲೆಯೇ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತ್ರ ಬ್ಯಾಂಕ್ ನೀಡುವ ಡಾಕ್ಯುಮೆಂಟ್ ಗಳನ್ನು ಸರಿಯಾಗಿ ಓದಿರಬೇಕು. ಯಾಕೆಂದ್ರೆ ಅನೇಕ ಬ್ಯಾಂಕ್ ಗಳು ಎಜ್ಯುಕೇಷನ್ ಕೊನೆ ಹಂತದಲ್ಲಿರುವಾಗ್ಲೇ ಸಾಲ ತೀರಿಸಲು ಒತ್ತಡ ಹೇರುತ್ತವೆ. ನಿಮಗೆ ಸರಿಯಾಗಿ ನಿಯಮ ತಿಳಿದಿದ್ದರೆ ನೀವು ಬ್ಯಾಂಕ್ ವಿರುದ್ಧ ಕೋರ್ಟ್ ಮೊರೆ ಹೋಗ್ಬಹುದು. 
 

Follow Us:
Download App:
  • android
  • ios