ಏರ್ ಇಂಡಿಯಾ ವಿಮಾನದಲ್ಲಿ ಶ್ವಾನಕ್ಕೆ ನಿರಾಕರಣೆ: ಬೆಂಗಳೂರು ಕುಟುಂಬದ ವಿಡಿಯೋ ವೈರಲ್
ನಿಯಮಗಳ ಪ್ರಕಾರ, ಆಕೆಯನ್ನು ವಿಮಾನದ ಕ್ಯಾಬಿನ್ ಒಳಗೆ ಇಡಬಹುದು. ಆಕೆಗೆ ಎಲ್ಲಾ ತಪಾಸಣೆಗಳನ್ನು ಮಾಡಲಾಯ್ತು ಹಾಗೂ ಬೋರ್ಡಿಂಗ್ ಪಾಸ್ ನೀಡಲಾಗಿದೆ ಎಂದು ಬೆಂಗಳೂರು ಮೂಲದ ಕುಟುಂಬ ಹೇಳಿದೆ.
ಬೋರ್ಡಿಂಗ್ ಪಾಸ್ (Boarding Pass) ಹೊಂದಿದ್ದರೂ ಏರ್ ಇಂಡಿಯಾ (Air India) ತನ್ನ ಸಾಕು ನಾಯಿಯನ್ನು ವಿಮಾನದೊಳಗೆ ಬಿಡಲಿಲ್ಲ ಎಂದು ಆರೋಪಿಸಿ ಬೆಂಗಳೂರು (Bengaluru) ಮೂಲದ ಕುಟುಂಬವೊಂದು ಟ್ವಿಟ್ಟರ್‌ನಲ್ಲಿ (Twitter) ವಿಡಿಯೋ (Video) ಪೋಸ್ಟ್ ಮಾಡಿದೆ. ಈ ವಿಡಿಯೋ ಕ್ಲಿಪ್ ವೈರಲ್ (Viral) ಆಗಿದ್ದು, ಕುಟುಂಬವು ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಿದೆ ಎಂದು ಹೇಳಿಕೊಂಡಿದೆ. ಶನಿವಾರದಂದು ಕುಟುಂಬವು ಬೆಂಗಳೂರಿನಿಂದ ದೆಹಲಿಗೆ ಮತ್ತು ನಂತರ ಅಮೃತಸರಕ್ಕೆ AI 503 ನಲ್ಲಿ ಪ್ರಯಾಣ ಮಾಡಬೇಕಿತ್ತು ಎಂದು ತಿಳಿದುಬಂದಿದೆ.
ಈ ಘಟನೆಯನ್ನು ಸಚಿನ್ ಶೆಣೈ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ 12 ದಿನಗಳ ಕಾಲ ರಜೆಗೆ ತೆರಳುತ್ತಿದ್ದು, 3 ತಿಂಗಳ ಹಿಂದೆಯೇ ನಾವು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದೆವು ಎಂದು ಅವರು ಹೇಳಿದರು. ಏರ್ ಇಂಡಿಯಾ ನಿಗದಿಪಡಿಸಿದ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ತಮ್ಮ ಸಾಕುನಾಯಿ ಫ್ಲಫಿಯನ್ನು ತಮ್ಮೊಂದಿಗೆ ವಿಮಾನದಲ್ಲಿ ಕರೆದೊಯ್ಯುವ ಬಗ್ಗೆ ನಾವು ಏರ್‌ಲೈನ್‌ನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆವು ಎಂದೂ ಅವರು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಒಂದೇ ಸಲ 500 ವಿಮಾನ ಖರೀದಿಗೆ Air India ರೆಡಿ..! ಇದು ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಡೀಲ್
"ನಮ್ಮ ಸಾಕುಪ್ರಾಣಿ 4.2 ಕಿಲೋಗ್ರಾಂಗಳಷ್ಟು ತೂಗುತ್ತದೆ ಮತ್ತು ಬ್ಯಾಗ್ ಜತೆಗೆ ಕೇವಲ 5 ಕಿಲೋಗ್ರಾಂಗಳಷ್ಟು ಭಾರವಾಗಿರುತ್ತದೆ. ನಿಯಮಗಳ ಪ್ರಕಾರ, ಆಕೆಯನ್ನು ವಿಮಾನದ ಕ್ಯಾಬಿನ್ ಒಳಗೆ ಇಡಬಹುದು. ಆಕೆಗೆ ಎಲ್ಲಾ ತಪಾಸಣೆಗಳನ್ನು ಮಾಡಲಾಯ್ತು ಹಾಗೂ ಬೋರ್ಡಿಂಗ್ ಪಾಸ್ ನೀಡಲಾಗಿದೆ" ಎಂದೂ ಅವರು ವಿಡಿಯೋಲ್ಲಿ ಹೇಳಿದ್ದಾರೆ. ಅಲ್ಲದೆ, ತಾಳ್ಮೆಯಿಂದ ನಾಲ್ಕು ಗಂಟೆಗಳ ಕಾಲ ಕಾಯುತ್ತಿದ್ದರೂ, ತಮ್ಮ ಸಾಕುಪ್ರಾಣಿ ಗಲಾಟೆ ಮಾಡಲಿಲ್ಲ ಎಂದೂ ಬೆಂಗಳೂರು ಮೂಲದ ಶೆಣೈ ಕುಟುಂಬ ಹೇಳಿದೆ.
ಅಲ್ಲದೆ, ಪೈಲಟ್, ಕ್ಯಾಪ್ಟನ್ ಚೋಪ್ರಾ, ನಮಗೆ ಪ್ರವೇಶವನ್ನು ನಿರಾಕರಿಸಿದರು ಅಥವಾ ಹಾಗೆಂದು ನಮಗೆ ತಿಳಿಸಲಾಯಿತು ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ. ಹಾಘೂ, ವಿಮಾನವು ಹೆಚ್ಚು ಕಾಯ್ದಿರಿಸಲ್ಪಟ್ಟಿದೆ ಎಂದು ತೋರುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೂದಲು ಉದುರಿದ್ದರೆ ಪೂರ್ತಿ ತಲೆ ಶೇವ್ ಮಾಡಿ : ಸಿಬ್ಬಂದಿಗೆ ಏರ್ ಇಂಡಿಯಾ ಸೂಚನೆ
ನೀವು ನಿಮ್ಮ ಸಾಕುಪ್ರಾಣಿಗಳನ್ನು ಬಿಟ್ಟು ಹೋಗಬಹುದು ಎಂದು ನಮಗೆ ಹೇಳಲಾಯಿತು ... ಇದು ನಿಮ್ಮ ಮಗುವನ್ನು ಬಿಟ್ಟು ಹಾರಿದಷ್ಟೇ ಒಳ್ಳೆಯದು ಎಂದು ಅವರು ವಿಡಿಯೋದಲ್ಲಿ ತಮ್ಮ ಸಂಕಟವನ್ನು ಹಂಚಿಕೊಂಡಿದ್ದಾರೆ. ಶೆಣೈ ಅವರು ತಾವು ಹೋಗಬೇಕಿದ್ದ ಅಮೃತಸರ ನಗರದಲ್ಲಿ ಎಲ್ಲಾ ಹೋಟೆಲ್ ಮತ್ತು ಪ್ರಯಾಣದ ಬುಕಿಂಗ್ ಮಾಡಿದ್ದರಿಂದ ನಾವು ಹೆಚ್ಚು ನಷ್ಟ ಅನುಭವಿಸಿದ್ದ್ದೇವೆ ಎಂದೂ ಕುಟುಂಬವು ದೂರಿದೆ.
ಶೆಣೈಗೆ ಬೆಂಬಲವನ್ನು ತೋರಿಸಿದ ಹಲವಾರು ಬಳಕೆದಾರರು ಆನ್‌ಲೈನ್‌ನಲ್ಲಿ ಅವರ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅನೇಕರು ವಿಮಾನಯಾನ ಸಂಸ್ಥೆ ವಿರುದ್ಧ ಟೀಕೆ ಮಾಡಿದ್ದು, ಮತ್ತು ಪೈಲಟ್‌ಗೆ ಭಾರಿ ದಂಡವನ್ನು ವಿಧಿಸಲು ಕರೆ ನೀಡಿದರು.
ಇದನ್ನೂ ಓದಿ: ಟಾಟಾ ಗ್ರೂಪ್ಸ್ ಒಡೆತನದ ಏರ್ ಇಂಡಿಯಾಗೆ ಅಮೆರಿಕದಿಂದ 987 ಕೋಟಿ ರೂ ದಂಡ!
ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, "ಸರ್, ನಾವು ನಮ್ಮ ಫರ್ರಿ ಸ್ನೇಹಿತರನ್ನು ನಿಮ್ಮಂತೆಯೇ ಪ್ರೀತಿಸುತ್ತೇವೆ. ನಮ್ಮ ಬೆಂಗಳೂರು ವಿಮಾನ ನಿಲ್ದಾಣದ ತಂಡವು ನಿಮ್ಮ ಫ್ಲಫಿಯು ನಮ್ಮೊಂದಿಗೆ ವಿಮಾನದಲ್ಲಿ ಹಾರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬೆಂಬಲವನ್ನು ನೀಡಿದೆ’’ ಎಂದೂ ಟ್ವೀಟ್ ಮಾಡಿದೆ.
ಆದರೆ, ವಿಮಾನದ ಕಮಾಂಡರ್ ಸಾಕುಪ್ರಾಣಿಯ ಪಂಜರ ಮತ್ತು ಮೂತಿಯಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಆದ್ದರಿಂದ ವಿಮಾನ ಹತ್ತಲು ಅನುಮತಿಸಲಾಗಿಲ್ಲ ಎಂದು ವಿಮಾನಯಾನ ಸಂಸ್ಥೆಯು ಟ್ವೀಟ್ ಮಾಡಿದೆ. ದೇಶೀಯ ವಿಮಾನಗಳಲ್ಲಿ ಸಾಕುಪ್ರಾಣಿಗಳ ಸಾಗಣೆಗಾಗಿ ನಮ್ಮ ನಿಯಮಿತ ನೀತಿಯು ಪೆಟ್ ಕ್ಯಾರೇಜ್ ವಿಮಾನದ ಕಮಾಂಡರ್‌ನ ಅನುಮೋದನೆಗೆ ಒಳಪಟ್ಟಿರುತ್ತದೆ" ಎಂದು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ ಎಂದು ಟಾಟಾ ಒಡೆತನದ ಏರ್‌ಲೈನ್ ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಶೆಣೈ, ಇದು ಸುಳ್ಳು ಮಾಹಿತಿ, ಈ ರೀತಿಯಾಗಿದ್ದರೆ ನಿಮ್ಮ ತಂಡವು ಆಕೆಗೆ ಬೋರ್ಡಿಂಗ್ ಪಾಸ್ ನೀಡುತ್ತಿರಲಿಲ್ಲ. ಫ್ಲಫಿಯ ಪ್ರಯಾಣದ ಅರ್ಹತೆ ಮತ್ತು ಫಿಟ್‌ನೆಸ್‌ನ ಅರ್ಹತೆಯ ಎಲ್ಲಾ ಪರಿಶೀಲನೆಯನ್ನು ನಾವು ಹಾರಾಟಕ್ಕೆ 4 ಗಂಟೆಗಳ ಮೊದಲು ಮಾಡಿದ್ದೇವೆ. ದಯವಿಟ್ಟು ಹಸಿ ಸುಳ್ಳುಗಳನ್ನು ಹೇಳುವುದನ್ನು ನಿಲ್ಲಿಸಿ ಎಂದು ಟೀಕೆ ಮಾಡಿದ್ದಾರೆ.