Asianet Suvarna News Asianet Suvarna News

ಸಾಮಾನ್ಯ ನೌಕರನಿಗಿಂತ 1085 ಪಟ್ಟು ಅಧಿಕ ವೇತನ ಪಡೆಯುವ ಪಿಚೈ!

ಗೂಗಲ್‌ನ ಸುಂದರ್‌ ಪಿಚೈ ವೇತನ 2140 ಕೋಟಿ ರು.!| ಸಾಮಾನ್ಯ ನೌಕರನಿಗಿಂತ 1085 ಪಟ್ಟು ಅಧಿಕ

Alphabet CEO Sundar Pichai 2019 compensation worth 281 million doller
Author
Bangalore, First Published Apr 26, 2020, 9:28 AM IST

ವಾಷಿಂಗ್ಟನ್(ಏ.26):  ವಿಶ್ವದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಆಲ್ಫಬೆಟ್‌ (ಗೂಗಲ್‌ನ ಮಾತೃಸಂಸ್ಥೆ)ನ ಸಿಇಒ, ಭಾರತೀಯ ಮೂಲದ ಸುಂದರ್‌ ಪಿಚೈಗೆ ಕಳೆದ ವರ್ಷ ಕಂಪನಿಯು ಭರ್ಜರಿ 2140 ಕೋಟಿ ರು. ವೇತನ ಘೋಷಿಸಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಅಮೆರಿಕದ ಷೇರು ಮಾರುಕಟ್ಟೆನಿಯಂತ್ರಣ ಸಂಸ್ಥೆಗೆ ಆಲ್ಫಬೆಟ್‌ ಸಲ್ಲಿಸಿದ ಮಾಹಿತಿಯಲ್ಲಿ ಈ ಅಂಶವಿದೆ.

ಕೊರೋನಾ ವಿರುದ್ಧ ಭಾರತದ ಸಮರ; 5 ಕೋಟಿ ನೀಡಿದ ಸುಂದರ್, ಹಣ ಯಾವುದಕ್ಕೆ?

ಆದರೆ ಇದು ಕೇವಲ ವೇತನ ಮಾತ್ರವಲ್ಲ. ವೇತನದ ಜೊತೆಗೆ ಕಂಪನಿ ಹಣಕಾಸು ವರ್ಷದಲ್ಲಿ ಗಳಿಸುವ ಒಟ್ಟಾರೆ ಆದಾಯವನ್ನು ಅಂದಾಜಿಸಿ ನೀಡುವ ಬೋನಸ್‌ ಸೇರಿದಂತೆ ವಿವಿಧ ಭತ್ಯೆಗಳು ಸೇರಿವೆ. ಹೀಗಾಗಿ ಕಂಪನಿ ಉತ್ತಮ ಸಾಧನೆ ಮಾಡಿದ ಕಾರಣ ಪಿಚೈ 2140 ಕೋಟಿ ರು. ಆದಾಯ ಪಡೆದಿದ್ದಾರೆ. ಒಂದು ವೇಳೆ ಕಂಪನಿಯ ಆದಾಯ ನಿರೀಕ್ಷೆಗಿಂತ ಕಡಿಮೆ ಇದ್ದಲ್ಲಿ ಅವರ ಆದಾಯದಲ್ಲೂ ಕಡಿಮೆ ಆಗುವ ಸಾಧ್ಯತೆ ಇದ್ದೇ ಇರುತ್ತದೆ.

2019ರಲ್ಲಿ ಪಿಚೈ 1840 ಕೋಟಿ ರು. ವೇತನ ಮತ್ತು ಭತ್ಯೆ ಪಡೆದುಕೊಂಡಿದ್ದರು. ಪಿಚೈ ಅವರ ಆದಾಯವು ಕಂಪನಿಯ ಓರ್ವ ಸಾಮಾನ್ಯ ಉದ್ಯೋಗಿಯ 1085 ಪಟ್ಟು ಹೆಚ್ಚಿದೆ.

Follow Us:
Download App:
  • android
  • ios