ಕೊರೋನಾ ವಿರುದ್ಧ ಭಾರತದ ಸಮರ; 5 ಕೋಟಿ ನೀಡಿದ ಸುಂದರ್, ಹಣ ಯಾವುದಕ್ಕೆ?
ಕೊರೋನಾ ವಿರುದ್ಧದ ಹೋರಾಟ/ ಸರ್ಕಾರೇತರ ಸಂಸ್ಥೆಗಳಿಗೆ ದೇಣಿಗೆ/ 5 ಕೋಟಿ ರೂ. ನೀಡಿದ ಗೂಗಲ್ ಸಿಉಒ ಸುಂದರ್ ಪಿಚೈ/ ಕಾರ್ಮಿಕರ ಕಲ್ಯಾಣಕ್ಕೆ ಬಳಕೆ ಮಾಡಿಕೊಳ್ಳಲು ನಿರ್ಧಾರ
ನವದೆಹಲಿ(ಏ.13) ಕೊರೋನಾ ವಿರುದ್ಧದ ಹೋರಾಟಕ್ಕೆ ಸಂಘ ಸಂಸ್ಥೆಗಳು, ಬಿಜಿನಸ್ ಮ್ಯಾನ್ ಗಳು ದೇಣಿಗೆ ನೀಡುತ್ತಲೇ ಬಂದಿದ್ದಾರೆ. ಇದೀಗ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ 5 ಕೋಟಿ ದೇಣಿಗೆ ನೀಡಿದ್ದಾರೆ.
ಭಾರತೀಯ ಮೂಲದ ಸುಂದರ್ ಗಿವ್ ಇಂಡಿಯಾಗೆ ದೇಣಿಗೆ ನೀಡಿದ್ದಾರೆ. ಗಿವ್‍ಇಂಡಿಯಾ ಎಂಬುದು ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದು ಆನ್‍ಲೈನ್ ಮೂಲಕ ದೇಣಿಗೆ ಸಂಗ್ರಹಿಸುತ್ತದೆ. ಈ ದೇಣಿಗೆಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿ ನಾಗರಿಕರ ಹಿತ ಕಾಯುವ ಕೆಲಸ ಮಾಡುತ್ತದೆ.
ಸುಂದರ್ ಅವರ ದೇಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ ಟ್ವೀಟ್ ಮಾಡಿದೆ. ದೇಣಿಗೆ ನೀಡಿದ್ದಕ್ಕೆ ಧನ್ಯವಾದಗಳು ಸುಂದರ್ ಪಿಚೈ, ನೀವು ನೀಡಿದ 5 ಕೋಟಿ ಹಣ ಕೂಲಿ ಕಾರ್ಮಿಕರ ಕುಟುಂಬಕ್ಕೆದ ನೆರವಿಗೆ ಬಳಕೆಯಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಕೊರೋನಾಕ್ಕೆ ಸವಾಲು; 22 ದಿನಗಳ ಹಸುಗೂಸಿನೊಂದಿಗೆ ಡ್ಯೂಟಿಗೆ ಬಂದ ಆಫಿಸರ್
ಟಾಟಾ ಟ್ರಸ್ಟ್ ಮತ್ತು ಟಾಟಾ ಗ್ರೂಪ್ಸ್ ಜೊತೆಗೂಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ 1,500 ಕೋಟಿ ದೇಣಿಗೆ ನೀಡಿದೆ. ಇದರ ಜೊತೆಗೆ ವಿಪ್ರೋ ಕಂಪನಿ ಕೂಡ ಭಾರತ ಸರ್ಕಾರಕ್ಕೆ 1,125 ಕೋಟಿ ನೀಡಿದೆ. ಸುಧಾ ಮೂರ್ತಿಯವರು ಸಹ ನಿರಂತರವಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ.
ಪೇಟಿಎಂ ಸಹ ಕೊಡುಗೆ ನೀಡಿದ್ದು 4 ಲಕ್ಷ ಮಾಸ್ಕ್ ಮತ್ತು 10 ಲಕ್ಷ ಹೈಜೀನ್ ಪ್ರಾಡೆಕ್ಟ್ ಗಳನ್ನು ಸಿಆರ್ ಪಿಎಫ್ ಯೋಧರಿಗೆ ನೀಡಿದೆ. ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9 ಸಾವಿರದ ಗಡಿ ದಾಟಿದ್ದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಲಾಕ್ ಡೌನ್ ಮೊದಲ ಹಂತ ಏ. 14ಕ್ಕೆ ಕೊನೆಯಾಗಲಿದೆ.