ಮುಂಬೈ(ಫೆ.07): ಒಂದು ಕಡೆ ಸಹೋದರ ಸಾಲದ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದಾರೆ. ಮತ್ತೊಂದು ಕಡೆ ಮುದ್ದು ಮಗ ಹಸೆಮಣೆ ಏರಲು ಸಿದ್ದವಾಗಿದ್ದಾನೆ. ರಿಲಯನ್ಸ್ ಸಾಮ್ರಾಜ್ಯದ ಅಧಿಪತಿ ಮುಖೇಶ್ ಅಂಬಾನಿ ಇಂತದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

ಇತ್ತೀಚಿಗಷ್ಟೇ ಮಗಳು ಇಶಾ ಅಂಬಾನಿ ಮತ್ತು ಆನಂದ ಪರಿಮಳ್ ಮದುವೆಯನ್ನು ಅದ್ದೂರಿಯಾಗಿ ಮಾಡಿ ಸಂಭ್ರಮಿಸಿದ್ದ ಮುಖೇಶ್ ಅಂಬಾನಿ, ಇದೀಗ ಮಗ ಆಕಾಶ ಮತ್ತು ಶ್ಲೋಕಾ ಮದುವೆಗೆ ಭರ್ಜರಿ ತಯಾರಿ ನಡೆಸಿದ್ದಾರೆ.

ಈ ಮಧ್ಯೆ ಸಹೋದರ, ರಿಲಯನ್ಸ್ ಕಮ್ಯುನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಸಾಲ ತೀರಿಸಬೇಕಾದ ಒತ್ತಡದಲ್ಲಿದ್ದು, ಅಣ್ಣನ ಸಹಾಯ ಬೇಡುತ್ತಿದ್ದಾರೆ. ಮುಖೇಶ್ ಅಂಬಾನಿಗೆ ಮಗನ ಮದುವೆ ಖುಷಿ ಒಂದು ಕಡೆಯಾದರೆ, ಸಹೋದರನ ಸಂಕಷ್ಟ ಮತ್ತೊಂದು ಕಡೆ.

ಮೂಲಗಳ ಪ್ರಕಾರ ಇದೇ ಮಾರ್ಚ್ 9 ರಂದು ಆಕಾಶ ಮತ್ತು ಶ್ಲೋಕಾ ಮದುವೆ ನಿಶ್ಚಯವಾಗಿದ್ದು, ಮುಂಬೈನಲ್ಲಿ ಅದ್ದೂರಿ ಮದುವೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.

ಇನ್ನು ಮದುವೆಗೂ ಮೊದಲು ಬ್ಯಾಚುಲರ್ ಪಾರ್ಟಿ ನೀಡಲು ಪ್ಲ್ಯಾನ್ ಮಾಡಿರುವ ಆಕಾಶ, ಸುಮಾರು 500 ಆಪ್ತ ಗೆಳೆಯರೊಂದಿಗೆ ಸ್ವಿಡ್ಜರಲ್ಯಾಂಡ್‌ಗೆ ಹಾರಲಿದ್ದಾರೆ. ಆಕಾಶ ಗೆಳೆಯರ ಪಟ್ಟಿಯಲ್ಲಿ ಬಾಲಿವುಡ್ ನಟರಾದ ರಣಬೀರ್ ಕಪೂರ್, ನಿರ್ಮಾಪಕ ಕರಣ್ ಜೋಹರ್ ಕೂಡ ಇರಲಿದ್ದಾರೆ ಎಂಬುದು ವಿಶೇಷ.

ಎಲ್ಲಾ ಮಾರಿಬಿಡಿ: ದಿವಾಳಿಯಾದ ಅಂಬಾನಿ ಮಾಡ್ತಿದ್ದಾರೆ ಗಡಿಬಿಡಿ!

ರಾಮ್-ಲಖನ್ ಕಹಾನಿ: ಅನಿಲ್ ಹಣೆಬರಹ ಬದಲಿಸಿದ ಮುಖೇಶ್ ಅಂಬಾನಿ!

ಬಂಗಲೆಯಿಂದ ಬೀದಿಗೆ: ಏನಾಗಿದೆ ಅಣ್ಣನ ಬಿಟ್ಟ ಅನಿಲ್ ಬುದ್ಧಿಗೆ?

ಅಂಬಾನಿ ಮಗಳ ಮದುವೆಗೆ 700 ಕೋಟಿ ರೂ. ಖರ್ಚು!

ಜೀವನವೆಲ್ಲ ಕೂಡಿಟ್ಟು ಮದ್ವೆ ಮಾಡೋರಿಗೆ ಅಂಬಾನಿ ಮನೆ ಮದುವೆ ಪಾಠ!

ಅಂಬಾನಿ ಪುತ್ರಿಯ ಡ್ರೆಸ್ ಡಿಸೈನ್ ಒಂದಕ್ಕಿಂತ ಒಂದು ಸೂಪರ್! ಇಲ್ಲಿದೆ ನೋಡಿ