ಮುಂಬೈ(ಫೆ.05): ಸಂಪೂರ್ಣ ದಿವಾಳಿಯಾಗಿ ಕಂಪನಿಯ ಆಸ್ತಿ ಮಾರಾಟ ಮಾಡಲು ಮುಂದಾಗಿರುವ ರಿಲಯನ್ಸ್ ಕಮ್ಯನಿಕೇಶನ್ ಮುಖ್ಯಸ್ಥ ಅನಿಲ್ ಅಂಬಾನಿ ಅವರಿಗೆ, ಅಣ್ಣನ ರೂಪದಲ್ಲಿ ಹೊಸ ಭರವಸೆಯ ಬೆಳಕು ಕಾಣತೊಡಗಿದೆ.

ಹೌದು, ಈಗಾಗಲೇ ಅನಿಲ್ ಅಂಬಾನಿ ಒಡೆತನದ ರೆಲ್.ಕಾಂ ಸಂಸ್ಥೆ ದಿವಾಳಿ ಅಂಚಿಗೆ ಬಂದು ನಿಂತಿದೆ. ಮಾಡಿದ ಸಾಲ ತೀರಿಸಲು ಅನಿಲ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಗೆ ಸೇರಿದ ಎಲ್ಲಾ ಆಸ್ತಿಯನ್ನು ಮಾರಲು ಮುಂದಾಗಿರುವ ಅನಿಲ್ ಅಂಬಾನಿ, ನ್ಯಾಶನಲ್ ಕಂಪನಿ ಲಾ ಟ್ರಿಬ್ಯುನಲ್ ಮೊರೆ ಹೋಗಿದ್ದಾರೆ.

ಇನ್ನು 270 ದಿನಗಳೊಳಗಾಗಿ ಅನಿಲ್ ಅಂಬಾನಿ ತಮ್ಮ ಸಾಲ ತೀರಿಸಬೇಕಾಗಿದ್ದು, ಈ ಕ್ಲಿಷ್ಟಕರ ಸಂದರ್ಭದಲ್ಲಿ ಸಹೋದರನ ನೆರವಿಗೆ ಹಿರಿಯಣ್ಣ ಮುಖೇಶ್ ಅಂಬಾನಿ ದೌಡಾಯಿಸುವ ಸಾಧ್ಯತೆಗಳಿವೆ.

ಅನಿಲ್ ತಮ್ಮ ಸ್ಪೆಕ್ಟ್ರಮ್, ಟವರ್‌ಗಳನ್ನು ಈ ಮೊದಲು ಅಣ್ಣ ಮುಖೇಶ್ ಒಡೆತನದ ರಿಲಯನ್ಸ್ ಜಿಯೋಗೆ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಕೇಂದ್ರದ ದೂರಸಂಪರ್ಕ ಇಲಾಖೆ ಮತ್ತು ಟ್ರಾಯ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪರಿಣಾಮ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ.

ಈ ಮಧ್ಯೆ ಸುಪ್ರೀಂ ಕೋರ್ಟ್ ರಿಲಯನ್ಸ್ ಕಮ್ಯುನಿಕೇಶನ್ಸ್ ತನ್ನ ಸ್ಪೆಕ್ಟ್ರಮ್ ಗಳನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡಲು ಇದ್ದ ನಿಯಮಗಳಲ್ಲಿ ಕೆಲವು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.

ಇದರಿಂದ ರಿಲಯನ್ಸ್ ಕಮ್ಯನಿಕೇಶನ್ಸ್ ನ ಸ್ಪೆಕ್ಟ್ರಮ್ ಗಳನ್ನು ಸುಮಾರು 17,300 ಕೋಟಿ ರೂ.ಗೆ ಕೊಂಡುಕೊಳ್ಳಬಹುದಾಗಿದ್ದು, ಅನಿಲ್ ಅಂಬಾನಿ ಆಸೆಯ ಕಂಗಳಿಂದ ಅಣ್ಣನತ್ತ ನೋಡುತ್ತಿದ್ದಾರೆ.

ಎಲ್ಲಾ ಮಾರಿಬಿಡಿ: ದಿವಾಳಿಯಾದ ಅಂಬಾನಿ ಮಾಡ್ತಿದ್ದಾರೆ ಗಡಿಬಿಡಿ!

ಮುಖೇಶ್ ಅಂಬಾನಿ ಟೋಟಲ್ ಆಸ್ತಿ: ಗಳಿಸಲಾಗಲ್ಲ ನಾವು ಹಿಡಿದ್ರೂ ಕುಸ್ತಿ!