Asianet Suvarna News Asianet Suvarna News

ಬೆಂಗಳೂರು ರಸ್ತೆ ಸರಿ ಇಲ್ಲ ಎಂದ ಉದ್ಯಮಿ: ಬ್ಯಾಗ್ ಪ್ಯಾಕ್ ಮಾಡಿ ಎಂದ ತೆಲಂಗಾಣ ಸಚಿವ

  • ಸಾಕಷ್ಟು ತೆರಿಗೆ ಪಾವತಿ ಮಾಡಿದರು ನೋ ಯೂಸ್‌
  • ರಸ್ತೆಗಳ ಸ್ಥಿತಿ ದೇವರೇ ಗತಿ
  • ಅಸಮಾಧಾನ ವ್ಯಕ್ತಪಡಿಸಿದ ಯುವ ಉದ್ಯಮಿ
After Khatabook founder Ravish Naresh tweet on Bengaluru roads, Telangana minister invite him to Hyderabad akb
Author
Bangalore, First Published Apr 3, 2022, 5:16 AM IST

ಬೆಂಗಳೂರು(ಏ.3): ಸಾಕಷ್ಟು ತೆರಿಗೆ ಪಾವತಿಸಿದರು ಬೆಂಗಳೂರಿನಲ್ಲಿ ಮೂಲ ಸೌಕರ್ಯ ಚೆನ್ನಾಗಿಲ್ಲ, ರಸ್ತೆಗಳು ಸರಿ ಇಲ್ಲ ಎಂದು ಯುವ ಉದ್ಯಮಿಯೊಬ್ಬರು ಟ್ವಿಟ್ ಮಾಡಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತೆಲಂಗಾಣದ ಸಚಿವ ಕೆ.ಟಿ. ರಾಮ್ ರಾವ್‌, ಹಾಗಾದರೆ ಕೂಡಲೇ ಬ್ಯಾಗ್‌ ಪ್ಯಾಕ್ ಮಾಡಿ ಹೈದರಾಬಾದ್‌ಗೆ ಬನ್ನಿ ನಾವು ಉತ್ತಮ ವ್ಯವಸ್ಥೆ ಹೊಂದಿದ್ದೇವೆ ಎಂದು ಆಹ್ವಾನಿಸಿದ್ದಾರೆ. 

ಡಿಜಿಟಲ್ ಬುಕ್ ಕೀಪಿಂಗ್ ಸ್ಟಾರ್ಟ್‌ಅಪ್‌ (digital book-keeping startup) ಖಾತಾಬುಕ್‌ನ (Khatabook) ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಶ್ ನರೇಶ್ (Ravish Naresh) ಅವರು ಮಾರ್ಚ್ 30 ರಂದು ಟ್ವೀಟ್ ಮಾಡಿದ್ದರು. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ (HSR Layout) ಮತ್ತು ಕೋರಮಂಗಲದಲ್ಲಿ(Koramangala) ಸ್ಟಾರ್ಟ್‌ಅಪ್‌ಗಳು ಶತಕೋಟಿ ಡಾಲರ್‌ಗಳ ತೆರಿಗೆ ಪಾವತಿಸುತ್ತಿವೆ. ಆದರೆ ಆ ಪ್ರದೇಶದಲ್ಲಿನ ರಸ್ತೆಗಳು ಮಾತ್ರ ತೀವ್ರ ಹದಗೆಟ್ಟಿವೆ ಮತ್ತು ಪ್ರತಿ ದಿನವೂ ವಿದ್ಯುತ್ ಕಡಿತವಾಗುತ್ತಿದೆ.

 

ಕಳಪೆ ಗುಣಮಟ್ಟದ ನೀರು ಸರಬರಾಜು, ಬಳಸಲಾಗದ ಕಾಲುದಾರಿಗಳು ಇಲ್ಲಿದ್ದು, ದೇಶದ ಹಲವು ಗ್ರಾಮೀಣ ಪ್ರದೇಶಗಳು ಈಗ ಭಾರತದ ಸಿಲಿಕಾನ್ ವ್ಯಾಲಿಗಿಂತ (India's Sillicon Valley) ಉತ್ತಮ ಮೂಲ ಸೌಕರ್ಯವನ್ನು ಹೊಂದಿವೆ. ಗರಿಷ್ಠ ಸಂಚಾರ ದಟ್ಟಣೆಯ ಜೊತೆ ಹತ್ತಿರದ ವಿಮಾನ ನಿಲ್ದಾಣವು ಮೂರು ಗಂಟೆಗಳ ದೂರದಲ್ಲಿದೆ ಎಂದು ಟ್ವಿಟ್ ಮಾಡಿದ್ದರು.

ಹೈಕೋರ್ಟ್‌ ಛೀಮಾರಿ ಹಾಕಿದ್ರೂ ಬುದ್ಧಿ ಕಲಿಯದ BBMP: ರಸ್ತೆಗುಂಡಿಗಳಿಗೆ ಮುಕ್ತಿ ಎಂದು?

ಮತ್ತೊಬ್ಬ ಸ್ಟಾರ್ಟ್-ಅಪ್ ಸೇತು APIನ ಸಂಸ್ಥಾಪಕ ನಿಖಿಲ್ ಕುಮಾರ್ (Nikhil Kumar) ಕೂಡ ರವೀಶ್ ನರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು,ನನ್ನಾಣೆ. ಬೆಂಗಳೂರು ಎಂತಹ ಅವ್ಯವಸ್ಥೆಯಾಗಿ ಮಾರ್ಪಟ್ಟಿದೆ. ದಯವಿಟ್ಟು ಗಮನಿಸಿ ಸರ್ , ನೀವು ಇದನ್ನು ಸರಿಪಡಿಸದಿದ್ದರೆ, ಸಾಮೂಹಿಕ ವಲಸೆ ಆರಂಭವಾಗಲಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)ಅವರಿಗೆ ಟ್ವೀಟ್  ಟ್ಯಾಗ್ ಮಾಡಿದ್ದಾರೆ.

ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ ಮತ್ತು ಐಟಿ ಸಚಿವರಾದ ಕೆಟಿ ರಾಮರಾವ್ (KT Rama Rao)ಅವರು ಈ ಟ್ವಿಟ್‌ಗೆ ಪ್ರತಿಕ್ರಿಯಿಸಿ, ಕೂಡಲೇ ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಮತ್ತು ಹೈದರಾಬಾದ್‌ಗೆ ಬನ್ನಿ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಾವು ಉತ್ತಮ ಭೌತಿಕ ಮೂಲಸೌಕರ್ಯ ಮತ್ತು ಸಮಾನವಾಗಿ ಉತ್ತಮ ಸಾಮಾಜಿಕ ಮೂಲ ಸೌಕರ್ಯವನ್ನು ಹೊಂದಿದ್ದೇವೆ. ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾದದ್ದು ಮತ್ತು ನಗರದೊಳಗೆ ಮತ್ತು ಹೊರಗೆ ಹೋಗುವುದು ಸುಲಭ. ಅದಕ್ಕಿಂತ ಹೆಚ್ಚು ಮುಖ್ಯವಾಗಿ ನಮ್ಮ ಸರ್ಕಾರದ ಗಮನವು ಮೂರು ಮಂತ್ರಗಳ ಮೇಲೆ ಇದೆ: ನಾವೀನ್ಯತೆ, ಮೂಲಸೌಕರ್ಯ ಮತ್ತು ಅಂತರ್ಗತ ಬೆಳವಣಿಗೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕ್ರಿಕೆಟ್ ಆಡಿದ ತೆಲಂಗಾಣ ಸಚಿವ... ಕೆಟಿಆರ್‌ ಸೂಪರ್‌ ಶಾಟ್‌ಗೆ ಅಭಿಮಾನಿಗಳು ಕ್ಲೀನ್‌ಬೌಲ್ಡ್

ಬೆಂಗಳೂರು ಭಾರತದ ಸ್ಟಾರ್ಟ್ ಅಪ್ ಹಬ್ ಆಗಿದೆ. ರಿಯಲ್ ಎಸ್ಟೇಟ್ ಕಂಪನಿ ಕೊಲಿಯರ್ಸ್ ಮತ್ತು ಸಿಆರ್‌ಇ ಮ್ಯಾಟ್ರಿಕ್ಸ್ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2019-21ರ ಅವಧಿಯಲ್ಲಿ ಇದು 34 ಪ್ರತಿಶತದಷ್ಟು ಸ್ಟಾರ್ಟ್-ಅಪ್ ಆಫೀಸ್ ಲೀಸಿಂಗ್ ಪಾಲನ್ನು ಹೊಂದಿತ್ತು. ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್ ಮತ್ತು ಇಂದಿರಾನಗರ (Indiranagar) ಮೊದಲ ಆದ್ಯತೆಯ ಸ್ಥಳಗಳಾಗಿವೆ.

Follow Us:
Download App:
  • android
  • ios