Asianet Suvarna News Asianet Suvarna News

ಶಾರ್ಕ್ ಟ್ಯಾಂಕ್ ಇಂಡಿಯಾದಿಂದ ಖುಲಾಯಿಸಿತು ಅದೃಷ್ಟ; ನಷ್ಟದಲ್ಲಿದ್ದ ಸ್ಟಾರ್ಟ್ ಅಪ್ ಸ್ಟಾಕ್ ಎರಡೇ ದಿನದಲ್ಲಿ ಖಾಲಿ!

ಶಾರ್ಕ್ ಟ್ಯಾಂಕ್ ಇಂಡಿಯಾ ಇಡೀ ದೇಶದ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸೋನಿ ಎಲ್ ಟಿವಿ ಪ್ಲ್ಯಾಟ್ ಫಾರ್ಮ್ ನಲ್ಲಿ ಪ್ರಸಾರವಾಗುತ್ತಿರುವ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ -2 ನಲ್ಲಿ ಈ ಬಾರಿ ಪ್ರತಿಯೊಬ್ಬರ ಗಮನ ಸೆಳೆದಿರುವ ಉದ್ಯಮಿಯೆಂದ್ರೆ ಅದು ಫ್ಲ್ಯಾಟ್ ಹೆಡ್ಸ್ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್. 

After declining Shark Tank offer IIT IIM alumni Ganesh Balkrishnan sells his entire inventory in 2 days
Author
First Published Jan 12, 2023, 9:10 PM IST

ಮುಂಬೈ (ಜ.12): ಶಾರ್ಕ್ ಟ್ಯಾಂಕ್ ಇಂಡಿಯಾ ಎರಡನೇ ಆವೃತ್ತಿ ಸೋನಿ ಎಲ್ ಟಿವಿ ಪ್ಲ್ಯಾಟ್ ಫಾರ್ಮ್ ನಲ್ಲಿ ಪ್ರಸಾರವಾಗುತ್ತಿದೆ. ಈ ಆವೃತ್ತಿಯಲ್ಲಿ ವಿವಿಧ ವಲಯಗಳಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳ ಅನೇಕ ಪಿಚ್ ಗಳು (ಉದ್ಯಮ ಪ್ರಸ್ತುತಿ) ಪ್ರಸಾರವಾಗುತ್ತಿವೆ. ಆದರೆ, ಈ ಕಾರ್ಯಕ್ರಮದಲ್ಲಿ ಈ ಬಾರಿ ಪ್ರತಿಯೊಬ್ಬರ ಗಮನ ಸೆಳೆದಿರುವುದು ಫ್ಲ್ಯಾಟ್ ಹೆಡ್ಸ್ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್. ಐಐಟಿ ಹಾಗೂ ಐಐಎಂ ಹಳೇ ವಿದ್ಯಾರ್ಥಿಯಾಗಿರುವ ಗಣೇಶ್ ಬಾಲಕೃಷ್ಣನ್, ಫೈಬರ್ ಗಳಿಂದ ಸಿದ್ಧಪಡಿಸುವ ಶೂ ಸಂಸ್ಥೆ ಫ್ಲ್ಯಾಟ್ ಹೆಡ್ಸ್ ಸಂಸ್ಥಾಪಕರು. ಅವರ ಉದ್ಯಮದ ಕಥೆ ಪ್ರಸಾರವಾದ ಬಳಿಕ ಬಹುತೇಕರು  ಶಾರ್ಕ್ ಟ್ಯಾಂಕ್ ಇಂಡಿಯಾ ವೀಕ್ಷಿಸಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಗಣೇಶ್ ಬಾಲಕೃಷ್ಣನ್ ಕುರಿತು ಹಾಗೂ ನಷ್ಟದ ಉದ್ಯಮವನ್ನು ಪ್ರಸ್ತುತಪಡಿಸಿದ ಅವರ ಧೈರ್ಯದ ಬಗ್ಗೆ ಕೂಡ ಮಾತನಾಡಲು ಪ್ರಾರಂಭಿಸಿದ್ದಾರೆ.  ನಷ್ಟ ಉಂಟು ಮಾಡುತ್ತಿರುವ ತಮ್ಮ ಉದ್ಯಮವನ್ನು ಬಾಲಕೃಷ್ಣನ್ ಪ್ರಸ್ತುತಪಡಿಸಿರೋದು ಅನೇಕ ಉದ್ಯಮಿಗಳಿಗೆ ನಿರಾಸೆಯುಂಟು ಮಾಡಿರಬಹುದು. ಆದರೆ, ನಷ್ಟ ಉಂಟು ಮಾಡುವ ಉದ್ಯಮವನ್ನು ಲಾಭದಾಯಕವಾಗಿ ಪರಿವರ್ತಿಸುವ ಬಗ್ಗೆ ಅವರಿಗಿರುವ ಉತ್ಸಾಹ ಹಾಗೂ ಶ್ರದ್ಧೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಬಾಲಕೃಷ್ಣನ್ ಅವರ ಉದ್ಯಮಗಾಥೆ ಪ್ರಸಾರಗೊಂಡ ಕೇವಲ ಎರಡು ದಿನಗಳಲ್ಲಿ ಫ್ಲ್ಯಾಟ್ ಹೆಡ್ಸ್ ಸಂಸ್ಥೆಯ ಸಂಪೂರ್ಣ ಉತ್ಪನ್ನಗಳು ಮಾರಾಟವಾಗಿವೆ. ಬಾಲಕೃಷ್ಣನ ಉದ್ಯಮಗಾಥೆ ಪ್ರಸಾರಗೊಂಡ ಕೇವಲ ಎರಡು ದಿನಗಳಲ್ಲಿ ಸಂಪೂರ್ಣ ಉತ್ಪನ್ನಗಳು ಮಾರಾಟವಾಗಿರುವ ಬಗ್ಗೆ ಲಿಂಕ್ಡ ಇನ್ ಪೋಸ್ಟ್ ಮೂಲಕ ಬಾಲಕೃಷ್ಣನ್ ಮಾಹಿತಿ ಹಂಚಿಕೊಂಡಿದ್ದು, ಶಾರ್ಕ್ ಟ್ಯಾಂಕ್ ಇಂಡಿಯಾಗೆ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ಶಾರ್ಕ್ ಗಳಾದ ಅನುಪಮ್ ಮಿತ್ತಲ್, ವಿನೀತ್ ಸಿಂಗ್, ಪೆಯೂಷ್ ಬನ್ಸಾಲ್, ನಮಿತಾ ಥಾಪರ್ ಹಾಗೂ ಅಮನ್ ಗುಪ್ತಾ ಅವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. 

ಎಲ್ಐಸಿ ಪಾಲಿಸಿ ಮೂಲದಾಖಲೆ ಕಳೆದು ಹೋಗಿದೆಯಾ? ಡೋಂಟ್ ವರಿ ಹೀಗೆ ಮಾಡಿ

'ಭಾರತದಲ್ಲಿ ನಾವು ನಮ್ಮ ಬಹುತೇಕ ಉತ್ಪನ್ನಗಳನ್ನು ಮಾರಾಟ ಮಾಡಿದ್ದೇವೆ. ಹೀಗಾಗಿ ನಿಮಗೆ ನಿಮ್ಮ ಗಾತ್ರದ ಶೂಸ್  www.flatheads.in ವೆಬ್ಸೈಟ್ ನಲ್ಲಿ ಲಭಿಸದಿದ್ದರೆ ಕ್ಷಮಿಸಿ. ಅಮೆರಿಕ (US) ಹಾಗೂ ಯುಎಇಯಲ್ಲಿರುವ (UAE) ನಿಮ್ಮ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿ ನಮ್ಮ ಶೂಗಳನ್ನು ಧರಿಸಿ ನೋಡುವಂತೆ ತಿಳಿಸಿದ್ದರೆ ಉತ್ತಮ' ಎಂದು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಂದು ಪೋಸ್ಟ್ ನಲ್ಲಿ ಬಾಲಕೃಷ್ಣನ್ ಹೀಗೆ ಬರೆದಿದ್ದಾರೆ: 'ಶುಕ್ರವಾರ ಶಾರ್ಕ್ ಟ್ಯಾಂಕ್ ಇಂಡಿಯಾ ಆವೃತ್ತಿ ಪ್ರಸಾರಗೊಂಡ ಬಳಿಕ ದೇಶಾದ್ಯಂತ ಸಹಾನುಭೂತಿ ಹಾಗೂ ಬೆಂಬಲ ವ್ಯಕ್ತವಾಗಿದೆ. ಅದರ ಜೊತೆಗೆ ನಮ್ಮ  ಫ್ಲ್ಯಾಟ್ ಹೆಡ್ಸ್ ವೆಬ್ ಸೈಟ್ ಗೆ ದಾಖಲೆಯ ಪ್ರಮಾಣದಲ್ಲಿ ಆರ್ಡರ್ ಗಳು ಬಂದಿವೆ. ನಮ್ಮ ಬಳಿ ಉಳಿದಿರುವ ಸೀಮಿತ ಪ್ರಮಾಣದ ಶೂಗಳನ್ನು ಎರಡು ದಿನಗಳಲ್ಲಿ ಮಾರಾಟ ಮಾಡಿದ್ದೇವೆ.'

Business Ideas: ಪ್ರಾಪರ್ಟಿ ಡೀಲರ್ ಆಗೋಕೆ ಏನ್ಬೇಕು ಗೊತ್ತಾ?

ಉದ್ಯಮ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಾಲಕೃಷ್ಣನ್ ಅವರಿಗೆ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಎರಡು ಉದ್ಯೋಗದ ಆಫರ್ ಗಳನ್ನು ಕೂಡ ನೀಡಲಾಗಿತ್ತು. ಆದರೆ, ಅವರು ಆ ಉದ್ಯೋಗ ಸ್ವೀಕರಿಸಿ ಉದ್ಯಮದ ಮೂಲಭೂತ ತತ್ವಗಳನ್ನು ಅರಿಯುವ ಅವಕಾಶ ನಿರಾಕರಿಸಿದ್ದರು. ಶಾದಿ ಡಾಟ್ ಕಾಮ್ (Shaadi.com) ಹಾಗೂ ಪೀಪಲ್ ಗ್ರೂಪ್ (People Group) ಸಂಸ್ಥಾಪಕ ಅನುಪಮ್ ಮಿತ್ತಲ್, ಶುಗರ್ ಕಾಸ್ಮೆಟಿಕ್ಸ್ ಸಂಸ್ಥಾಪಕ ವಿನೀತ್ ಸಿಂಗ್ ಹಾಗೂ ಲೆನ್ಸ್ ಕಾರ್ಟ್ ಸಂಸ್ಥಾಪಕ ಪೆಯೂಷ್ ಬಸ್ಸಾಲ್ ಅವರಿಂದ ಬಾಲಕೃಷ್ಣನ್ ಅವರಿಗೆ ಉದ್ಯೋಗದ ಆಫರ್ ಕೂಡ ಸಿಕ್ಕಿತ್ತು. ಬಹುತೇಕ ಉದ್ಯಮಿಗಳು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದರೇನೋ ಆದ್ರೆ ಬಾಲಕೃಷ್ಣನ್ ಒಪ್ಪಿಕೊಳ್ಳಲಿಲ್ಲ. 


 

Follow Us:
Download App:
  • android
  • ios