Business Ideas: ಪ್ರಾಪರ್ಟಿ ಡೀಲರ್ ಆಗೋಕೆ ಏನ್ಬೇಕು ಗೊತ್ತಾ?

ಉದ್ಯೋಗ ನಮ್ಮನ್ನರಸಿ ಬರೋದಿಲ್ಲ. ನಾವು ಧೈರ್ಯ ಮಾಡಿ ಬ್ಯುಸಿನೆಸ್ ಗೆ ಧುಮುಕಬೇಕು. ರಾತ್ರೋರಾತ್ರಿ ಯಾವ ವ್ಯವಹಾರದಿಂದಲೂ ಲಾಭ ಬರಲು ಸಾಧ್ಯವಿಲ್ಲ. ಸ್ವಲ್ಪ ನಿಧಾನವಾದ್ರೂ ಗುಣಮಟ್ಟದ ಕೆಲಸ ಲಾಭ ನೀಡುತ್ತೆ. ಇದಕ್ಕೆ ಪ್ರಾಪರ್ಟಿ ಡೀಲರ್ ಹೊರತಾಗಿಲ್ಲ. ನೀವು ಆರಾಮವಾಗಿ ಈ ವ್ಯವಹಾರ ಶುರು ಮಾಡ್ಬಹುದು.
 

How To Start Property Dealing Business

ಓದು ಮುಗಿಸಿ ಉದ್ಯೋಗವಿಲ್ಲವೆಂದು ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಸರ್ಕಾರಿ ಉದ್ಯೋಗ ಅಥವಾ ವಿದ್ಯೆಗೆ ತಕ್ಕಂತ ಉದ್ಯೋಗ ಹುಡುಕ್ತಾ ವರ್ಷಾನುಗಟ್ಟಲೆ ಸಮಯ ಹಾಳು ಮಾಡುವ ಬದಲು ಸ್ವಂತ ಉದ್ಯೋಗಗಕ್ಕೆ ಧುಮುಕಬಹುದು. ಈಗಿನ ಕಾಲದಲ್ಲಿ ಸ್ವಂತ ಉದ್ಯೋಗ ಶುರು ಮಾಡಲು ಸಾಕಷ್ಟು ಆಯ್ಕೆಯಿದೆ. ಅದ್ರಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಕೆಲಸ ಕೂಡ ಒಂದು. ನಾವಿಂದು ರಿಯಲ್ ಎಸ್ಟೇಟ್ ಏಜೆಂಟ್ ಆಗೋದು ಹೇಗೆ ಎನ್ನುವ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ರಿಯಲ್ ಎಸ್ಟೇಟ್ (Real Estate) ಏಜೆಂಟ್ ಎಂದ್ರೇನು? : ಮನೆ, ಅಂಗಡಿ, ಪ್ಲಾಟ್ ವ್ಯವಹಾರ (Business) ವನ್ನು ಇವರು ಮಾಡ್ತಾರೆ. ಒಬ್ಬರ ಮನೆಯನ್ನು ಇನ್ನೊಬ್ಬರಿಗೆ ಮಾರುವುದು ಅಥವಾ ಬಾಡಿಗೆ ನೀಡಲು ಸಹಾಯ ಮಾಡುವ ಕೆಲಸವಾಗಿದೆ. ಇದಕ್ಕೆ ಏಜೆಂಟ್ ಗಳು ಹಣವನ್ನು ಪಡೆಯುತ್ತಾರೆ. ಈ  ಕಮಿಷನ್ (Commission) ಸಾವಿರದಿಂದ ಲಕ್ಷದವರೆಗೆ ಇರಬಹುದು. ಪ್ರಾಪರ್ಟಿ ಡೀಲರ್‌ನ ಡೀಲ್‌ನ ಮೇಲೆ ಅವನು ಎಷ್ಟು ದುಬಾರಿ ಒಪ್ಪಂದವನ್ನು ಮಾಡುತ್ತಾನೆ ಎಂಬುದು ಅವಲಂಬಿಸಿದೆ. 

Personal Finance : 60ರಲ್ಲಿ ಆರಾಮಾಗಿರ್ಬೇಕೆಂದ್ರೆ 30ರಲ್ಲಿ ಕಷ್ಟಪಡಿ

ರಿಯಲ್ ಎಸ್ಟೇಟ್ ಏಜೆಂಟ್ ಕೆಲಸ ಹೇಗೆ ಶುರು ಮಾಡೋದು? : ಪ್ರಾಪರ್ಟಿ ಡೀಲಿಂಗ್ ವ್ಯವಹಾರದಲ್ಲಿ ನೀವು ಹೊಸಬರಾಗಿದ್ದರೆ  ಆರಂಭದಲ್ಲಿ ಕಚೇರಿ ತೆರೆಯುವ ಅಗತ್ಯವಿಲ್ಲ. ನೀವು ಕಚೇರಿ ಇಲ್ಲದೆ ಕೆಲಸವನ್ನು ಪ್ರಾರಂಭಿಸಿ. ನಿಮ್ಮ ಚಂದಾದಾರರು ಬೆಳೆಯುತ್ತಿದ್ದಂತೆ ನೀವು ಕಚೇರಿ ತೆರೆಯಬಹುದು. ಜನನಿಬಿಡ ಪ್ರದೇಶದಲ್ಲಿ ಇದನ್ನು ಶುರು ಮಾಡುವುದು ಒಳ್ಳೆಯದು.  

ಪ್ರಾಪರ್ಟಿ ಡೀಲರ್ ಕೆಲಸವೇನು? : ಮೊದಲನೇಯದಾಗಿ ಯಾವ ಆಸ್ತಿ ಮಾರಾಟಕ್ಕಿದೆ ಅಥವಾ ಬಾಡಿಗೆಗಿದೆ ಎಂಬುದನ್ನು ಕಂಡು ಹಿಡಿಯುವುದು. ನಂತ್ರ ಆಸ್ತಿ ಮಾಲೀಕನೊಂದಿಗೆ ಮಾತುಕತೆ ನಡೆಸುವುದು. ನಂತ್ರ ಗ್ರಾಹಕರ ಹುಡುಕಾಟ ನಡೆಸುವುದು. ಎರಡೂ ಪಕ್ಷದ ಮಧ್ಯೆ ಹೊಂದಾಣಿಕೆ ಮಾಡುವುದು. ಆಸ್ತಿ ವರ್ಗಾವಣೆಯ ಎಲ್ಲಾ ದಾಖಲೆ ಸಿದ್ಧಪಡಿಸುವುದು. ಖರೀದಿದಾರರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ. ಖರೀದಿದಾರ ಮತ್ತು ಮಾರಾಟಗಾರರ ನಡುವೆ ಒಪ್ಪಂದಕ್ಕೆ ಸಹಿ ಹಾಕುವುದು. ಆಸ್ತಿ ಸಾಲ ಪಡೆಯಲು ಸಹಾಯ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ. 

ಪ್ರಾಪರ್ಟಿ ಡೀಲರ್ ಆಗುವುದು ಹೇಗೆ? : ಈ ಕೆಲಸ ಮಾಡಲು ನಿಮಗೆ ವಿಶೇಷ ಪದವಿ ಅಗತ್ಯವಿಲ್ಲ. ಜನರ ಜೊತೆ ಬೆರೆಯಲು, ಮಾತನಾಡಲು ನಿಮಗೆ ಬರಬೇಕು. ನಿಮ್ಮ ಮಾತಿನ ಮೂಲಕ ಜನರನ್ನು ಮೋಡಿ ಮಾಡಲು ತಿಳಿದಿದ್ದರೆ ನೀವು ಈ ಕೆಲಸವನ್ನು ಸುಲಭವಾಗಿ ಶುರು ಮಾಡಬಹುದು. ಕೆಲ ಸಮಯ ನೀವು ಡೀಲರ್‌ ಜೊತೆ ಕೆಲಸ ಮಾಡಿಯೂ ಅನುಭವ ಪಡೆಯಬಹುದು. ಅವರು ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ತಿಳಿಯಬಹುದು. ಹಾಗೆಯೇ ದಾಖಲೆ ವ್ಯವಹಾರ, ಎಲ್ಲಿ ದಾಖಲೆ ನೀಡ್ಬೇಕು, ಸಿದ್ಧಪಡಿಸಬೇಕು ಎಂಬುದರ ಬಗ್ಗೆ ಅವರ ಕೈಕೆಳಗೆ ಕೆಲಸ ಮಾಡಿದಾಗ ನಿಮಗೆ ತಿಳಿಯುತ್ತದೆ. ನಂತ್ರ ನೀವೇ ಸ್ವಂತ ವ್ಯವಹಾರ ಶುರು ಮಾಡಬಹುದು. 

ಪ್ರಾಪರ್ಟಿ ಡೀಲರ್ ಆಗಲು ನೋಂದಣಿ ಅಗತ್ಯವೇ? : ಈ ಕೆಲಸ ಶುರು ಮಾಡಲು ಯಾವುದೇ ರೀತಿಯ ನೋಂದಣಿ ಅಗತ್ಯವಿಲ್ಲ. ಯಾವುದೇ ರೀತಿಯ ಪರವಾನಗಿ ಬೇಕಾಗಿಲ್ಲ. ನೋಂದಾಯಿತ ರಿಯಲ್ ಎಸ್ಟೇಟ್ ಏಜೆಂಟ್ ಆಗಲು ಬಯಸಿದರೆ ರೇರಾಕ್ಕೆ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಕೆಲ ದಾಖಲೆ ಪರಿಶೀಲನೆ ನಂತ್ರ ನೀವು ನೋಂದಾಯಿತ ಪ್ರಾಪರ್ಟಿ ಡೀಲರ್ ಆಗ್ತಿರಿ. 

Business Ideas: ಹೆಚ್ಚಿನ ಲಾಭ ಬೇಕಂದ್ರೆ ಈ ವ್ಯವಹಾರ ಶುರು ಮಾಡಿ

ಪ್ರಾಪರ್ಟಿ ಡೀಲರ್ ಹೂಡಿಕೆ ಮತ್ತು ಲಾಭ : ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿಲ್ಲ. ಆದ್ರೆ ಗ್ರಾಹಕರನ್ನು ಹುಡುಕಲು, ಖರೀದಿದಾರರು ಹಾಗೂ ಮಾರಾಟಗಾರರ ಮಧ್ಯೆ ಮಾತನಾಡಲು, ಓಡಾಟಕ್ಕೆ ಹಣ ಖರ್ಚಾಗುತ್ತದೆ. ನೀವು ಉತ್ತಮವಾಗಿ ವ್ಯವಹಾರ ಕುದುರಿಸಿದ್ರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು. ದೊಡ್ಡ ದೊಡ್ಡ ಆಸ್ತಿಗೆ ನೀವು ಹೆಚ್ಚಿನ ಕಮಿಷನ್ ಗಿಟ್ಟಿಸಿಕೊಳ್ಳಬಹುದು. ಇದು ನಿಮ್ಮ ಕೌಶಲ್ಯವನ್ನು ಅವಲಂಭಿಸಿದೆ. 
 

Latest Videos
Follow Us:
Download App:
  • android
  • ios