Adani Group ಸಿಮೆಂಟ್ ಉತ್ಪಾದನಾ ವಲಯಕ್ಕೆ ಅದಾನಿ ಎಂಟ್ರಿ, 78000 ಕೋಟಿ ರೂಗೆ ಎಸಿಸಿ ಪಾಲು ಖರೀದಿ!
- ಎಸಿಸಿ ಮತ್ತು ಅಂಬೂಜಾ ಸಿಮೆಂಟ್ಸ್ ಪಾಲು ಖರೀದಿ
- ದೇಶದ 2ನೇ ಅತಿದೊಡ್ಡ ಸಿಮೆಂಟ್ ಉತ್ಪಾದನಾ ಕಂಪನಿ
- ಅದಾನಿ ಸಮೂಹ 10.5 ಶತಕೋಟಿ ಡಾಲರ್ ಹೂಡಿಕೆ
ಮುಂಬೈ(ಮೇ.16): ಭಾರತದ ಎಸಿಸಿ ಮತ್ತು ಅಂಬೂಜಾ ಸಿಮೆಂಟ್ಸ್ ಕಂಪನಿಯಲ್ಲಿ ಸ್ವಿಜರ್ಲೆಂಡ್ ಮೂಲದ ಹೋಲ್‌ಸಿಮ್ಸ್ ಕಂಪನಿ ಹೊಂದಿದ್ದ ಪೂರ್ಣ ಪಾಲನ್ನು ಅದಾನಿ ಸಮೂಹ 10.5 ಶತಕೋಟಿ ಡಾಲರ್ (ಅಂದಾಜು 78000 ಕೋಟಿ ರು.)ಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಹಾಲಿ ಅಂಬೂಜಾ ಸಿಮೆಂಟ್ಸ್‌ನಲ್ಲಿ ಶೇ.63.19 ಮತ್ತು ಎಸಿಸಿಯಲ್ಲಿ ಶೆ.54.53ರಷ್ಟುಪಾಲನ್ನು ಹೋಲ್‌ಸಿಮ್ಸ್ ಕಂಪನಿ ಹೊಂದಿತ್ತು. ಈ ಖರೀದಿಯೊಂದಿಗೆ ಅದಾನಿ ಕಂಪನಿ ಸಿಮೆಂಟ್ ಉತ್ಪಾದನಾ ವಲಯ ಪ್ರವೇಶ ಮಾಡಿದ್ದೂ, ಅಲ್ಲದೆ ಒಂದೇ ಬಾರಿಗೆ ದೇಶದ 2ನೇ ಅತಿದೊಡ್ಡ ಸಿಮೆಂಟ್ ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಲಿದೆ.
ಆಂಧ್ರದಿಂದ ಶ್ರೀಮಂತ ಉದ್ಯಮಿ ಅದಾನಿ ಅಥವಾ ಪತ್ನಿಗೆ ರಾಜ್ಯಸಭೆ ಟಿಕೆಟ್?
ಜೂನ್ 10ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ವಿಶ್ವದ 5ನೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅಥವಾ ಅವರ ಪತ್ನಿ ಡಾ ಪ್ರೀತಿ ಅದಾನಿ ಅವರಿಗೆ ಟಿಕೆಟ್ ನೀಡಲು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ರಾಜ್ಯದಲ್ಲಿ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯ ಸಂಖ್ಯಾಬಲ ಗಮನಿಸಿದರೆ ಎಲ್ಲ ನಾಲ್ಕೂ ಸ್ಥಾನ ಜಗನ್‌ರ ವೈಎಸ್ಸಾರ್ ಕಾಂಗ್ರೆಸ್ ಪಾಲಾಗಲಿವೆ. ಮೂಲಗಳ ಪ್ರಕಾರ ಅಮಿತ್ ಶಾ ಅವರು ಅದಾನಿ ಕುಟುಂಬದ ಹೆಸರು ಪ್ರಸ್ತಾಪಿಸಿದ್ದು, ಇದಕ್ಕೆ ಜಗನ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ವೈಎಸ್ಸಾರ್ ಕಾಂಗ್ರೆಸ್ ಈ ಹಿಂದೆ ರಿಲಯನ್ಸ್ ಗ್ರೂಪ್ ಹಿರಿಯ ಅಧ್ಯಕ್ಷ ಪರಿಮಳ್ ನಾಥ್ವಾನಿ ಅವರನ್ನು ರಾಜ್ಯಸಭೆಗೆ ಕಳಿಸಿತ್ತು.
ಬಟ್ಟೆ ವ್ಯಾಪಾರಿ ಮಗ ವಿಶ್ವದ ಟಾಪ್ 5 ಶ್ರೀಮಂತ, ಸವಾಲಿನ ನಡುವೆ ಅದಾನಿ ಸಾಧನೆ!
ಬಫೆಟ್ ಹಿಂದಿಕ್ಕಿದ ಅದಾನಿ ವಿಶ್ವದ ನಂ.5 ಶ್ರೀಮಂತ!
ಅದಾನಿ ಸಮೂಹಗಳ ಮುಖ್ಯಸ್ಥ ಗೌತಮ್ ಅದಾನಿ, ಇದೀಗ ವಿಶ್ವದ 5ನೇ ಅತಿ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಇದುವರೆಗೂ 5ನೇ ಸ್ಥಾನದಲ್ಲಿದ್ದ ಹೂಡಿಕೆದಾರ ವಾರನ್ ಬಫೆಟ್ ಅವರನ್ನು ಅದಾನಿ 6ನೇ ಸ್ಥಾನಕ್ಕೆ ತಳ್ಳಿದ್ದಾರೆ.ಈ ತಿಂಗಳ ಮೊದಲ ವಾರದಲ್ಲಷ್ಟೇ ಏಷ್ಯಾದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದ ಗೌತಮ್ ಅದಾನಿ ಒಡೆತನದ ಕಂಪನಿಗಳ ಷೇರು ಮೌಲ್ಯ ಭಾರೀ ಕಂಡ ಹಿನ್ನೆಲೆಯಲ್ಲಿ, ಹಾಲಿ ಅದಾನಿ ಅವರ ಆಸ್ತಿ 9.27 ಲಕ್ಷ ಕೋಟಿ ರು.ಗೆ ಏರಿದೆ ಎಂದು ಫೋಬ್ಸ್ ಮ್ಯಾಗಜಿನ್‌ನ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಹೇಳಿದೆ.
ಹಾಲಿ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್‌್ಕ, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಎಲ್‌ವಿಎಂಎಚ್ ಮುಖ್ಯಸ್ಥ ಬೆರ್ನಾರ್ಡ್ ಅರ್ನಾಲ್ಟ್, ಮೈಕ್ರೋಸಾಫ್‌್ಟಸಂಸ್ಥಾಪಕ ಬಿಲ್‌ಗೇಟ್ಸ್ ಮತ್ತು ಗೌತಮ್ ಅದಾನಿ ವಿಶ್ವದ ಟಾಪ್ 5 ಶ್ರೀಮಂತರೆಂಬ ಹಿರಿಮೆ ಹೊಂದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 7.63 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.ವಿಶೇಷವೆಂದರೆ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್‌್ಕ ಮತ್ತು 2ನೇ ಶ್ರೀಮಂತ ಬೆಜೋಸ್ ನಡುವಿನ ಆಸ್ತಿಯ ವ್ಯತ್ಯಾಸವೇ 7.46 ಲಕ್ಷ ಕೋಟಿ ರು.ನಷ್ಟಿದೆ.
ಝೀರೋ ಟು ಹಿರೋ: ಅದಾನಿ ಸಾಮ್ರಾಜ್ಯದ ಅಸಲಿ ಕಹಾನಿ
ರಾಜ್ಯದಲ್ಲಿ .50000 ಕೋಟಿ ಹೂಡಲು ಅದಾನಿ ಸಮ್ಮತಿ
ರಾಜ್ಯದಲ್ಲಿ ಪ್ರತಿಷ್ಠಿತ ಅದಾನಿ ಗ್ರೂಪ್ .50 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ. ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಈ ಸಂಬಂಧ ಒಡಂಬಡಿಕೆ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.