Asianet Suvarna News Asianet Suvarna News

ಡಿವೋರ್ಸ್‌ ರೂಮರ್ಸ್ ಮಧ್ಯೆ ಅತ್ತೆ ಮಾವ ಇರುವ ಜಲ್ಸಾಗೆ ಮಗಳೊಂದಿಗೆ ಬಂದ ಐಶ್ವರ್ಯಾ ರೈ

ಐಶ್ವರ್ಯಾ ರೈ ಅತ್ತೆ ಮಾವನಿಂದ ದೂರಾಗಿ ವಾಸ ಮಾಡ್ತಿದ್ದಾರೆ. ಪತಿಯಿಂದಲೂ ದೂರಾಗುತ್ತಿದ್ದಾರೆ ಎಂಬ ಊಹಾಪೋಹಾಗಳ ಮಧ್ಯೆ ಇಂದು ಐಶ್ವರ್ಯಾ ರೈ ಮಗಳು ಆರಾಧ್ಯ ಜೊತೆ ಅತ್ತೆ ಮಾವ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ವಾಸ ಮಾಡುವ ನಿವಾಸ ಜಲ್ಸಾದಲ್ಲಿ ಕಾಣಿಸಿಕೊಂಡಿದ್ದು, ಅದರ ಫೋಟೋ ವೀಡಿಯೋಗಳು ವೈರಲ್ ಆಗಿವೆ.

Bollywood actress Aishwarya Rai visits Jalsa with daughter Aradhya its residence of her in laws akb
Author
First Published Sep 3, 2024, 3:24 PM IST | Last Updated Sep 3, 2024, 10:29 PM IST

ಐಶ್ವರ್ಯಾ ರೈ ಅತ್ತೆ ಮಾವನಿಂದ ದೂರಾಗಿ ವಾಸ ಮಾಡ್ತಿದ್ದಾರೆ. ಪತಿಯಿಂದಲೂ ದೂರಾಗುತ್ತಿದ್ದಾರೆ ಎಂಬ ಊಹಾಪೋಹಾಗಳ ಮಧ್ಯೆ ಇಂದು ಐಶ್ವರ್ಯಾ ರೈ ಮಗಳು ಆರಾಧ್ಯ ಜೊತೆ ಅತ್ತೆ ಮಾವ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ವಾಸ ಮಾಡುವ ನಿವಾಸ ಜಲ್ಸಾದಲ್ಲಿ ಕಾಣಿಸಿಕೊಂಡಿದ್ದು, ಅದರ ಫೋಟೋ ವೀಡಿಯೋಗಳು ವೈರಲ್ ಆಗಿವೆ. ಅಮ್ಮ ಮಗಳು ಇಬ್ಬರು ಆತುರದಲ್ಲಿ ಇದ್ದಂತೆ ಕಾಣುತ್ತಿದ್ದು, ಹಿಂದೆ ಬಿದ್ದ ಪಪರಾಜಿಗಳಿಗೆ ಪೋಸ್ ಕೊಡದೆ ಮುಂದೆ ಸಾಗಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ವೇಳೆ ಐಶ್ವರ್ಯಾ ರೈ ಅಲಿವ್ ಗ್ರೀನ್ ಬಣ್ಣದ ಬಟ್ಟೆ ಧರಿಸಿದ್ದರೆ, ಅತ್ತ ಮಗಳು ಆರಾಧ್ಯ ಶಾಲೆಯ ಸಮವಸ್ತ್ರದಲ್ಲಿದ್ದರು. ಐಶ್ವರ್ಯಾ ರೈಗೆ ಸಂಬಂಧಿಸಿದ ಅನೇಕ ಫ್ಯಾನ್ ಪೇಜ್‌ಗಳಲ್ಲಿ ಇವರ ವೀಡಿಯೋ ಅಪ್‌ಲೋಡ್ ಆಗಿದೆ. 

ಅಮ್ಮ ಮಗಳು ಇಬ್ಬರು ಕಾರಿನಿಂದ ಇಳಿಯುತ್ತಿರುವ ದೃಶ್ಯ ಈ ವೀಡಿಯೋದಲ್ಲಿ ಸೆರೆ ಆಗಿದೆ. ಐಶ್ವರ್ಯಾ ಹಾಗೂ ಆರಾಧ್ಯ ಇಂದು ಜಲ್ಸಾದಲ್ಲಿ ಕಾಣಿಸಿಕೊಂಡರು ಎಂದು ಈ ವೀಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.  ಈ ಜೋಡಿ ಎಲ್ಲೇ ಹೋಗಲಿ ಪಪಾರಾಜಿ ಕ್ಯಾಮರಾಗಳು ಅವರನ್ನು ಹಿಂಬಾಲಿಸುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಜೊತೆ ದುಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ದೃಶ್ಯ ಐಶ್ವರ್ಯಾ ಫ್ಯಾನ್ ಫೇಜ್‌ನಲ್ಲಿ ವೈರಲ್ ಆಗಿತ್ತು. 

ಐಶ್ವರ್ಯಾ ರೈಗೆ ಮೊಂಡುತನವಿದೆ ಎಂದ ಸಹೋದರ ಆದಿತ್ಯ ರೈ!

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಡಿವೋರ್ಸ್‌ ಪಡೆಯುತ್ತಿದ್ದಾರೆ ಎಂಬ ರೂಮರ್ಸ್‌ಗಳು ಇಂದು ನಿನ್ನೆಯದಲ್ಲ, ಐಶ್ವರ್ಯಾ ರೈ ಅತ್ತೆ ಮಾವನಿಂದ ದೂರವಾಗಿ ವಾಸ ಮಾಡುತ್ತಿದ್ದಾರೆ. ಐಶ್ವರ್ಯಾ ರೈ ಮಗಳೊಂದಿಗೆ ವಾಸ ಮಾಡ್ತಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು, ಆದರೆ ಅಭಿಷೇಕ್ ಆಗಲಿ ಐಸ್ವರ್ಯಾ ರೈ ಆಗಲಿ ತಮ್ಮ ಬಗೆಗಿನ ಈ ಊಹಾಪೋಗಳ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ, ಜುಲೈನಲ್ಲಿ ನಡೆದ ಅಂಬಾನಿ ಮಗ ಅನಂತ್ ಅಂಬಾನಿ ಮದ್ವೆ ಸಮಯದಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಬೇರೆ ಬೇರೆಯಾಗಿ ಕಾಣಿಸಿಕೊಂಡಾಗ ಈ ವಿಚ್ಚೇದನದ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿತ್ತು. ಈ ಮದುವೆಯಲ್ಲಿ ಐಶ್ವರ್ಯಾ ಮಗಳು ಆರಾಧ್ಯ ಜೊತೆ ಕಾಣಿಸಿಕೊಂಡಿದ್ದರೆ, ಅಭಿಷೇಕ್ ತನ್ನ ತಂದೆ ನಟ ಅಮಿತಾಭ್ ಬಚ್ಚನ್ ಅಮ್ಮ,ಜಯಾ ಬಚ್ಚನ್, ಸೋದರಿ ಶ್ವೇತಾ ಬಚ್ಚನ್ ಹಾಗೂ ಸೊಸೆ ನಂದಾ ನವೇಲಿ ಜೊತೆ ಕಾಣಿಸಿಕೊಂಡಿದ್ದರು. 

ಸೆಲೆಬ್ರಿಟಿಗಳು ಏನು ಮಾಡಿದರೂ ಸುದ್ದಿ, ಹೀಗಾಗಿ ಇತ್ತೀಚೆಗೆ ಗ್ರೇ ಡಿವೋರ್ಸ್‌ಗೆ ಸಂಬಂಧಿಸಿದ ಪೋಸ್ಟೊಂದಕ್ಕೆ ನಟ ಅಭಿಷೇಕ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಲೈಕ್ ಮಾಡಿದಾಗಲೂ ಈ ಡಿವೋರ್ಸ್‌ ರೂಮರ್ಸ್‌ಗೆ ಮತ್ತೆ ರೆಕ್ಕೆಪುಕ್ಕ ಹುಟ್ಟಿಕೊಂಡಿತ್ತು. ಅಂದಹಾಗೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರು  2007ರ ಏಪ್ರಿಲ್‌ನಲ್ಲಿ ಮದುವೆಯಾಗಿದ್ದು, 2011ರಲ್ಲಿ ಇವರಿಬ್ಬರಿಗೆ ಮಗಳು ಆರಾಧ್ಯ ಬಚ್ಚನ್ ಜನಿಸಿದರು. 

ದುಬೈ ಏರ್‌ಪೋರ್ಟ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್‌

ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ ಅಭಿಷೇಕ್ ಬಚ್ಚನ್ ಶಾರುಖ್ ಖಾನ್ ನಟನೆಯ ಕಿಂಗ್ ಸಿನಿಮಾದಲ್ಲಿ ಕಾಣಿಸಲಿದ್ದಾರೆ ಎಂದು ವರದಿಯಾಗಿದೆ.  ಅಭಿಷೇಕ್ ಬಚ್ಚನ್ ಹಾಗೂ ಶಾರುಖ್ ಖಾನ್ ಅವರು ಈ ಹಿಂದೆ ಕಬಿ ಅಲ್ವಿದ ನಾ ಕೆಹ್ನಾ ಹಾಗೂ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರು ಕೊನೆಯದಾಗಿ ಗೂಮರ್‌ನಲ್ಲಿ ಜೊತೆಯಾಗಿ ನಟಿಸಿದ್ದು, ಸಿಯಾಮಿ ಖೇರ್ ಹಾಗೂ ಅಂಗದ್ ಬೇಡಿ ಕೂಡ ಅಭಿಷೇಕ್ ಬಚ್ಚನ್ ಜೊತೆ ಈ ಸಿನಿಮಾದಲ್ಲಿದ್ದಾರೆ. 

ಐಶ್ವರ್ಯಾ ರೈ ಮಗಳಲ್ಲ, ಆಕೆ ನನ್ನ ಸೊಸೆ: ಜಯಾ ಬಚ್ಚನ್ ಹೇಳಿಕೆ ಹಿಂದಿನ ಮರ್ಮವೇನು?

 

Latest Videos
Follow Us:
Download App:
  • android
  • ios