Best electric bikes in India: ಪೆಟ್ರೋಲ್ ಬೆಲೆ ಏರಿಕೆ ಹಾಗೂ ನಗರದ ಟ್ರಾಫಿಕ್ ಕಿರಿಕಿರಿ ನಡುವೆ ಯುವಕರ ಡೈಲಿ ಆಫೀಸ್ ಮತ್ತು ಕಾಲೇಜು ಪ್ರಯಾಣಕ್ಕೆ ಎಲೆಕ್ಟ್ರಿಕ್ ಬೈಕ್ಗಳು ಬೆಸ್ಟ್ ಆಯ್ಕೆಯಾಗಿವೆ. ₹1.39 ಲಕ್ಷದ ಕಡಿಮೆ ಆರಂಭಿಕ ಬೆಲೆಯಿಂದ ಪ್ರೀಮಿಯಂ ಶ್ರೇಣಿಯವರೆಗೆ, 154 ರಿಂದ 323 ಕಿ.ಮೀ ರೇಂಜ್ ಹಾಗೂ ಸ್ಮಾರ್ಟ್ ಫೀಚರ್ಸ್ ಹೊಂದಿರುವ ಟಾಪ್ 3 ಸ್ಟೈಲಿಶ್ ಎಲೆಕ್ಟ್ರಿಕ್ ಬೈಕ್ಗಳ ಸಂಪೂರ್ಣ ವಿವರ ಇಲ್ಲಿದೆ.
ಪೆಟ್ರೋಲ್ ಬೆಲೆ ಏರಿಕೆ ಹಾಗೂ ನಗರದ ಟ್ರಾಫಿಕ್ ನಡುವೆ ಯುವಕರಲ್ಲಿ ಎಲೆಕ್ಟ್ರಿಕ್ ಬೈಕ್ಗಳ ಕ್ರೇಜ್ ಹೆಚ್ಚುತ್ತಿದೆ. ಕಾಲೇಜು ಅಥವಾ ಆಫೀಸ್ಗೆ ತೆರಳುವವರಿಗೆ ಸ್ಟೈಲಿಶ್ ಲುಕ್, ಸುಲಭ ಚಾಲನೆ ಹಾಗೂ ಉತ್ತಮ ರೇಂಜ್ ನೀಡುವ ಭಾರತೀಯ ಮಾರುಕಟ್ಟೆಯ 3 ಪ್ರಮುಖ ಎಲೆಕ್ಟ್ರಿಕ್ ಬೈಕ್ಗಳ ವಿವರ ಇಲ್ಲಿದೆ..
1. ರಾಯಲ್ ಎನ್ಫೀಲ್ಡ್ ಫ್ಲೈಯಿಂಗ್ ಫ್ಲೀ C6 (Royal Enfield Flying Flea C6)
ಈ ಬೈಕ್ ಟೂ-ಸ್ಟೇಜ್ ಬೆಲ್ಟ್ ಡ್ರೈವ್ ಹಾಗೂ 20.7 bhp ಪವರ್, 60 Nm ಟಾರ್ಕ್ ಉತ್ಪಾದಿಸುವ ಮೋಟಾರ್ ಹೊಂದಿದೆ. 115 kmph ಟಾಪ್ ಸ್ಪೀಡ್ ನೀಡಲಿದ್ದು, 3.7 ಸೆಕೆಂಡ್ನಲ್ಲಿ 0-60 kmph ವೇಗ ಪಡೆಯುತ್ತದೆ. 154 ಕಿ.ಮೀ IDC ರೇಂಜ್ ಹೊಂದಿದ್ದು, 65 ನಿಮಿಷದಲ್ಲಿ 20%-80% ಹಾಗೂ ಸುಮಾರು 2 ಗಂಟೆಯಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಇದರಲ್ಲಿ 3.5 ಇಂಚಿನ ರೌಂಡ್ TFT ಟಚ್ಸ್ಕ್ರೀನ್, ಗೂಗಲ್ ಮ್ಯಾಪ್ಸ್ ನ್ಯಾವಿಗೇಷನ್, 5 ರೈಡಿಂಗ್ ಮೋಡ್ಗಳು, ಲೀನ್-ಸೆನ್ಸಿಟಿವ್ ಡ್ಯುಯಲ್ ಚಾನೆಲ್ ABS ಮತ್ತು ಟ್ರಾಕ್ಷನ್ ಕಂಟ್ರೋಲ್ ಇವೆ. ಎಕ್ಸ್-ಶೋರೂಂ ಬೆಲೆ ₹2,79,000 (BaaS ಜೊತೆಗೆ ₹1,99,000) ಆಗಿದೆ.
2. ಓಬೆನ್ ರೋರ್ ಇವೊ (Oben Rorr Evo)
9 kW ಪೀಕ್ IPMSM ಮೋಟಾರ್ ಹೊಂದಿರುವ ಈ ಬೈಕ್ 250 Nm ವ್ಹೀಲ್ ಟಾರ್ಕ್ ಹಾಗೂ 110 kmph ಟಾಪ್ ಸ್ಪೀಡ್ ನೀಡುತ್ತದೆ. 180 ಕಿ.ಮೀ IDC ರೇಂಜ್ ಇದ್ದು, SmartIQ AI ಮೋಡ್ ಮೂಲಕ ಶೇ. 15ರಷ್ಟು ಹೆಚ್ಚುವರಿ ರೇಂಜ್ ಪಡೆಯಬಹುದು. Eco, City, Havoc ಮೋಡ್ಗಳು, 230mm ಗ್ರೌಂಡ್ ಕ್ಲಿಯರೆನ್ಸ್, 780mm ಸೀಟ್ ಹೈಟ್, 140kg ತೂಕ, 10L+4L ಸ್ಟೋರೇಜ್, LED ಪ್ರೊಜೆಕ್ಟರ್ ಹೆಡ್ಲೈಟ್, ಆ್ಯಪ್ ಕನೆಕ್ಟಿವಿಟಿ ಮತ್ತು ಥೆಫ್ಟ್ ಅಲರ್ಟ್ ಸೌಲಭ್ಯವಿದೆ. ಫುಲ್ ಚಾರ್ಜ್ಗೆ 5 ಗಂಟೆ ಬೇಕು. ಇದರ ಎಕ್ಸ್-ಶೋರೂಂ ಬೆಲೆ ₹1,39,999 ಆಗಿದೆ.
3. ಅಲ್ಟ್ರಾವಯಲೆಟ್ F77 (Ultraviolette F77)
ಇದರಲ್ಲಿರುವ ಪರ್ಮನೆಂಟ್ ಮ್ಯಾಗ್ನೆಟ್ AC ಮೋಟಾರ್ 27 kW ಪವರ್, 90 Nm ಟಾರ್ಕ್ (Recon/SuperStreet ನಲ್ಲಿ 30 kW, 100 Nm) ಉತ್ಪಾದಿಸುತ್ತದೆ. 155 kmph ಟಾಪ್ ಸ್ಪೀಡ್ ಹೊಂದಿದ್ದು, 2.8 ಸೆಕೆಂಡ್ನಲ್ಲಿ 0-60 kmph ಹಾಗೂ 7.7 ಸೆಕೆಂಡ್ನಲ್ಲಿ 0-100 kmph ವೇಗ ತಲುಪುತ್ತದೆ. 7.1kWh ಮಾದರಿ 211 ಕಿ.ಮೀ ಮತ್ತು 10.3kWh ಮಾದರಿ 323 ಕಿ.ಮೀ IDC ರೇಂಜ್ ನೀಡುತ್ತದೆ. 5 ಇಂಚಿನ TFT ಕ್ಲಸ್ಟರ್, ಬ್ಲೂಟೂತ್/ವೈ-ಫೈ, Glide-Combat-Ballistic ಮೋಡ್ಗಳು, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್, DSC ಮತ್ತು ಪಾರ್ಕ್ ಅಸಿಸ್ಟ್ ಫೀಚರ್ಸ್ ಇವೆ. F77 Mach 2 Original ಬೆಲೆ ₹3,09,000 (BaaS ₹1,99,000) ಹಾಗೂ Recon ಬೆಲೆ ₹4,24,000 (BaaS ₹2,49,000) ಆಗಿದೆ.
ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳು
ಆನ್-ರೋಡ್ ಬೆಲೆ: ಲೇಖನದಲ್ಲಿರುವುದು ಎಕ್ಸ್-ಶೋರೂಂ ಬೆಲೆಯಾಗಿದ್ದು, ರಾಜ್ಯದಿಂದ ರಾಜ್ಯಕ್ಕೆ ಆರ್ಟಿಒ, ಇನ್ಶೂರೆನ್ಸ್ ಹಾಗೂ ಇವಿ ಸಬ್ಸಿಡಿ ಆಧಾರದ ಮೇಲೆ ಆನ್-ರೋಡ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.
ಚಾರ್ಜಿಂಗ್ ವ್ಯವಸ್ಥೆ: ಪ್ರತಿದಿನದ ಆಫೀಸ್ ಪ್ರಯಾಣದ ದೂರ ಮತ್ತು ಮನೆ/ಆಫೀಸ್ ಪಾರ್ಕಿಂಗ್ನಲ್ಲಿ ಚಾರ್ಜಿಂಗ್ ಪಾಯಿಂಟ್ ಲಭ್ಯತೆಯನ್ನು ಗಮನಿಸಿ ಬೈಕ್ ಆಯ್ಕೆ ಮಾಡುವುದು ಉತ್ತಮ.















