ಈ ಸ್ಕೂಟರ್ ಲಭ್ಯ ಇರೋದಿಲ್ಲ, ಹೊಂಡಾ ಆಕ್ಟಿವಾಗೆ ಪ್ರಬಲ ಪೈಪೋಟಿ ಆಗಿದ್ದ ವಾಹನ
ಹೊಂಡಾ ಆಕ್ಟೀವಾಗೆ ಪ್ರಬಲ ಪೈಪೋಟಿ ನೀಡುತ್ತಿರುವ ಸುಜುಕಿ ಆಕ್ಸೆಸ್ 125ರ ನಾನ್-ಎಬಿಎಸ್ ರೈಡ್ ಕನೆಕ್ಟ್ ಟಿಎಫ್ಟಿ ಆವೃತ್ತಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೊಸ ಅಪ್ಡೇಟೆಡ್ ಆವೃತ್ತಿಗಳ ಬಿಡುಗಡೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹೊಂಡಾ ಆಕ್ಟೀವಾಗೆ ಪ್ರಬಲ ಪೈಪೋಟಿ
ಹೊಂಡಾ ಆಕ್ಟೀವಾಗೆ (Honda Activa) ಪ್ರಬಲ ಸ್ಪರ್ಧಿಯಾಗಿರುವ ಸುಜುಕಿ ಆಕ್ಸೆಸ್ನ ಎಬಿಸಿ ಅಲ್ಲದ 125 ರೈಡ್ ಕನೆಕ್ಟ್ ಟಿಎಫ್ಟಿ ವರ್ಸನ್ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನ ನೀಡಿಲ್ಲ. ಹೊಸದಾಗಿ ಮೂರು ಅಪ್ಡೇಟ್ variant ರಿಲೀಸ್ ಹಿನ್ನೆಲೆಯಲ್ಲಿ ಹಳೆಯ ಮಾಡೆಲ್ಗೆ ಗುಡ್ಬೈ ಹೇಳಿದೆ ಎನ್ನಲಾಗಿದೆ.
Non-ABS Access 125 Ride Connect TFT
ಅಂದ್ಹಾಗೆ ಸುಜುಕಿ ಪ್ರತಿ ತಿಂಗಳು ಸಾವಿರಾರು ಯೂನಿಟ್ಗಳನ್ನ ಸುಜುಕಿ ಮಾರಾಟ ಮಾಡುತ್ತಿದೆ. ಇದರೊಂದಿಗೆ ದೇಶದಲ್ಲಿ ಅತೀ ಹೆಚ್ಚು ಸ್ಕೂಟರ್ಗಳನ್ನ ಮಾರಾಟ ಮಾಡುವ ಟಾಪ್ ಮೂರು ಸ್ಕೂಟರ್ಗಳಲ್ಲಿ ಸುಜುಕಿ ಆಕ್ಸೆಸ್ ಕೂಡ ಇರುತ್ತದೆ. ಹೀಗಿದ್ದೂ ರೈಡ್ ಕನೆಕ್ಟ್ TFT ಅನ್ನು (non-ABS Access 125 Ride Connect TFT) ಸ್ಥಗಿತ ಮಾಡಿದೆ ಎನ್ನಲಾಗುತ್ತಿದ್ದರೂ, ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಜೊತೆಗೆ ಬೆಲೆ ಪಟ್ಟಿಯಲ್ಲಿ ಅದರ ಬೆಲೆ 93877 ರೂಪಾಯಿ ನಿಗಧಿ ಮಾಡಿದೆ.
ಯಾಕೆ ಸ್ಥಗಿತ?
ರೈಡ್ ಕನೆಕ್ಟ್ TFT ಅನ್ನ ಸ್ಥಗಿತ ಮಾಡಿರುವ ಹಿಂದೆ ಬಲವಾದ ಕಾರಣ ಇದೆ. ಆಕ್ಸಸ್ ಶ್ರೇಣಿಯನ್ನು ನವೀಕರಿಸಿ ಹೊಸ ಸ್ಕೂಟರ್ಗಳನ್ನ ಪರಿಚಯಿಸಿದೆ. ಫೇಸ್ಲಿಫ್ಟ್ ಮಾಡಿದ ಆಕ್ಸೆಸ್ ಬಂದ ಸುಮಾರು 4 ತಿಂಗಳ ನಂತರ ಸುಜುಕಿ ರೈಡ್ ಕನೆಕ್ಟ್ ಟಿಎಫ್ಟಿ ರೂಪಾಂತರ ಮೇ 2025 ರಲ್ಲಿ ಬಿಡುಗಡೆ ಮಾಡಿದೆ. ಸ್ಕೂಟರ್ನ ರೈಡ್ ಕನೆಕ್ಟ್ ರೂಪಾಂತರವು ₹91,627 ಗೆ ಮತ್ತು ರೈಡ್ ಕನೆಕ್ಟ್ ಎಬಿಎಸ್ ರೂಪಾಂತರವು ₹98,432 ಗೆ ಲಭ್ಯವಿದೆ. ಹೆಚ್ಚಿನ ವೈಶಿಷ್ಟ್ಯಗಳನ್ನು ಬಯಸುವ ಗ್ರಾಹಕರು ರೈಡ್ ಕನೆಕ್ಟ್ ಟಿಎಫ್ಟಿ ಎಬಿಎಸ್ ವರ್ಸನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
- ಸುಜುಕಿ ಆಕ್ಸೆಸ್ 125 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ
- 12 ಇಂಚಿನ ಮುಂಭಾಗ ಮತ್ತು 10 ಇಂಚಿನ ಹಿಂಭಾಗದ ಚಕ್ರ ಹೊಂದಿದೆ
- ಸ್ಕೂಟರ್ 24.4 ಲೀಟರ್ ಅಂಡರ್ ಸೀಟ್ ಸ್ಟೋರೇಜ್
ಮಾರುಕಟ್ಟೆ ಡಿಮ್ಯಾಂಡ್ ಹೇಗಿದೆ?
ಅಕ್ಟೋಬರ್ ತಿಂಗಳಿನಲ್ಲಿ ನಡೆದ ವಹಿವಾಟಿನ ಪ್ರಕಾರ, ಕಳೆದ ತಿಂಳಿನಲ್ಲಿ 83864 ಯೂನಿಟ್ಗಳನ್ನ ಮಾರಾಟ ಮಾಡಿದೆ. ಒಟ್ಟು 124,599 ವಾಹನಗಳನ್ನ ಮಾರಾಟ ಮಾಡಿದೆ ಎಂದು ವರದಿ ಆಗಿದೆ. ಕಂಪನಿಯ ಎರಡನೇ ಸ್ಕೂಟರ್ ಬರ್ಗ್ಮ್ಯಾನ್ ಎರಡನೇ ಸ್ಥಾನದಲ್ಲಿದೆ. ಅಕ್ಟೋಬರ್ನಲ್ಲಿ 31,856 ಯುನಿಟ್ಗಳು ಮಾರಾಟವಾಗಿವೆ. ಇದರ ಅರ್ಥ ಆಕ್ಸೆಸ್ ಮತ್ತು ಬರ್ಗ್ಮ್ಯಾನ್ ನಡುವೆ ಸುಮಾರು 50,000 ಯುನಿಟ್ಗಳ ಮಾರಾಟದ ವ್ಯತ್ಯಾಸವಿದೆ. ಎರಡೂ ಮಾದರಿಗಳು ವರ್ಷದಿಂದ ವರ್ಷಕ್ಕೆ ಮತ್ತು ತಿಂಗಳಿನಿಂದ ತಿಂಗಳಿಗೆ ಮಾರಾಟವಾಗಿದೆ.















