ಜಗತ್ತು ಎಲೆಕ್ಟ್ರಿಕ್ ವಾಹನ ಕುರಿತು ಕಣ್ಣು ತೆರೆಯುವ ಮೊದಲೇ ಇತಿಹಾಸ ಬರೆದಿತ್ತು ಭಾರತ ಈ ಸಾಧನೆಗೆ ಕಾರಣವಾಗಿದ್ದು ನಮ್ಮ ಮೈಸೂರು ಹಾಗೂ ಧಾರವಾಡ 40 ವರ್ಷಗಳ ಹಿಂದೆ ಭಾರತದ ರಸ್ತೆಯಲ್ಲಿ ಓಡಿತ್ತು ಎಲೆಕ್ಟ್ರಿಕ್ ಸ್ಕೂಟರ್

ಮೈಸೂರು(ಡಿ.05): ವಿಶ್ವದಲ್ಲೀಗ ಎಲೆಕ್ಟ್ರಿಕ್ ವಾಹನಗಳ(Electric Vehilce) ಆವಿಷ್ಕಾರ ನಡೆಯುತ್ತಿದೆ. ಪ್ರತಿ ದಿನ ಹೊಸ ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗುತ್ತಿದೆ. ಇಂಧನ ದರ(Fuel price), ಮಾಲಿನ್ಯಕ್ಕೆ ಮುಕ್ತಿ ನೀಡಲು ವಿಶ್ವದಲ್ಲೇ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ವಿಶ್ವದಲ್ಲಿ ಇಂಧನ ವಾಹನದ ಅಭಿವೃದ್ಧಿ ನಡೆಯುತ್ತಿರುವಾಗಲೇ ಭಾರತ(India) ಎಲೆಕ್ಟ್ರಿಕ್ ಸ್ಕೂಟರ್ ರಸ್ತೆಗಿಳಿಸಿ ಸೈ ಎನಿಸಿಕೊಂಡಿತ್ತು. ಇದು ಬರೋಬ್ಬರಿ 40 ವರ್ಷಗಳ ಹಿಂದೆ. ಈ ಐತಿಹಾಸಿಕ ಸಾಧನೆಗೆ ಕಾರಣವಾಗಿದ್ದು ಮೈಸೂರು(Mysuru).

ಈ ಕುರಿತು ಸ್ಟಾರ್ ಆಫ್ ಮೈಸೂರು ಮಾಧ್ಯಮ ಬೆಳುಕು ಚೆಲ್ಲಿದೆ. ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕೀರ್ತಿ ಕರ್ನಾಟಕದ(Karnataka) ಮೈಸೂರಿಗಿದೆ. ಇದು 1980-81ರಲ್ಲಿ ಹೊಸ ಕ್ರಾಂತಿ ಮಾಡಿ ಇತಿಹಾಸ ಪುಟ ಸೇರಿಕೊಂಡ ಘಟನೆ. ಧಾರವಾಡದಲ್ಲಿ ಸ್ಥಾಪನೆಯಾದ ಎಲೆಕ್ಟ್ರಾನಿಕ್ ಮೊಬೈಲ್ಸ್ ಇಂಡಿಯಾ ಲಿಮಿಟೆಡ್(Electromobiles India Limited ) ಕಂಪನಿ ಭಾರತದ ಇಂಧನ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯಾಗಿತ್ತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಇಂಧನ ಆಯೋಗದ ಅಧ್ಯಕ್ಷರಾಗಿದ್ದರು. ಭಾರತದಲ್ಲಿ ಎಲೆಕ್ಟ್ರಾನಿಕ್ ಬಿಡಿ ಭಾಗಗಳು ಸೇರಿದಂತೆ ಇಂಧನ ಆಯೋಗದ ಜೊತೆ ಕಾರ್ಯನಿರ್ವಹಿಸುತ್ತಿದ್ದ ಎಲೆಕ್ಟ್ರಾನಿಕ್ ಮೊಬೈಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿ 1977-78ರಲ್ಲಿ ಮೈಸೂರಿಗೆ ಸ್ಥಳಾಂತರಗೊಂಡಿತ್ತು.

240 ಕಿ.ಮೀ ಮೈಲೇಜ್, ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್

ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶ ಸೂರ್ಯ ಕುಮಾರ್ ಕಿಕ್ಕೇರಿ ಮೈಸೂರಿನ ಇಳವಾಲದಲ್ಲಿ ಮತ್ತಷ್ಟು ಚುರುಕಿನೊಂದಿಗೆ ಕಂಪನಿ ಮುಂದುವರಿಸಿದರು. ಬಳಿಕ ಇಳವಾಲದಿಂದ ಹುಣಸೂರು ರಸ್ತೆಯ ಪ್ರಿಮಿಯರ್ ಸ್ಟುಡಿಯೋ ಬಳಿಗೆ ಸ್ಥಳಾಂತರಗೊಂಡಿತು. 

ಎಲೆಕ್ಟ್ರಾನಿಕ್ ಮೊಬೈಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿ 1980-81ರಲ್ಲಿ ಕೋಮಲ್(Komal Electric Scooter) ಹೆಸರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮಾಡಿತು. ಬಳಿಕ ಪರೀಕ್ಷಾರ್ಥವಾಗಿ ಭಾರತದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್‌(ARAI)ಗೆ ಕಳುಹಿಸಿಕೊಡಲಾಯಿತು. ಪುಣೆಯಲ್ಲಿರುವ ARAI ಈ ಸ್ಕೂಟರನ್ನು ಹಲವು ಪರೀಕ್ಷೆಗೆ ಒಳಪಡಿಸಿತು. ಯಾವುದೇ ವಾಹನ ರಸ್ತೆಗಿಳಿಸಲು ARAI ಸರ್ಟಿಫಿಕೇಟ್ ಅಗತ್ಯ. ARAI ಪರೀಕ್ಷೆಗಳನ್ನು ಪಾಸ್ ಮಾಡಿದ ಕೋಮಲ್ ಸ್ಕೂಟರ್ ಉತ್ಪಾದನೆಗೆ ಸಜ್ಜಾಯಿತು.

Electric vehicles: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸ್ಕೂಟರ್ ಡಿಲಿವರಿ ದಿನಾಂಕ ಪ್ರಕಟ

ಇದು ಮತ್ತಷ್ಟು ಹೆಮ್ಮೆಯ ವಿಚಾರ ಅಂದರೆ ಮೈಸೂರಿನಲ್ಲಿ ಆರಂಭಗೊಂಡ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭಾರತಾದ್ಯಂತದಿಂದ 10,000 ಬುಕಿಂಗ್ ಆಗಿತ್ತು. ಸದ್ಯ ಭಾರತದ ಬಹುತೇಕ ಎಲೆಕ್ಟ್ರಿಕ್ ಸ್ಕೂಟರ್‌ ಕಂಪನಿ ಸ್ಕೂಟರ್‌ಗೆ ಬ್ಯಾಟರಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಕೋಮಲ್ ಸ್ಕೂಟರ್ ಮೈಸೂರಿನಲ್ಲೇ ಬ್ಯಾಟರಿ ಉತ್ಪಾದಿಸಿತ್ತು. ಕೇವಲ ಸ್ಕೂಟರ್‌ನ ಎಲೆಕ್ಟ್ರಿಕ್ ಮೋಟಾರ್ ಅಮೆರಿದಿಂದ ಆಮದು ಮಾಡಿಕೊಳ್ಳಲಾಗಿತ್ತು. ಅಮೆರಿದ ಹೊನಿವೆಲ್ ಕಂಪನಿ ಎಲೆಕ್ಟ್ರಿಕ್ ಮೋಟಾರ್ ಪೂರೈಕೆ ಮಾಡಿತ್ತು.

12 ವೋಲ್ಟ್ 70 AH ಬ್ಯಾಟರಿ ಹೊಂದಿಗ ಕೋಮಲ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 70 ಕಿ.ಮೀ ಮೈಲೇಜ್ ನೀಡುತ್ತಿತ್ತು. ಈ ಸ್ಕೂಟರ್ ಚಾರ್ಜ್ ಮಾಡಲು ಚಾರ್ಜಿಂಗ್ ಯುನಿಟ್ ನೀಡಲಾಗುತ್ತಿತ್ತು. ಅಂದು ಈ ಸ್ಕೂಟರ್ ಬೆಲೆ ಸರಿಸುಮಾರು 6,000 ರೂಪಾಯಿ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೋಮಲ್ ಸ್ಕೂಟರ್ ಕೇವಲ 500 ಸ್ಕೂಟರ್ ಮಾತ್ರ ಉತ್ಪಾದಿಸಲು ಸಾಧ್ಯವಾಯಿತು. ಹಲವು ಪ್ರಯತ್ನ ನಡೆಸಿ ಮತ್ತೆ ಸ್ಕೂಟರ್ ಉತ್ಪಾದನೆಗೂ ಮುಂದಾದರೂ ಆರ್ಥಿಕ ಸಂಕಷ್ಟದಿಂದ ಕಂಪನಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ 10,000 ಸ್ಕೂಟರ್ ಬುಕ್ ಆದರೂ 500 ಸ್ಕೂಟರ್ ಉತ್ಪಾದಿಸಿ ವಿತರಿಸಿತ್ತು.

ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಿದ ಕೀರ್ತಿ ನಮ್ಮ ಮೈಸೂರಿಗಿದೆ. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ವಿಫಾಗದಲ್ಲಿ ಬೆಂಗಳೂರಿನಲ್ಲಿ ಅತೀ ಹೆಚ್ಟು ಕಂಪನಿಗಳಿವೆ. ಎದರ್, ಓಲಾ, ಸಿಂಪಲ್ ಓನ್, ಪ್ರೈವೇಗ್ ಸೇರಿದಂತೆ ಹಲವು ಎಲೆಕ್ಟ್ರಿಕ್ ವಾಹನ ಕಂಪನಿಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.