Electric vehicles: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸ್ಕೂಟರ್ ಡಿಲಿವರಿ ದಿನಾಂಕ ಪ್ರಕಟ
- ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಓಲಾ ಸ್ಕೂಟರ್ ಡೆಲಿವರಿಗೆ ಕೌಂಟ್‌ಡೌನ್
- ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿದವರಿಗೆ ಇದೇ ತಿಂಗಳು ಕೈಸೇರಲಿದೆ ಸ್ಕೂಟರ್
- ನವೆಂಬರ್ ತಿಂಗಳಲ್ಲಿ ವಿತರಣೆಯಾಗಬೇಕಿದ್ದ ಎಲೆಕ್ಟ್ರಿಕ್ ಬೈಕ್
ಬೆಂಗಳೂರು(ಡಿ.05): ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಓಲಾ ಎಲೆಕ್ಟ್ರಿಕ್(Ola Electric Scooter) ಸ್ಕೂಟರ್ ಬೈಕ್ ಈಗಾಗಲೇ ಟೆಸ್ಟ್ ರೈಡ್ ಮುಗಿಸಿದೆ. ಇದೀಗ ವಿತರಣೆಗೆ(Delivery) ಸಜ್ಜಾಗಿದೆ. ಇದೇ ಡಿಸೆಂಬರ್ 15 ರಿಂದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಆರಂಭಗೊಳ್ಳುತ್ತಿದೆ. ಈ ಕುರಿತು ಓಲಾ ಸಿಇಓ ಹಾಗೂ ಸಹ ಸಂಸ್ಥಾಪಕ ಭವಿಷ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಮೊದಲು ಅಕ್ಟೋಬರ್ 25, ಬಳಿಕ ನವೆಂಬರ್ 25 ರಿಂದ ಓಲಾ ಸ್ಕೂಟರ್ ವಿತರಣೆ ಆರಂಭಗೊಳ್ಳಲಿದೆ ಎಂದು ಓಲಾ ಕಂಪನಿ ಹೇಳಿತ್ತು. ಆದರೆ ಕೆಲ ಕಾರಣಗಳಿಂದ ಓಲಾ ಸ್ಕೂಟರ್ ವಿತರಣೆ ವಿಳಂಬವಾಗಿತ್ತು. ಇದೀಗ ಡಿಸೆಂಬರ್ 15 ರಿಂದ ಓಲಾ ಸ್ಕೂಟರ್ ವಿತರಣೆಯಾಗಲಿದೆ ಎಂದು ಭವಿಷ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ. ಓಲಾ ಬುಕ್ ಮಾಡಿದ ಗ್ರಾಹಕರಿಗೆ ಈಗಾಗಲೇ ಕಂಪನಿ ಇ ಮೇಲ್ ಮೂಲಕ ನೂತನ ಡೆಲಿವರಿ ದಿನಾಂಕವನ್ನು ತಿಳಿಸಿದೆ. ನಾಲ್ಕು ತಿಂಗಳಿನಿಂದ ಓಲಾ ಸ್ಕೂಟರ್‌ಗಾಗಿ ಕಾಯುತ್ತಿದ್ದ ಗ್ರಾಹಕರಿಗೆ(Customers) ಇದೀಗ ಸ್ಕೂಟರ್ ಲಭ್ಯವಾಗಲಿದೆ. ಭಾರತದ ರಸ್ತೆಗಳಲ್ಲಿ ಇನ್ನು ಓಲಾ ಅಬ್ಬರ ಆರಂಭಗೊಳ್ಳಲಿದೆ. ಓಲಾ ಸ್ಕೂಟರ್ ಉತ್ಪಾದನೆ ಚುರುಕಿನಿಂದ ಆಗುತ್ತಿದೆ. ಎಲ್ಲವೂ ಸಜ್ಜಾಗಿದೆ. ಡಿಸೆಂಬರ್ 15 ರಿಂದ ಡಿಲಿವರಿ ಆರಂಭಗೊಳ್ಳುತ್ತಿದೆ ಎಂದು ಭವಿಷ್ ಅಗರ್ವಾಲ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
18 ನಿಮಿಷದಲ್ಲಿ ಶೇ.50 ರಷ್ಟು ಚಾರ್ಚ್; ಓಲಾ ಸ್ಕೂಟರ್ ಮೊದಲ ಹೈಪರ್ ಚಾರ್ಚರ್ ಲಾಂಚ್!
ಓಲಾ ಸ್ಕೂಟರ್ ಕೇವಲ 499 ರೂಪಾಯಿ ನೀಡಿ ಬುಕ್(Booking) ಮಾಡಿಕೊಳ್ಳಬಹುದು. ಮತ್ತೊಂದು ವಿಶೇಷ ಅಂದರೆ ದಾಖಲೆ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಆದ ಹೆಗ್ಗಳಿಕೆಯೂ ಓಲಾಗಿದೆ. ನವೆಂಬರ್ 20 ರಿಂದ ಓಲಾ ದೇಶಾದ್ಯಂತ ಟೆಸ್ಟ್ ರೈಡ್(Test Ride) ಆರಂಭಿಸಿದೆ. ಈಗಾಗಲೇ 20,000ಕ್ಕೂ ಹೆಚ್ಚು ಟೆಸ್ಟ್ ರೈಡ್ ಮಾಡಲಾಗಿದೆ. ಇನ್ನು ಪ್ರತಿ ತಿಂಗಳು 10,000 ಟೆಸ್ಟ್ ರೈಡ್ ಮಾಡುವ ಗುರಿ ಇಟ್ಟುಕೊಂಡಿದೆ. ದೇಶದ 1,000 ನಗರಗಳಲ್ಲಿ ಟೆಸ್ಟ್ ರೈಡ್ ನಡೆಯಲಿದೆ.
ಭಾರತದಲ್ಲಿ ಓಲಾ ಕಂಪನಿ ಓಲಾ S1 ಹಾಗೂ S1 Pro ಸ್ಕೂಟರ್ ಬಿಡುಗಡೆ ಮಾಡಿದೆ. ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಓಲಾ S1 Pro ಬೆಲೆ 1.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಒಂಜು ಬಾರಿ ಚಾರ್ಜ್ ಮಾಡಿದರೆ 121 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇನ್ನು ಓಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ.
ಮೊದಲ ದಿನ 600 ಕೋಟಿ ಮೌಲ್ಯದ 80,000 ಸ್ಕೂಟರ್ ಮಾರಿದ ಓಲಾ!
ಓಲಾದಲ್ಲಿ ನಾರ್ಮಲ್, ಸ್ಪೋರ್ಟ್ಸ್ ಹಾಗೂ ಹೈಪರ್ ಮೊಡ್ ರೈಡ್ ಆಯ್ಕೆಗಳಿವೆ. Android-ಆಧಾರಿತ OS, ಅಪ್ಲಿಕೇಶನ್ ನಿಯಂತ್ರಣ, ಸ್ಪೀಕರ್‌ಗಳು, ಚಾರ್ಜಿಂಗ್‌ಗಾಗಿ USB ಪಾಯಿಂಟ್ ಮತ್ತು ಸೀಟಿನ ಕೆಳಗೆ ದೊಡ್ಡ ಲಗೇಜ್ ಬಾಕ್ಸ್ ಹಾಗೂ ದೊಡ್ಡ ಡಿಸ್‌ಪ್ಲೇ ಹೊಂದಿದೆ.ಓಲಾ ಸ್ಕೂಟರ್‌ನಲ್ಲಿ 8.5kW ಮೋಟಾರ್ ಬಳಸಲಾಗಿದೆ. ಇದರಿಂದ 40 ಕಿ.ಮೀ ವೇಗವನ್ನು ಕೇವಲ 3 ಸೆಕೆಂಡ್‌ಗಳಲ್ಲಿ ತಲುಪಲಿದೆ. ಟಾಪ್ ಸ್ಪೀಡ್ 115kph.
ಸದ್ಯ ಓಲಾ ಸ್ಕೂಟರ್ ಬುಕ್ ಮಾಡಲು ಗ್ರಾಹಕರು ಕಾಯಬೇಕು. ಕಾರಣ ಮೊದಲು ಅವಧಿಯಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಇದೇ ಡಿಸೆಂಬರ್ 15 ರಿಂದ ಸ್ಕೂಟರ್ ವಿತರಣೆಯಾಗಲಿದೆ. ಇನ್ನು ಬುಕ್ ಮಾಡಲು ಇಚ್ಚಿಸುವ ಗ್ರಾಹಕರಿಗೆ ಓಲಾ ಎರಡನೇ ಬುಕಿಂಗ್ ತರೆಯಲಿದೆ. 2022ರ ಜನವರಿಯಿಂದ ಎರಡನೇ ಬುಕಿಂಗ್ ಆರಂಭಿಸಲಿದೆ ಎಂದು ಓಲಾ ಕಂಪನಿ ಹೇಳಿದೆ.
ದೇಶದಲ್ಲಿ ಇದೀಗ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಕಾರು ಬಿಡುಗಡೆಯಾಗುತ್ತಿದೆ. ಗರಿಷ್ಠ ಮೈಲೇಜ್ ಹಾಗೂ ಕಡಿಮೆ ಬೆಲೆ ಸೇರಿದಂತೆ ಹಲವು ಅವಿಷ್ಕಾರಗಳು ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣದ ಹಬ್ ಆಗಿ ಮಾರ್ಪಡುತ್ತಿದೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಅತ್ಯುತ್ತಮ ವಿನ್ಯಾಸ, ದಕ್ಷ ಮೋಟಾರ್, ಬ್ಯಾಟರಿ ಬ್ಯಾಕ್ಅಪ್‌ನೊಂದಿಗೆ ಸ್ಕೂಟರ್ ಬಿಡುಗಡೆಯಾಗುತ್ತಿದೆ.