Asianet Suvarna News Asianet Suvarna News

Aravind Limbavali Row: ಮಹಿಳಾ ಆಯೋಗಕ್ಕೆ ದೂರು, ಕಾನೂನು ಸಮರಕ್ಕೆ ಮುಂದಾದ ಮೇರಿ

Aravind Limbavali misbehaviour row: ಅರವಿಂದ ಲಿಂಬಾವಳಿ ಅನುಚಿತ ವರ್ತನೆ ಪ್ರಕರಣ ಇಲ್ಲಿಗೇ ನಿಲ್ಲುವಂತೆ ಭಾಸವಾಗುತ್ತಿಲ್ಲ. ಘಟನೆಯ ಸಂತ್ರಸ್ತೆ ಸಗಾಯಿ ಮೇರಿ ಅರವಿಂದ ಲಿಂಬಾವಳಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.

victim of Aravind Limbavali's misbehaviour sagayi meri says she will take legal action
Author
First Published Sep 3, 2022, 4:24 PM IST

ಬೆಂಗಳೂರು: ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಸಂಬಂಧ ಅರವಿಂದ ಲಿಂಬಾವಳಿ ಈಗಾಗಲೇ ಪ್ರತಿಕ್ರಿಯೆ ನೀಡಿದ್ದು ಸಮರ್ಥಿಸಿಕೊಂಡಿದ್ದಾರೆ. ಇದೀಗ ಮಹಿಳೆ ಸಗಾಯಿ ಮೇರಿ ಕೂಡ ಪ್ರತಿಕ್ರಿಯೆ ನೀಡಿದ್ದ ಅರವಿಂದ ಲಿಂಬಾವಳಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಅರವಿಂದ ಲಿಂಬಾವಳಿ ವಿರುದ್ಧ ಕಾನೂನು ಸಮರಕ್ಕೆ ಸಿದ್ಧಳಿದ್ದೇನೆ, ಹೆಣ್ಣು ಎಂದೂ ನೋಡದೇ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದವರು ಹೇಳಿದ್ದಾರೆ. "ನಿಮ್ಮನ್ನ ಪೊಲೀಸರಿಂದ ಅರೆಸ್ಟ್ ಮಾಡಿಸ್ತೀನಿ ಅಂತ ಹೇಳಿದ್ದಾರೆ. ನಾಗರೀಕ ಸಮಾಜದಲ್ಲಿ ಸಮಸ್ಯೆ ಹೇಳಿಕೊಳ್ಳೋಕೆ ಹೋದರೆ ಈ ರೀತಿ ದರ್ಪ ತೋರಿಸೋದು ಎಷ್ಟು ಸರಿ. ನಾವು ಮಹಿಳೆಯರು ಲಿಂಬಾವಳಿ ಅವರ ಪಾಲಿಗೆ ಎರಡನೇ ದರ್ಜೆಯ ಸ್ಥಾನದಲ್ಲಿದ್ದೇವೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಧ್ವನಿ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ಬಿಜೆಪಿ ನಾಯಕರ ಕೆಟ್ಟ ಮನಸ್ಥಿತಿ ಬಯಲಾಗ್ತಿದೆ. ನಾನೇನು ಆ ಮಹಿಳೆಗೆ ರೇಪ್ ಮಾಡೋಕೆ ಹೋಗಿದ್ನಾ ಅಂತ ಒಂದು ಮಾಧ್ಯಮದಲ್ಲಿ ಹೇಳಿದ್ದಾರೆ. ಹೆಂಗೆ ಇಂತ ಪದ ಬಳಕೆ ಮಾಡೋಕೆ ಬಿಜೆಪಿ ಹಿರಿಯ ನಾಯಕರು ಸಪೋರ್ಟ್ ಮಾಡ್ತಿರಾ?," ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದ ಮೇರಿ, "ನನಗೆ ಬಹಳ ನೋವಾಗ್ತಿದೆ. ಇಂಥಾ ಶಾಸಕರು ಬೇಕಾ ನಮಗೆ? ಇಂತ ಶಾಸಕರು ಬಗ್ಗೆ ನಾವು ಮಾತನಾಡುವಂತಿಲ್ಲ. ಯಾಕಂದ್ರೆ ಕೋರ್ಟ್ ಇಂದ ಸ್ಟೇ ಆರ್ಡರ್ ತಂದಿದ್ದಾರೆ. ಅವರ ಪುತ್ರಿ ಕೂಡ ಇವರ ಅಧಿಕಾರದ ಹೆಸರಲ್ಲಿ ನ್ಯುಸೆನ್ಸ್ ಕ್ರಿಯೇಟ್ ಮಾಡ್ತಾರೆ. ಅರವಿಂದ ಲಿಂಬಾವಳಿ ಬೇಷರತ್ ಕ್ಷಮೆ ಕೋರಬೇಕು. ಕ್ಷಮೆ ಕೋರದೇ ಇದ್ರೆ ಬಿಜೆಪಿ ಪಕ್ಷದವರು ಅವರನ್ನ ಪಕ್ಷದಿಂದ ಕೈ ಬಿಡಲಿ," ಎಂದು ಸಗಾಯಿ ಮೇರಿ ಹೇಳಿದ್ದಾರೆ.

ಇದನ್ನೂ ಓದಿ: Aravind Limbavali ದರ್ಪ ಪ್ರಕರಣ: ಸುರ್ಜೆವಾಲಾ ಟೀಕೆಗೆ ಲಿಂಬಾವಳಿ ಗರಂ, ಟ್ವಿಟ್ಟರ್‌ನಲ್ಲಿ ವಾರ್‌

"ನಮ್ಮ ಮನೆಯ ಗೋಡ ಒಡೆದು ಹಾಕ್ತಿದ್ದರು. ಬಿಬಿಎಂಪಿ ಕಮಿಷನರ್, ಬಿಜೆಪಿ ನಾಯಕರು ಇದ್ರು. ನಮ್ಮ ಮನೆ ಗೋಡೆ ಒತ್ತುವರಿ ಅಂತ ಡೆಮಾಲಿಷ್ ಮಾಡಿದ್ರು. ನಮ್ಮ ದಾಖಲೆಗಳು ಸರಿ ಇದೆ. ಆದ್ರೆ ಡೆಮಾಲಿಷ್ ‌ಮಾಡುವ ಮುಂಚೆ ಒಂದು ನೋಟಿಸ್ ಕೊಟ್ಟಿಲ್ಲ. ಇದು ಸರ್ಕಾರಿ ‌ಜಮೀನು ಶಾಸಕರು ತೆರವು ಮಾಡೋಕೆ ಹೇಳಿದ್ರು ಎಂದು ಡೆಮಾಲಿಷ್ ‌ಮಾಡಿದ್ರು. ನಾನು ದಾಖಲೆ ತೋರಿಸೋಕೆ ಹೋದಾಗ ದಾಖಲೆ‌ ಕಿತ್ತುಕೊಂಡ್ರು. ಬಾಯಿಗೆ ಬಂದಂತೆ ನನಗೆ ಬೈದರು. ನಾನು ಮಹಿಳೆ ಸರ್ ಅಂತ ಅಂದೆ. ಏನ್ ಮಹಿಳೆ ನಾಚಿಕೆ‌ ಮಾನ‌ ಮರ್ಯಾದೆ ಇಲ್ವಾ ಅಂತ ಬೈದ್ರು. ನನ್ನ ಮೇಲೆ ಹಲ್ಲೆ ಮಾಡೋಕೆ ಬಂದ್ರು. ಕಾರ್ಯಕರ್ತರಿಗೆ ಇವಳಿಗೆ ಹೊಡಿರೋ ಅಂತ ಹೇಳಿದ್ರು. ಲೇಡಿ ಪೊಲೀಸ್ ಕರೆಸಿ ಇವಳನ್ನ ಎಳ್ಕೊಂಡು ಹೋಗ್ರಿ ಅಂತ ಹೇಳಿದ್ರು. ಪೊಲೀಸ್ ಸ್ಟೇಷನ್ ಗೆ ಕರ್ಕೊಂಡು ಹೋದ್ರು. ಆದ್ರೆ ಪೊಲೀಸರು ‌ಕೂಡ ಯಾವುದೇ ದೂರು ದಾಖಲಿಸಿಕೊಳ್ಳಲಿಲ್ಲ," ಎಂದು ಮೇರಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. 

ಲಿಂಬಾವಳಿ ಸಮರ್ಥನೆ:

ಸಿ.ಎಂ.ರೌಂಡ್ಸ್ ಗೂ ಮುನ್ನ ಮಹಿಳೆಯೊಬ್ಬರ ಜೊತೆ ಅರವಿಂದ ಲಿಂಬಾವಳಿಗೆ ಮಾತಿನ ಚಕಮಕಿಯಾಗಿದ್ದಕ್ಕೆ ಅರವಿಂದ ಲಿಂಬಾವಳಿ ಸ್ಪಷ್ಟನೆ ನೀಡಿದ್ದಾರೆ. "ಅರೋಪಗಳು ಮಾಡ್ತಾರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ. ಒತ್ತುವರಿಯಾಗಿರುವ ಜಾಗ ಬಿಡಿ, ಜನರಿಗೆ ತೊಂದರೆಯಾಗುತ್ತಿದೆ. ಅದನ್ನು ತಪ್ಪಿಸಬೇಕು. ಟಿಜೆಡ್ ಅಪಾರ್ಟ್ಮೆಂಟ್ ಗೆ ನೀರು ತುಂಬಿರೋದೆ ಆ ಕಾಂಗ್ರೆಸ್ ಕಾರ್ಯಕರ್ತೆ ಸಗಾಯಿ ಮೇರಿಯಿಂದ. ಜನರಿಗೆ ತೊಂದರೆ ಕೊಡೊದೇ ನಿಮ್ಮ ಉದ್ದೇಶವಾ?" ಎಂದು ಲಿಂಬಾವಳಿ ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: BJP MLA ಅರವಿಂದ ಲಿಂಬಾವಳಿ ದರ್ಪ; ಪ್ರಶ್ನಿಸಿದ್ದಕ್ಕೆ ಮಹಿಳೆ ಪೊಲೀಸರ ವಶಕ್ಕೆ

ಸ್ಥಳೀಯ ಬಿಜೆಪಿಗರಿಂದ ಲಿಂಬಾವಳಿ ಸಮರ್ಥನೆ:

ಮಹದೇವಪುರ ಬಿಜೆಪಿ ಮಂಡಲ ಅಧ್ಯಕ್ಷರಾದ ಮನೋಹರ್ ರೆಡ್ಡಿ ಮತ್ತು ಬಿಜೆಪಿ ಮುಖಂಡರು ಅರವಿಂದ ಲಿಂಬಾವಳಿ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದರು. ರಾಜಕಾಲುವೆಗಳ ಒತ್ತುವರಿ ವೀಕ್ಷಣೆಗೆ ಮಾಡುವ ವೇಳೆ ಮಹಿಳೆ‌ ಸಗಾಯಿ ಮೇರಿ ಶಾಸಕ ಅರವಿಂದ ಲಿಂಬಾವಳಿಗೆ ಪ್ರಚೋದನೆ ನೀಡಿದರು. ಆ ಸಗಾಯಿ ಮೇರಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೆಯಾಗಿದ್ದಾರೆ. ಅವರು ಬೇಕಂತಲೇ ಕ್ಯಾತೆ ತೆಗೆದಿದ್ದಾರೆ ಎಂದು ಬಿಜೆಪಿ ಮುಖಂಡರು ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಿದ್ದಾರೆ. 

ಇದನ್ನೂ ಓದಿ: ನಾನು ಯಾರ ಮಗಳು ಗೊತ್ತಾ?: ಟ್ರಾಫಿಕ್ ಪೊಲೀಸರೊಂದಿಗೆ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್

"ಸಗಾಯಿ ಮೇರಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ತೆರವುಗೊಳಿಸಲು ಮುಂದಾದಗ ಶಾಸಕರಿಗೆ ಏಕವಚನ ಬಳಸಿದ್ದು ಮೊದಲು ಸಗಾಯಿ ಮೇರಿ. ಶಾಸಕ.ಅರವಿಂದ ಲಿಂಬಾವಳಿ ಹೆಸರಿಗೆ ಕಪ್ಪು ಮಸಿ ಬಳಿಯಲು ಕಾಂಗ್ರೇಸ್ ಘಟಕದವರೇ  ಈ ರೀತಿ ಸಗಾಯಿ ಮೇರಿರವರನ್ನ ಎತ್ತಿ ಕಟ್ಟುತ್ತಿದ್ದಾರೆ," ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮನೋಹರರೆಡ್ಡಿ ಹೇಳಿದ್ದಾರೆ.

Follow Us:
Download App:
  • android
  • ios