ಹುಳಿಮಾವು ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ . ವಿದ್ಯಾರ್ಥಿಗೆ ಶಿಕ್ಷೆ ನೀಡಿದ್ಯಾಕೆ?
ಬೆಂಗಳೂರು: ಏಳನೇ ಕ್ಲಾಸ್ ವಿದ್ಯಾರ್ಥಿಗೆ ಶಿಕ್ಷೆ ನೀಡಿದ ಶಿಕ್ಷಕನ ವಿರುದ್ದ ಎಫ್‌ಐಆರ್ ದಾಖಲಾಗಿ ಬಂಧನವಾಗಿದೆ. ಎಫ್‌ಐಆರ್ ದಾಖಲಾದ ಹಿನ್ನೆಲೆ ಹುಳಿಮಾವು ಠಾಣೆಯ ಪೊಲೀಸರು ದೈಹಿಕ ಶಿಕ್ಷಕ ರಾಜೇಶ್ ಅವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಹುಳಿಮಾವು ಬಳಿಯ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ರಾಜೇಶ್ ದೈಹಿಕ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಏಳನೇ ಕ್ಲಾಸ್ ವಿದ್ಯಾರ್ಥಿ ಸುಮಂತ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಎಂಬಾತನ ಕಪಾಳಕ್ಕೆ ನಾಲ್ಕೈದು ಶಿಕ್ಷಕರ ಮುಂದೆ ಹೊಡೆದಿದ್ದರು. ವಿದ್ಯಾರ್ಥಿಯನ್ನು ಮನೆಗೆ ಕಳುಹಿಸದೇ ಸಂಜೆಯವರೆಗೂ ಶಾಲೆಯಲ್ಲಿಯೇ ಇರಿಸಿಕೊಂಡಿದ್ರು ಎಂಬ ಆರೋಪ ರಾಜೇಶ್ ವಿರುದ್ಧ ಕೇಳಿ ಬಂದಿದೆ.
ಶಿಕ್ಷಕನ ವಿರುದ್ಧ ದೂರು ದಾಖಲಿಸಿದ ಪೋಷಕರು
ಸಂಜೆಯಾದ್ರು ಮಗ ಮನೆಗೆ ಬರದಿದ್ದಾಗ ಸುಮಂತ್ ಕುಮಾರ್ ಪೋಷಕರು ಶಾಲೆಯತ್ತ ಬಂದಿದ್ದಾರೆ. ಶಾಲೆಗೆ ಬಂದಾಗ ಸುಮಂತ್ ಕುಮಾರ್ ಕೆನ್ನೆ ಊದಿಕೊಂಡಿರುವ ವಿಷಯ ಗೊತ್ತಾಗಿದೆ. ಕೂಡಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹುಳಿಮಾವು ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಶಿಕ್ಷೆ ನೀಡಿದ್ಯಾಕೆ?
ಸುಮಂತ್ ಕುಮಾರ್ ಊಟದ ವೇಳೆ ಸಹಪಾಠಿಯ ಕುರ್ಚಿಯನ್ನು ಎಳೆದಿದ್ದನು. ಕ್ಲಾಸ್ ರೂಮ್‌ನಲ್ಲಯೂ ಇದೇ ರೀತಿ ಕುರ್ಚಿ ಎಳೆದಿದ್ದರಿಂದ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದಿದ್ದನು. ಕೆಳಗೆ ಬಿದ್ದ ವಿದ್ಯಾರ್ಥಿ ನೇರವಾಗಿ ಶಿಕ್ಷಕ ರಾಜೇಶ್ ಬಳಿ ತೆರಳಿ ಸುಮಂತ್ ಕುಮಾರ್ ವಿರುದ್ಧ ದೂರು ನೀಡಿದ್ದನು. ಈ ಹಿನ್ನೆಲೆ ಸುಮಂತ್ ಕುಮಾರ್‌ಗೆ ಶಿಕ್ಷಕ ರಾಜೇಶ್ ಕಪಾಳಕ್ಕೆ ಹೊಡೆದು ಶಿಕ್ಷೆ ನೀಡಿದ್ದರು.
ಇದನ್ನೂ ಓದಿ: ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಭಿಕ್ಷಾಟನೆಗೆ ಮಗು ಅಪಹರಣ ಆರೋಪ
ಭಿಕ್ಷಾಟನೆಗೆ ದೂಡಲು ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಒಂದು ವರ್ಷದಿಂದ ಜೈಲಿನಲ್ಲಿದ್ದ ಭಿಕ್ಷುಕಿಗೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದ ರಾಧಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣ ಸಂಬಂಧ ಮಗುವಿನ ಅಜ್ಜಿ ಸರೋಜಮ್ಮ ಚಾಮರಾಜನಗರ ಟೌನ್ ಪೊಲೀಸ್ ಠಾಣೆಗೆ 2024ರ ನ.14ರಂದು ನಾಪತ್ತೆ ದೂರು ನೀಡಿದ್ದರು. ತನ್ನ ಮಗಳು ಅನಿತಾ ಎರಡು ವರ್ಷದ ಹೆಣ್ಣುಮಗುವಿನೊಂದಿಗೆ 2024ರ ನ.8ರಂದು ಕಾಣೆಯಾಗಿದ್ದಾರೆ. ಅನಿತಾ ಮಾನಸಿಕವಾಗಿ ಅಸ್ವಸ್ಥಳು. ನ.15ರಂದು ಅನಿತಾ ಪತ್ತೆಯಾಗಿದ್ದು, ಭಿಕ್ಷಾಟನೆಗಾಗಿ ತನ್ನ ಮಗುವನ್ನು ಮಹಿಳೆಯೊಬ್ಬರು ಕೊಂಡೊಯ್ದಿದ್ದು, ವಾಪಸ್ ಕೊಟ್ಟಿಲ್ಲವೆಂದು ದೂರಿನಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್


