ಪೊಲೀಸರೊದಿಗೆ ಯುವತಿ "ನಾನು ಯಾರು ಗೊತ್ತಾ? ಶಾಸಕ ಅರವಿಂದ್ ಲಿಂಬಾವಳಿ ಗೊತ್ತಾ? ಅರವಿಂದ ಲಿಂಬಾವಳಿ ಮಗಳು ನಾನು" ಎಂದು ವಾಗ್ವಾದಕ್ಕಿಳಿದಿದ್ದಾಳೆ. 

ಬೆಂಗಳೂರ (ಜೂ. 09):  ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ಪುತ್ರಿ ಟ್ರಾಫಿಕ್ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ಬಳಿ ನಡೆದಿದೆ. ರ‍್ಯಾಶ್ ಡ್ರೈವ್ ಮಾಡಿಕೊಂಡು ಬಂದ ಯುವತಿ ಕಾರನ್ನು ಪೊಲೀಸರು ತಡೆದಿದ್ದಾರೆ, ಈ ವೇಳೆ ಕಾರು ನಿಲ್ಲಿಸದೇ ಯುವತಿ ಮುನ್ನುಗ್ಗಿದ್ದಾಳೆ. ಚೇಸ್ ಮಾಡಿ ಕ್ಯಾಪಿಟಲ್ ಹೊಟೆಲ್ ಬಳಿ ಅರವಿಂದ ಲಿಂಬಾವಳಿ ಪುತ್ರಿ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ತಡೆದಿದ್ದಾರೆ. 

ಈ ವೇಳೆ ಪೊಲೀಸರೊದಿಗೆ ಯುವತಿ "ನಾನು ಯಾರು ಗೊತ್ತಾ? ಶಾಸಕ ಅರವಿಂದ್ ಲಿಂಬಾವಳಿ ಗೊತ್ತಾ? ಅರವಿಂದ ಲಿಂಬಾವಳಿ ಮಗಳು ನಾನು" ಎಂದು ವಾಗ್ವಾದಕ್ಕಿಳಿದಿದ್ದಾಳೆ. ಅರವಿಂದ್ ಲಿಂಬಾವಳಿ ಮಗಳು ನಾನು ಎಂದು ಏರುಧ್ವನಿಯಲ್ಲಿ ಕಿರಿಕ್ ಮಾಡಿದ್ದಾಳೆ. ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ಯುವತಿ ನಿಂದಿಸಿದ್ದಾಳೆ. ರ‍್ಯಾಶ್ ಡ್ರೈವ್ ಫೈನ್ ಸೇರಿ ಹಳೆಯ ಕೇಸುಗಳ ಫೈನ್ ವಸೂಲಿ ಮಾಡಿರುವ ಪೊಲೀಸರು ಯುವತಿಯಿಂದ ಒಟ್ಟು 10 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಇದನ್ನೂ ಓದಿ:ಕಳುವಾದ ಕಾರು ಇಟ್ಟುಕೊಂಡ ಮಾಲೀಕನಿಗೆ ಥಳಿಸಿದ ಪೊಲೀಸ್!