ಸಂತೋಷ್‌ ಮೆಸೇಜೇ ಡೆತ್‌ ನೋಟ್‌ ವಾಟ್ಸಾಪ್‌ ಸಂದೇಶಕ್ಕಿಂತ ಸಾಕ್ಷಿ ಬೇಕೆ? ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ  

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ (santhosh)ವಾಟ್ಸ್‌ಆ್ಯಪ್‌ ಸಂದೇಶದಲ್ಲೇ ಸಚಿವ ಕೆ.ಎಸ್‌. ಈಶ್ವರಪ್ಪ (K S Ishwarappa) ಅವರೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಈಶ್ವರಪ್ಪ ಅವರನ್ನು ಬಂಧಿಸಲು ಇದಕ್ಕಿಂತ ಸಾಕ್ಷಿ ಏನು ಬೇಕು? ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (siddaramaiah)ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ವಿರುದ್ಧದ ಪ್ರಕರಣ ಜಾಮೀನು ರಹಿತ ಕೇಸ್‌. ಈಶ್ವರಪ್ಪ ಬಿಲ್‌ ಪಾವತಿಸದೆ ಲಂಚ ಕೇಳಿದ್ದು, ಈ ವಿಚಾರವಾಗಿ ಹಲವರಿಗೆ ದೂರು ಕೊಟ್ಟರೂ ನ್ಯಾಯ ಸಿಗದ ಕಾರಣ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಉದ್ದೇಶದಿಂದ ಉಡುಪಿಗೆ ಹೋಗಿದ್ದಾರೆ. ನಂತರ ಅವರು ವಾಟ್ಸ್‌ಆ್ಯಪ್‌ ಮೆಸೇಜ್‌ನಲ್ಲಿ ಈಶ್ವರಪ್ಪ ನನ್ನ ಸಾವಿಗೆ ನೇರ ಕಾರಣ ಎಂದಿದ್ದಾರೆ. ಹೀಗಾಗಿ ಇದೇ ಡೆತ್‌ ನೋಟ್‌ (Death note)ಆಗಿದ್ದು, ಈಶ್ವರಪ್ಪರನ್ನು ಬಂಧಿಸಿ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಕೆಂಪಣ್ಣ ಭ್ರಷ್ಟಾಚಾರ ಆರೋಪಕ್ಕೆ ಸುಧಾಕರ್‌ ತಿರುಗೇಟು

ಖುದ್ದು ಡೆತ್‌ನೋಟ್‌ ಸಂದೇಶ ದೊರೆತರೂ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಲೂ ಪೊಲೀಸರು (Police)ಹಿಂದೇಟು ಹಾಕಿದ್ದರು. ಮೃತರ ಕುಟುಂಬದವರ ಒತ್ತಾಯದ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಅದರಲ್ಲಿ ಭ್ರಷ್ಟಾಚಾರ ಆರೋಪವನ್ನು ಕೈಬಿಟ್ಟಿದ್ದಾರೆ. ಇದೊಂದು ಕ್ರಿಮಿನಲ್‌ ಅಪರಾಧ ಪ್ರಕರಣವಾಗಿದ್ದು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯವು ಭ್ರಷ್ಟಾಚಾರದಿಂದ ನಲುಗಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಗುಣಮಟ್ಟದ ಕೆಲಸ ಆಗಲು ಸರ್ಕಾರ ಬಿಡುತ್ತಿಲ್ಲ. ಎಲ್ಲಾ ಇಲಾಖೆಗಳಲ್ಲೂ ಲಂಚದ ರೂಪದಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಕೇವಲ ಈಶ್ವರಪ್ಪನವರ ಮೇಲೆ ಮಾತ್ರವಲ್ಲ ಇಡೀ ಸರ್ಕಾರದ ಮೇಲೆ 40% ಕಮಿಷನ್‌ ಆರೋಪ ಇದೆ. ರಾಜ್ಯದ ಇತಿಹಾಸದಲ್ಲಿ ಇಂತಹ ಭ್ರಷ್ಟಸರ್ಕಾರ ಕಂಡಿಲ್ಲ. ಎಲ್ಲಾ ಇಲಾಖೆಗಳಲ್ಲಿ 40% ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ರಾಜ್ಯ ಪ್ರವಾಸ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Suicide Case: ಈಶ್ವರಪ್ಪ ಅಂಥವರಲ್ಲ.. ಅಂಥವರಲ್ಲ..: ಮಖಣಾಪೂರ ಸ್ವಾಮೀಜಿ
ಈ ಮಧ್ಯೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ (Health Minister Dr.K.Sudhakar ) ವಿರುದ್ಧ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ (Contractors Association President Kempanna) ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದಕ್ಕೆ ಸುಧಾಕರ್ ಕೂಡ ತಿರುಗೇಟು ನೀಡಿದ್ದಾರೆ. ಕೆಂಪಣ್ಣ ಪುರಾವೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಏಜೆಂಟ್. ಅವರನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರ್ಪಡೆ ಮಾಡಬೇಕು ಎಂದು ಸುಧಾಕರ್ ಹೇಳಿದ್ದಾರೆ.

ಪ್ರಸ್ತುತ ಸರ್ಕಾರದಲ್ಲಿ ಟೆಂಡರ್ ಗೆ ಶೇ. 5ರಷ್ಟು ಕಮೀಷನ್ ನೀಡದೇ ಇದ್ರೆ ಟೆಂಡರ್ ಗೆ ಒಪ್ಪಿಗೆ ನೀಡಲ್ಲ. ಪ್ರಸ್ತುತ 2 ಸಾವಿರ ಕೋಟಿ ಕಾಮಗಾರಿ ನಡೀತಾ ಇದೆ. ಒಂದು ಟೆಂಡರ್ ಗೆ ಶೇ. 5ರಷ್ಟು ಕಮೀಷನ್ ನೀಡ್ಬೇಕು. ನೀರಾವರಿ ಇಲಾಖೆಯಲ್ಲಿ ಕಂಡುಕೇಳರಿಯದ ಭ್ರಷ್ಟಾಚಾರವಿದೆ. ಸುಧಾಕರ್ ಸಾಹೇಬ್ರು ಕೂಡ ಇದ್ದಾರೆ. ಈಶ್ವರಪ್ಪನವರ ಬಂಡವಾಳ ಏನು ಅಂತಾ ಈಗಾಗಲೇ ಗೊತ್ತಾಗಿದೆ. ಆದ್ದರಿಂದ ಹೋರಾಟ ಅನಿವಾರ್ಯವಾಗಿದ್ದು, ನಮ್ಮ ಕೆಲಸಗಳನ್ನ ನಿಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಕೆಂಪಣ್ಣ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.