ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಮತ್ತು ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಜಿಬಿಎ ಹೊಸ ಸ್ಮಾರ್ಟ್ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತಂದಿದೆ. ಈ ಅಡಿಯಲ್ಲಿ, ಮಾರುಕಟ್ಟೆಗೆ ಪ್ರವೇಶಿಸುವ ಸರಕುಗಳು ಮತ್ತು ವಾಹನಗಳಿಗೆ ನಿಗದಿತ ಪ್ರವೇಶ ಶುಲ್ಕ ಹಾಗೂ ಸುಂಕವನ್ನು ವಿಧಿಸಲಾಗುತ್ತದೆ.
ಬೆಂಗಳೂರು: ಕೆ.ಆರ್. ಮಾರುಕಟ್ಟೆಯು ನಗರದಲ್ಲಿ ಹೆಚ್ಚು ಜನ ಸೇರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆದ್ದರಿಂದ, ಮಾರ್ಕೆಟ್‌ನ ಸ್ವಚ್ಛತೆ ಹಾಗೂ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಹೊಸ ರೂಲ್ಸ್ ಜಾರಿಗೆ ತರಲಾಗಿದ್ದು, ಇನ್ನು ಮುಂದೆ ವಾಹನ ಸವಾರರು ಸ್ಮಾರ್ಟ್ ಪಾರ್ಕಿಂಗ್ ನಿಯಮಗಳನ್ನು (Smart Parking Rules) ಪಾಲಿಸುವಂತೆ ಜಿಬಿಎ (GBA) ಸೂಚನೆ ನೀಡಿದೆ. ಮಾರುಕಟ್ಟೆಯ ಆವರಣವನ್ನು ಪ್ರವೇಶಿಸುವ ಸರಕುಗಳಿಗೆ ಈ ರೀತಿಯಲ್ಲಿ ಶುಲ್ಕ ವಿಧಿಸಲಾಗುತ್ತದೆ
| ವಸ್ತು/ಸರಕು | ಪ್ರಮಾಣ | ಶುಲ್ಕ (ರೂ.ಗಳಲ್ಲಿ) |
| ಎಲ್ಲಾ ರೀತಿಯ ಹಣ್ಣು | 1 ಚೀಲ | 5 |
| ಎಲ್ಲಾ ರೀತಿಯ ಹೂ | 1 ಚೀಲ | 5 |
| ಎಲ್ಲಾ ರೀತಿಯ ತರಕಾರಿ | 1 ಚೀಲ | 5 |
| ಎಲ್ಲಾ ರೀತಿಯ ಸೊಪ್ಪು | 1 ಚೀಲ | 5 |
| ಕಡಲೆಕಾಯಿ/ಶೇಂಗಾ | 1 ಚೀಲ | 5 |
| ಹತ್ತಿ | 1 ಚೀಲ | 5 |
| ಸಿಹಿ ಜೋಳ | 1 ಚೀಲ | 5 |
| ಶುಂಠಿ & ಅರಿಶಿನ | 1 ಚೀಲ | 5 |
| ಬಾಳೆಕಂಬ | 2 | 5 |
| ಬಿದಿರು | 1 ಬಂಡಲ್ | 5 |
| ಈರುಳ್ಳಿ, ಆಲೂಗಡ್ಡೆ | 1 ಚೀಲ | 5 |
| ತೆಂಗಿನಕಾಯಿ | 1 ಚೀಲ | 5 |
| ಬೆಳ್ಳುಳ್ಳಿ | 1 ಚೀಲ | 5 |
| ಮೊಟ್ಟೆ | 1-10 ಟ್ರೇ | 10 |
| ಮೀನು/ಸೀ ಫುಡ್ | 1 ಟ್ರೇ | 10 |
| ಕೋಳಿ/ಇತರೆ ಮಾಂಸ | 1 ಟ್ರೇ | 10 |
ಸರಕುಗಳ ಸುಂಕಕ್ಕಾಗಿ ಕಟ್ಟುನಿಟ್ಟಾದ ನಿಯಮಗಳು ಮತ್ತು ನಿಬಂಧನೆಗಳು
ಮಾರುಕಟ್ಟೆಗೆ ಸರಕುಗಳನ್ನು ತರುವ ಪ್ರತಿಯೊಬ್ಬ ಮಾರಾಟಗಾರ, ವ್ಯಾಪಾರಿ, ಸಾಗಣೆದಾರ (ಸಗಟು/ಚಿಲ್ಲರೆ), ಬೀದಿ ಬದಿ ವ್ಯಾಪಾರಿ, ಕಮಿಷನ್ ಏಜೆಂಟ್ ಅಥವಾ ಸಾರಿಗೆದಾರರು ಯಾವುದೇ ವ್ಯಾಪಾರ ಚಟುವಟಿಕೆಯನ್ನು ನಡೆಸುವ ಮೊದಲು ನಿಗದಿತ ಸುಂಕವನ್ನು ಪಾವತಿಸತಕ್ಕದ್ದು.
BCCC ಅನುಮೋದಿಸಿದ ದರಗಳಿಗೆ ಅನುಗುಣವಾಗಿ ಸುಂಕವನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಲಾಗುತ್ತದೆ.
ಬೇರೆ ರೀತಿಯಲ್ಲಿ ಸೂಚಿಸದ ಹೊರತು ಸರಕುಗಳ ಪ್ರತಿ ರವಾನೆ/ವರ್ಗಕ್ಕೆ ದಿನಕ್ಕೆ ಒಮ್ಮೆ ಸುಂಕವನ್ನು ಪಾವತಿಸಬೇಕಾಗುತ್ತದೆ. ಸುಂಕವು ಒಂದು ಪ್ರವೇಶ ಮತ್ತು ಒಂದು ನಿರ್ಗಮನಕ್ಕೆ ಅನ್ವಯಿಸುತ್ತದೆ.
ಸರಕು ವಾಹನ ಪ್ರವೇಶ ಶುಲ್ಕ
- ಟ್ರಕ್/6-ಚಕ್ರದ ಮತ್ತು ಅದಕ್ಕಿಂತ ಹೆಚ್ಚಿನ ವಾಹನಗಳಿಗೆ 350 ರೂಪಾಯಿ
- 3-ಚಕ್ರದ ಸರಕು ವಾಹನ (LMV) 75 ರೂಪಾಯಿ
- 4-ಚಕ್ರದ ವಾಹನಗಳಿಗೆ100 ರೂಪಾಯಿ
BBMP/BCCC ಯಿಂದ ಲಿಖಿತವಾಗಿ ವಿನಾಯಿತಿ ನೀಡದ ಹೊರತು, ವಾಹನವು ಮಾರುಕಟ್ಟೆಯನ್ನು ಪ್ರವೇಶಿಸಲು ಅನುಮತಿಸುವ ಮೊದಲು ಪ್ರವೇಶ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ನಗದು, POS ಸಾಧನಗಳು, UPI, QR ಕೋಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ BBMP/BCCC ಅನುಮೋದಿಸಿದ ಯಾವುದೇ ಇತರ ಪಾವತಿ ವಿಧಾನಗಳ ಮೂಲಕ ಹಣ ಪಾವತಿಸಬಹುದಾಗಿದೆ.


