ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ವೇಳೆ ವ್ಯಕ್ತಿಯೊಬ್ಬರಿಗೆ ಚಾಕು ಇರಿದ ಘಟನೆ ನಡೆದಿದೆ. ಡ್ಯಾನ್ಸ್‌ ಮಾಡುವಾಗ ತಳ್ಳಾಟದಿಂದ ಐವರು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 ಹುಬ್ಬಳ್ಳಿ (ಸೆ.8): ಗಣೇಶ ಮೂರ್ತಿ ವಿಸರ್ಜನೆ ವೇಳೆ ವ್ಯಕ್ತಿಯೊಬ್ಬರಿಗೆ ಚಾಕು ಇರಿದ ಘಟನೆ ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದ್ದು, ಈ ಸಂಬಂಧ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಪ ಅಲಿಯಾಸ್ ಚೇತನ ಗೌಡರ (32) ಚೂರಿ ಇರಿತಕ್ಕೊಳಗಾದ ಯುವಕ. ಈತ ಶನಿವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡ್ಯಾನ್ಸ್‌ ಮಾಡುತ್ತಿದ್ದ. ಈ ವೇಳೆ ತಳ್ಳಾಟ ಮಾಡಿದ್ದಕ್ಕೆ ಪಕ್ಕಲ್ಲಿದ್ದವರಿಗೆ ಪ್ರತಾಪ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಶಿವಕುಮಾರ, ರಾಕೇಶ, ಫಕೀರೇಶ ಹಾಗೂ ಅಪ್ರಾಪ್ತರಿಬ್ಬರು ಚಾಕುವಿನಿಂದ 3 ಕಡೆ ಇರಿದು ಗಾಯಗೊಳಿಸಿದ್ದಾರೆ. ಗಾಯಾ‍ಳುವನ್ನು ಹುಬ್ಬ‍‍ಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಗೆ ನೈಜ ಕಾರಣ ಏನು ಎಂಬುದು ಇನ್ನು ಗೊತ್ತಾಗಿಲ್ಲ. ಈ ಕುರಿತಂತೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ‍ಲಾಗಿದೆ.

ಇದನ್ನೂ ಓದಿ: ಸಾಗರದ ಜನ್ನತ್‌ನಲ್ಲಿ ಗಣಪತಿ ವಿಸರ್ಜನ ಮೆರವಣಿಗೆ ವೇಳೆ ಅಹಿತಕರ ಘಟನೆ ಮುಸ್ಲಿಂ ಮುಖಂಡರಿಂದ ವಿಷಾದ

ಗಾಯಾಳು ಪ್ರತಾಪ ಟ್ರಾನ್ಸಪೋರ್ಟ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಗಾಯಾಳುವನ್ನು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ ನಾಯ್ಕ ಇದ್ದರು. ಇದನ್ನೂ ಓದಿ: ಮಂಡ್ಯ: ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ; ಕೆಲವೊತ್ತು ಉದ್ವಿಗ್ನ ಪರಿಸ್ಥಿತಿ