Fans pull Akon's pants video: ಬೆಂಗಳೂರಿನಲ್ಲಿ ನಡೆದ ಸಂಗೀತ ರಸಮಂಜರಿಯಲ್ಲಿ, ಅಮೆರಿಕನ್ ಗಾಯಕ ಅಕಾನ್‌ಗೆ ಅಭಿಮಾನಿಗಳು ಅವರ ಪ್ಯಾಂಟ್ ಎಳೆದು ಮುಜುಗರ ಉಂಟುಮಾಡಿದ್ದಾರೆ. ಆದರೂ, ಅಕಾನ್ ತಾಳ್ಮೆ ಕಳೆದುಕೊಳ್ಳದೆ ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ.

ಅಭಿಮಾನಿಗಳ ಹುಚ್ಚಿಗೆ ಮುಜುಗರಕ್ಕೀಡಾದ ಗಾಯಕ

ಪ್ರಸಿದ್ಧ ಸಿನಿಮಾ ತಾರೆಯರಿಗೆ, ಖ್ಯಾತ ಗಾಯಕರಿಗೆ ಹುಚ್ಚು ಅಭಿಮಾನಿಗಳಿರ್ತಾರೆ. ಅಭಿಮಾನಿಗಳ ಈ ಅತೀರೇಕದ ಅಭಿಮಾನ ಕೆಲವೊಮ್ಮೆ ಸೆಲೆಬ್ರಿಟಿಗಳ ತಾಳ್ಮೆ ಕೆಡಿಸಿಬಿಡುತ್ತದೆ. ಕೆಲವರು ಈ ಸಮಯದಲ್ಲೇ ಅಭಿಮಾನಿಗಳು ಎಂದು ನೋಡದೇ ತೆಗೆದು ಬಾರಿಸಿ ಬಿಡುತ್ತಾರೆ. ಕೆಲ ತಾರೆಯರು ತಮ್ಮನ್ನು ಮುತ್ತಿದ ಹುಚ್ಚು ಅಭಿಮಾನಿಗಳಿಗೆ ಬಾರಿಸಿದಂತಹ ಹಲವು ಘಟನೆಗಳು ಈಗಾಗಲೇ ನಡೆದಿದೆ. ಆದರೆ ಇಲ್ಲಿ ಪಾಪ ಈ ಗಾಯಕ ಅಭಿಮಾನಿಗಳ ಹಾವಳಿಯನ್ನು ತಾಳ್ಮೆಯಿಂದಲೇ ಸಹಿಸಿಕೊಂಡಿದ್ದಾರೆ. ಹೌದು ಬೆಂಗಳೂರಿನ ಸಂಗೀತ ರಸಮಂಜರಿಯೊಂದರಲ್ಲಿ ಸೆನೆಗಲೀಸ್ ಕಾಮ್ ಅಮೆರಿಕನ್ ಗಾಯ ಅಕಾನ್‌ಗೆ ಅಭಿಮಾನಿಗಳು ಹಾವಳಿ ನೀಡಿದ್ದಾರೆ. ಅವರನ್ನು ಮುತ್ತಿಕ್ಕಿಕೊಂಡು ಅಭಿಮಾನಿಗಳು ಅವರ ಪ್ಯಾಂಟ್ ಹಿಡಿದು ಎಳೆದಾಡಿದ್ದಾರೆ. ಪರಿಣಾಮ ಅಕಾನ್ ಅವರ ಪ್ಯಾಂಟ್ ಅರ್ಧ ಜಾರಿದೆ. ಆದರೂ ಅವರು ಸಹಿಸಿಕೊಂಡು ತಾಳ್ಮೆಯಿಂದಲೇ ಕಾರ್ಯಕ್ರಮ ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕನ್ಸರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಆಕಾನ್ ಅವರು ಒಂದು ಕೈನಲ್ಲಿ ಮೈಕ್ ಹಿಡಿದುಕೊಂಡು ಮತ್ತೊಂದು ಕೈನಲ್ಲಿ ತಮ್ಮ ಪ್ಯಾಂಟನ್ನು ಎಳೆದುಕೊಳ್ಳುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

ಅಕಾನ್ ಪ್ಯಾಂಟ್ ಎಳೆದಾಡಿ ಮುಜುಗರಕ್ಕೀಡು ಮಾಡಿದ ಅಭಿಮಾನಿಗಳು

ನವೆಂಬರ್ 14 ರಂದು ನಡೆದ ಬೆಂಗಳೂರು ಕನ್ಸರ್ಟ್‌ನಲ್ಲಿ ಈ ಘಟನೆ ನಡೆದಿದೆ. ಈ ಅಮೆರಿಕನ್ ಗಾಯಕ ಭಾರತ ಪ್ರವಾಸದಲ್ಲಿದ್ದು, ಈಗಾಗಲೇ ದೇಶದ ಮಹಾನಗರಿಗಳಾದ ದೆಹಲಿ ಬೆಂಗಳೂರು ಹಾಗೂ ಮುಂಬೈನಲ್ಲಿ ಅವರು ಒಳ್ಳೆಯ ಸಂಗೀತ ಪ್ರದರ್ಶನ ನೀಡಿದ್ದು, ಸಾಕಷ್ಟು ಅಭಿಮಾನಿಗಳನ್ನು ಸೆಳೆದಿದ್ದಾರೆ. ಮುಂಬೈ ಈ ಸೀಸನ್‌ನಲ್ಲಿ ಅವರ ಕೊನೆಯ ಪ್ರವಾಸವಾಗಿದೆ. ಹೀಗಿರುವಾಗ ಈಗ ಬೆಂಗಳೂರು ಲೀಗ್ ಕಾರ್ಯಕ್ರಮದ್ದು ಎನ್ನಲಾದ ಅವರ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ಈಗ ಭಾರಿ ವೈರಲ್ ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಅಭಿಮಾನಿಗಳು ಗಾಯಕ ಅಕಾನ್ ಅವರ ಪ್ಯಾಂಟನ್ನು ಹಿಡಿದು ಎಳೆದಾಡಿದ್ದು, ಅವರ ಪ್ಯಾಂಟ್ ಜಾರಿ ಒಳಉಡುಪು ಕಾಣುತ್ತಿದೆ. ಆದರೂ ಅವರು ಅಭಿಮಾನಿಗಳನ್ನು ಸಹಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರ ಜುಮೈರ್ ಖಾಜಾ ಎಂಬುವವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅಕಾನ್ ವಿಐಪಿ ವಿಭಾಗದ ಬಳಿ ತನ್ನ ಹಿಟ್ ಟ್ರ್ಯಾಕ್ ಸೆ*ಕ್ಸಿ ಬಿಚ್ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು . ಬ್ಯಾರಿಕೇಡ್‌ಗಳ ಉದ್ದಕ್ಕೂ ಅಭಿಮಾನಿಗಳೊಂದಿಗೆ ಅವರು ಸಂವಹನ ನಡೆಸುತ್ತಿರುವಾಗ, ಮುಂದಿನ ಸಾಲಿನಲ್ಲಿದ್ದ ಅವರ ಹುಚ್ಚು ಅಭಿಮಾನಿಗಳು ಗಾಯಕನ ಪ್ಯಾಂಟ್ ಹಿಡಿದು ಜಗ್ಗಿದ್ದಾರೆ. ಹೀಗಾಗಿ ಪ್ರದರ್ಶನದ ನಡುವೆಯೇ ಅವರು ಒಂದು ಕೈನಲ್ಲಿ ಮೈಕ್ ಹಿಡಿದುಕೊಂಡು ಮತ್ತೊಂದು ಕೈನಲ್ಲಿ ಪದೇ ಪದೇ ಪ್ಯಾಂಟನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ.

ಅಭಿಮಾನಿಗಳ ವರ್ತನೆಗೆ ನೆಟ್ಟಿಗರ ಆಕ್ರೋಶ

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ವೈರಲ್ ಆಗಿದ್ದು, ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳ ಹುಚ್ಚನ್ನು ಸಹಿಸಲಾಗುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಅವರಿಗೆ ಕಿರುಕುಳ ನೀಡಿದ್ದಾರೆ. ಅವರೊಬ್ಬ ಅಂತಾರಾಷ್ಟ್ರೀಯ ಕಲಾವಿದರು ಆದರೆ ಇಲ್ಲಿ ಅವರನ್ನೇ ಜನ ಹಿಂಸಿಸುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೇನು ಬ್ರೋ ಇದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅಯ್ಯೋ ಎಂಥವರ ಮಧ್ಯೆ ಬಂದೆ ನಾನು ಎಂದು ಅಕಾನ್ ಯೋಚಿಸುತ್ತಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದೊಂದು ನಾಚಿಕೆಗೇಡಿನ ಸಂಗತಿ ಕೆಲವರು ಇದನ್ನು ಪ್ರೀತಿ ಅಭಿಮಾನ ಎಂದು ಹೇಳುತ್ತಾರೆ. ಆದರೆ ಅಂತಾರಾಷ್ಟ್ರೀಯ ಕಲಾವಿದರನ್ನು ಹೀಗೆ ನಡೆಸಿಕೊಂಡರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತದೆ. ಜನರ ವರ್ತನೆಗಳು ನಮ್ಮ ದೇದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆಯುವಂತೆ ಮಾಡುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ರೈಟ್ ನೌ, ಐ ವನ್ನಾ ಲವ್ ಯು, ಸ್ಮ್ಯಾಕ್ ದಟ್, ಲೋನ್ಲಿ, ಬ್ಯೂಟಿಫುಲ್, ಡೋಂಟ್ ಮ್ಯಾಟರ್, ಮತ್ತು ಬಾಲಿವುಡ್ ಬ್ಲಾಕ್ಬಸ್ಟರ್ ಹಿಟ್ ಚಮ್ಮಕ್ ಚಲ್ಲೋ ನಂತಹ ಚಾರ್ಟ್ ಟಾಪರ್‌ ಹಾಡುಗಳಿಂದ ಅಕಾನ್ ಪ್ರಸಿದ್ಧಿ ಪಡೆದಿದ್ದಾರೆ. ಅಕಾನ್‌ ಅವರಿಗೆ ಭಾರತದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಕೆಲವರ ಈ ವರ್ತನೆ ಅವರ ಸಾವಿರಾರು ಅಭಿಮಾನಿಗಳು ನಿರಾಶರಾಗುವಂತೆ ಮಾಡಿದೆ.

ಇದನ್ನೂ ಓದಿ: ದೆಹಲಿ ಸ್ಫೋಟದಿಂದಾಗಿ ಕಾಶ್ಮೀರದ ಸಮಸ್ಯೆಗಳು ಕೆಂಪು ಕೋಟೆ ಮುಂದೆ ಪ್ರತಿಧ್ವನಿಸಿವೆ: ಮೆಹಾಬೂಬಾ ಮುಫ್ತಿ ಹೇಳಿಕೆ

ಇದನ್ನೂ ಓದಿ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ: ಢಾಕಾ ಕೋರ್ಟ್ ಆದೇಶ

View post on Instagram