Asianet Suvarna News Asianet Suvarna News

ದಾಖಲೆಯ ತೆರಿಗೆ ಸಂಗ್ರಹಿಸಿದರೂ ನಿಗದಿತ ಗುರಿ ಮುಟ್ಟದ ಬಿಬಿಎಂಪಿ..

  • 3 ಸಾವಿರ ಕೋಟಿ ದಾಟಿದ ಆಸ್ತಿ ತೆರಿಗೆ ಸಂಗ್ರಹ
  • 4 ಸಾವಿರ ಕೋಟಿ ಗುರಿ ಹೊಂದಿದ್ದ ಬಿಬಿಎಂಪಿ
  • ನಿಗದಿತ ಗುರಿ ಮಟ್ಟದ ಬಿಬಿಎಂಪಿ
despite collecting record break tax BBMP had not reached estimated target akb
Author
Bangalore, First Published Apr 2, 2022, 4:02 AM IST

ಬೆಂಗಳೂರು(ಏ.2):  ಬಿಬಿಎಂಪಿಯ 2021-22ನೇ ಸಾಲಿನ ಆರ್ಥಿಕ ವರ್ಷ ಮಾ.31ಕ್ಕೆ ಕೊನೆಯಾಗಿದ್ದು, ಕೊರೋನಾ ಆರ್ಥಿಕ ಸಂಕಷ್ಟ, ಲಾಕ್‌ಡೌನ್‌ ನಡುವೆಯೂ ಬಿಬಿಎಂಪಿ ದಾಖಲೆಯ 3,088 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. 2020-21ರಂತೆ 2021-22ನೇ ಸಾಲಿನಲ್ಲಿಯೂ ಸಾಕಷ್ಟುನಿರ್ಬಂಧಗಳು ಎದುರಾದರೂ ಬಿಬಿಎಂಪಿಗೆ ಹರಿದು ಬರುತ್ತಿರುವ ಆಸ್ತಿ ತೆರಿಗೆ ಸಂಗ್ರಹಕ್ಕೆ ಕೊರತೆ ಆಗಿಲ್ಲ. ಕಳೆದ ವರ್ಷಕ್ಕಿಂತ ಈ ಬಾರಿ ಅತಿ ಹೆಚ್ಚು ಅಂದರೆ 3,088 ಕೋಟಿ ಸಂಗ್ರಹವಾಗಿದೆ.

ಕಳೆದ ವರ್ಷಕ್ಕಿಂತ ಹೆಚ್ಚು ಸಂಗ್ರಹ:

ಕಳೆದ 2020-21ನೇ ಸಾಲಿನ ಮಾರ್ಚ್‌ ಅಂತ್ಯಕ್ಕೆ 2,860 ಕೋಟಿ ಸಂಗ್ರಹವಾಗಿತ್ತು. ಈ ಬಾರಿ 3,088 ಕೋಟಿ ಸಂಗ್ರಹವಾಗಿದೆ. ಈ ಮೂಲಕ ಕಳೆದ ವರ್ಷಕ್ಕಿಂತ 228 ಕೋಟಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಇನ್ನು ಮಾ.5ಕ್ಕೆ 2,838 ಕೋಟಿ ಸಂಗ್ರಹವಾಗಿತ್ತು. ಅದಾದ 25 ದಿನದಲ್ಲಿ 250 ಕೋಟಿ ಸಂಗ್ರಹಿಸುವ ಮೂಲಕ ಆಸ್ತಿ ತೆರಿಗೆ ಸಂಗ್ರಹದಲ್ಲಿ ಮೊದಲ ಬಾರಿ 3 ಸಾವಿರ ಕೋಟಿ ಗಡಿ ದಾಟಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru: ರಾತ್ರೋ ರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ..!

ಬಿಬಿಎಂಪಿ ರಚನೆ ಬಳಿಕ ಬಜೆಟ್‌ನಲ್ಲಿ ಘೋಷಿಸಿಕೊಂಡಷ್ಟು ಆಸ್ತಿ ತೆರಿಗೆಯನ್ನು ಒಂದು ಬಾರಿಯೂ ಸಾಧಿಸಿಲ್ಲ. ಅದೇ ಸಂಪ್ರದಾಯ 2021-22ನೇ ಸಾಲಿನಲ್ಲಿಯೂ ಮುಂದುವರೆದಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ 4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ವಿಫಲವಾಗಿದೆ. ಆರ್ಥಿಕ ವರ್ಷದ ಮೊದಲ ತಿಂಗಳು ಅಂದರೆ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5 ರಷ್ಟು ವಿನಾಯಿತಿ ನೀಡುವುದನ್ನು ಈ ಬಾರಿಯೂ ಮುಂದುವರೆಸಲಾಗಿದೆ. ಆಸ್ತಿ ಮಾಲಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್‌ ಕುಮಾರ್‌ ತಿಳಿಸಿದ್ದಾರೆ.

Bengaluru: ಬಡವರ ಸೂರಿನ ಆಸೆಗೆ ಬಿಬಿಎಂಪಿ ತಣ್ಣೀರು..! 


ಆಸ್ತಿ ತೆರಿಗೆ ಸಂಗ್ರಹ ವಿವರ:

ವರ್ಷ ಗುರಿ ಸಂಗ್ರಹ

2016-17 2,300 1,997

2017-18 2,600 2,132

2018-19 3,100 2,529

2019-20 3,500 2,659

2020-21 3,500 2,860

2021-22 4,000 3,088

ಇತ್ತ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲದ ಕಾರಣಕ್ಕೆ ಬಿಬಿಎಂಪಿ(BBMP) ಅಧಿಕಾರಿಗಳು 2022-23ನೇ ಸಾಲಿನ ಆಯವ್ಯಯ ರೂಪಿಸಿ ನೇರವಾಗಿ ಸರ್ಕಾರಕ್ಕೆ ಮಂಡಿಸಿದ್ದಾರೆ. ಈ ಬಾರಿ 10,480 ಕೋಟಿ ಮೊತ್ತದ ಬಜೆಟ್(Budget) ರೂಪಿಸಲಾಗಿದೆ. 10484 ಕೋಟಿ ಆದಾಯ ತೋರಿಸಲಾಗಿದೆ. ಈ ಮೂಲಕ ಉಳಿತಾಯ ಬಜೆಟ್ ರೂಪಿಸಲಾಗಿದೆ. ಕಳೆದ ಬಾರಿ 9,951.8 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿತ್ತು. 

ಸಾರ್ವಜನಿಕ ಕಾಮಗಾರಿಗಳಿಗೆ ಬಂಪರ್ ಅನುದಾನ(Grants) ನೀಡಲಾಗಿದೆ. ಒಟ್ಟು 6,911 ಕೋಟಿ ನೀಡಲಾಗಿದೆ. ಉಳಿದಂತೆ ನಗರ ಕಸ ವಿಲೇವಾರಿ ಮತ್ತು ಸಂಸ್ಕರಣೆಗೆ 1469.44 ಕೋಟಿ ಮೀಸಲಾಗಿದೆ. ಬಿಬಿಎಂಪಿಯ ಕೆಂಪೇಗೌಡ (Kempegowda)ಪೌರಸಭಾಂಗಣದಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯ ನಡೆದು ಬಂದಿತ್ತು. ಈ ಬಾರಿ ಕೌನ್ಸಿಲ್ ಶಿಷ್ಟಾಚಾರ ಮೀರಿ ಗುರುವಾರ ರಾತ್ರಿ 8.30ಕ್ಕೆ ವಿಧಾನಸೌಧದಲ್ಲಿ ಪಾಲಿಕೆ ಆಡಳಿತಾಧಿಕಾರಿ(Administrator) ರಾಕೇಶ್ ಸಿಂಗ್ (Rakesh Singh) ನೇತೃತ್ವದಲ್ಲಿ ಬಜೆಟ್ ಮಂಡಿಸಲಾಗಿದೆ. ಈ ವೇಳೆ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gaurav Gupta) ಉಪಸ್ಥಿತರಿದ್ದರು. ಪಾಲಿಕೆ ಹಣಕಾಸು ವಿಭಾಗದ ವಿಶೇಷ ಅಯುಕ್ತೆ ತುಳಸಿ ಮದ್ದಿನೇನಿ (Tulsi Maddineni) ಅವರು ಬಿಬಿಎಂಪಿ 2022-23ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾತ್ರಿ 11.30ಕ್ಕೆ ಪಾಲಿಕೆ ಆಯವ್ಯಯ ಸ್ವೀಕೃತಿ ಮತ್ತು ಪಾವತಿಯ ಪಟ್ಟಿಯನ್ನು ಪಾಲಿಕೆ ವೆಬ್‌ಸೈಟ್ ನಲ್ಲಿ ಪ್ರಕಟಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದಾರೆ. 

Follow Us:
Download App:
  • android
  • ios