Asianet Suvarna News Asianet Suvarna News

Bengaluru: ರಾತ್ರೋ ರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ..!

*  10,480 ಕೋಟಿ ಮೊತ್ತದ ಬಜೆಟ್
*  ಶೀಘ್ರ ಸಾರ್ವಜನಿಕರಿಗೆ ಲಭ್ಯ
*  ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತಗೊಳಿಸಲು ಮುಂದಾದ ಬಿಬಿಎಂಪಿ 

BBMP Officers Submitted BBMP Budget to Government of Karnataka grg
Author
Bengaluru, First Published Apr 1, 2022, 11:24 AM IST

ಬೆಂಗಳೂರು(ಏ.01):  ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲದ ಕಾರಣಕ್ಕೆ ಬಿಬಿಎಂಪಿ(BBMP) ಅಧಿಕಾರಿಗಳು 2022-23ನೇ ಸಾಲಿನ ಆಯವ್ಯಯ ರೂಪಿಸಿ ನೇರವಾಗಿ ಸರ್ಕಾರಕ್ಕೆ ಮಂಡಿಸಿದ್ದಾರೆ. ಈ ಬಾರಿ 10,480 ಕೋಟಿ ಮೊತ್ತದ ಬಜೆಟ್(Budget) ರೂಪಿಸಲಾಗಿದೆ. 10484 ಕೋಟಿ ಆದಾಯ ತೋರಿಸಲಾಗಿದೆ. ಈ ಮೂಲಕ ಉಳಿತಾಯ ಬಜೆಟ್ ರೂಪಿಸಲಾಗಿದೆ. ಕಳೆದ ಬಾರಿ 9,951.8 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿತ್ತು.

ಸಾರ್ವಜನಿಕ ಕಾಮಗಾರಿಗಳಿಗೆ ಬಂಪರ್ ಅನುದಾನ(Grants) ನೀಡಲಾಗಿದೆ. ಒಟ್ಟು 6,911 ಕೋಟಿ ನೀಡಲಾಗಿದೆ. ಉಳಿದಂತೆ ನಗರ ಕಸ ವಿಲೇವಾರಿ ಮತ್ತು ಸಂಸ್ಕರಣೆಗೆ 1469.44 ಕೋಟಿ ಮೀಸಲಾಗಿದೆ. ಬಿಬಿಎಂಪಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯ ನಡೆದು ಬಂದಿತ್ತು. ಈ ಬಾರಿ ಕೌನ್ಸಿಲ್ ಶಿಷ್ಟಾಚಾರ ಮೀರಿ ಗುರುವಾರ ರಾತ್ರಿ 8.30ಕ್ಕೆ ವಿಧಾನಸೌಧದಲ್ಲಿ ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಬಜೆಟ್ ಮಂಡಿಸಲಾಗಿದೆ.

BBMP Budget: ಶಾಸಕರ ಒತ್ತಡಕ್ಕೆ ಅಡ್ಡಕತ್ತರಿಯಲ್ಲಿ ಪಾಲಿಕೆ ಬಜೆಟ್‌!

ಈ ವೇಳೆ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gaurav Gupta) ಉಪಸ್ಥಿತರಿದ್ದರು. ಪಾಲಿಕೆ ಹಣಕಾಸು ವಿಭಾಗದ ವಿಶೇಷ ಅಯುಕ್ತೆ ತುಳಸಿ ಮದ್ದಿನೇನಿ ಅವರು ಬಿಬಿಎಂಪಿ 2022-23ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾತ್ರಿ 11.30ಕ್ಕೆ ಪಾಲಿಕೆ ಆಯವ್ಯಯ ಸ್ವೀಕೃತಿ ಮತ್ತು ಪಾವತಿಯ ಪಟ್ಟಿಯನ್ನು ಪಾಲಿಕೆ ವೆಬ್‌ಸೈಟ್ ನಲ್ಲಿ ಪ್ರಕಟಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದಾರೆ. ಬಿಬಿಎಂಪಿ ಕಾಯ್ದೆಯ ಸೆಕ್ಷನ್ 196ರ ಪ್ರಕಾರ ಬಿಬಿಎಂಪಿ ಬಜೆಟ್‌ಅನ್ನು ಮುಂದಿನ ಆರ್ಥಿಕ ವರ್ಷಾರಂಭಕ್ಕಿಂತ ಕನಿಷ್ಠ ಮೂರು ವಾರಗಳಿಗೆ ಮುಂಚೆ ಅಂಗೀಕರಿಸಬೇಕಿದೆ. ಆ ಪ್ರಕಾರ ಮಾರ್ಚ್ 10ರ ಒಳಗೆ ಬಜೆಟ್ ಮಂಡನೆ ಆಗಬೇಕಿತ್ತು. ಇದು ಸಾಧ್ಯವಾಗಲಿಲ್ಲ. ಈ ಮಧ್ಯೆ ಮಾರ್ಚ್ 30ಕ್ಕೆ ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಮಧ್ಯೆ ಸಚಿವರು, ಅಧಿಕಾರಿಗಳನ್ನು ತರಾಟೆಗೆ ಕೂಡ ತೆಗೆದುಕೊಂಡಿದ್ದರು. ಆದ್ದರಿಂದ ಬಜೆಟ್ ಮಂಡನೆ ಪ್ರಕ್ರಿಯೆ ಕೊನೆ ಕ್ಷಣದಲ್ಲಿ ಕೈಬಿಡಲಾಯಿತು.

ಕೌನ್ಸಿಲ್ ಶಿಷ್ಟಾಚಾರ ಮೀರಿ ವಿಧಾನಸೌಧದಲ್ಲಿ(Vidhanasoudha) ಪಾಲಿಕೆ ಆಡಳಿತಾಧಿಕಾರಿ ನೇತೃತ್ವದಲಿ್ಲ ಬಜೆಟ್ ಮಂಡಿಸಿದ ವಿಶೇಷ ಆಯುಕ್ತೆ ತುಳಸಿ ಜನಪ್ರತಿನಿಧಿಗಳು ಇಲ್ಲದಿದ್ದರೂ 10480 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡನೆ 4 ಕೋಟಿ ರು. ಉಳಿತಾಯ ಆಯವ್ಯಯ

ಇಲಾಖಾವಾರು ಆದಾಯ

ಕೌನ್ಸಿಲ್ 10 ಲಕ್ಷ, ಸಾಮಾನ್ಯ ಆಡಳಿತ 271.50 ಕೋಟಿ, ಕಂದಾಯ 5507.13 ಕೋಟಿ, ನಗರ ಯೋಜನೆ ಮತ್ತು ನಿಯಂತ್ರಣಕ್ಕೆ 465.56 ಕೋಟಿ, ಸಾರ್ವಜನಿಕ ಕಾಮಗಾರಿಗೆ 4,060.89 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 128.70 ಕೋಟಿ, ಸಾರ್ಜನಿಕರ ಆರೋಗ್ಯ (ಸಾಮಾನ್ಯ) 44 ಕೋಟಿ, ಸಾರ್ವಜನಿಕರ ಆರೋಗ್ಯ (ವೈದ್ಯಕೀಯ) 9 ಲಕ್ಷ, ತೋಟಗಾರಿಕೆ 65 ಲಕ್ಷ, ನಗರ ಅರಣೀಕರಣ 15 ಲಕ್ಷ, ಸಾರ್ವಜನಿಕ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ತಾಲಾ 20 ಸಾವಿರ ರು. ಸೇರಿದಂತೆ ಒಟ್ಟು 10484.28 ಕೋಟಿ ರು.ಆದಾಯ ನಿರೀಕ್ಷಿಸಲಾಗಿ

ಇಲಾಖಾವಾರು ವೆಚ್ಚ

ಕೌನ್ಸಿಲ್ ನಿರ್ವಹಣೆಗೆ 12.46 ಕೋಟಿ, ಸಾಮಾನ್ಯ ಆಡಳಿತಕ್ಕೆ 627.92 ಕೋಟಿ, ಕಂದಾಯ ವಿಭಾಗಕ್ಕೆ 454 ಕೋಟಿ, ನಗರ ಯೋಜನೆ ಮತ್ತು ನಿಯಂತ್ರಣಕ್ಕೆ 22.07 ಕೋಟಿ, ಸಾರ್ವಜನಿಕ ಕಾಮಗಾರಿಗೆ 6911.49 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 1469.44 ಕೋಟಿ, ಸಾರ್ಜನಿಕರ ಆರೋಗ್ಯ (ಸಾಮಾನ್ಯ) 210.63 ಕೋಟಿ, ಸಾರ್ವಜನಿಕರ ಆರೋಗ್ಯ (ವೈದ್ಯಕೀಯ) 75.38 ಕೋಟಿ, ತೋಟಗಾರಿಕೆ 174.38 ಕೋಟಿ, ನಗರ ಅರಣೀಕರಣ 35.30 ಕೋಟಿ, ಸಾರ್ವಜನಿಕ ಶಿಕ್ಷಣ 113.41 ಕೋಟಿ, ಸಮಾಜ ಕಲ್ಯಾಣ 374.34 ಕೋಟಿ ರು. ವೆಚ್ಚ ಮಾಡುವುದಾಗಿ ತೋರಿಸಲಾಗಿದೆ.

ಬಿಬಿಎಂಪಿ ಬಜೆಟ್‌ ಮುಂದೂಡಿಕೆ: ಏಕಾಏಕಿ ನಿರ್ಧಾರಕ್ಕೆ ಸರ್ಕಾರದ ಕಿಡಿ

ಸಾರ್ವಜನಿಕ ಆರೋಗ್ಯ

ನಗರದ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತಗೊಳಿಸಲು ಮುಂದಾಗಿರುವ ಬಿಬಿಎಂಪಿ ಈ ಬಾರಿ ಬಟೆಟ್‌ನಲ್ಲಿ ಆರೋಗ್ಯ ಕೇಂದ್ರಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಕ್ಕೆ 9 ಕೋಟಿ ಮೀಸಲಿಟ್ಟಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ದುರಸ್ತಿಗೆ 3.5 ಕೋಟಿ ನಿಗದಿಪಡಿಸಿದ್ದು, ಇತರೆ ಆಸ್ಪತ್ರೆಗಳು, ಪ್ರಯೋಗಾಲಯಗಳು, ಔಷಧಾಲಯಗಳು, ವೈದ್ಯರ ವಸತಿ ಗೃಹಗಳ ನಿರ್ವಹಣೆ ಮತ್ತು ಮೇಲ್ದರ್ಜೆಗೇರಿಸಲು 5.5 ಕೋಟಿ ಅನುದಾನವಿಟ್ಟಿದೆ. ಇನ್ನು ಕಳೆದ ಸಾಲಿನಲ್ಲಿ (2021-22) ಇದೇ ಉದ್ದೇಶಕ್ಕಾಗಿ ಕೇವಲ 2 ಕೋಟಿ ರು. ಮೀಸಲಿಡಲಾಗಿತ್ತು. ಆದರೆ ಈ ಬಾರಿ ನಾಲ್ಕು ಒಟ್ಟು ಹೆಚ್ಚಿನ ಹಣ ಮೀಸಲಿಡಲಾಗಿದೆ.

ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ 3.9 ಕೋಟಿ ರು. ವ್ಯಯಿಸಲಾಗುತ್ತಿದೆ. 63ನೇ ವಾರ್ಡ್‌ನಲ್ಲಿ ರೆಫೆರಲ್ ಆಸ್ಪತ್ರೆ ನಿರ್ಮಾಣಕ್ಕೆ 3.5 ಕೋಟಿ ರು., ಆಸ್ಪತ್ರೆ ನಿರ್ಮಾಣಕ್ಕೆ 65 ವಾರ್ಡ್‌ಗೆ 84 ಲಕ್ಷ, 38ನೇ ವಾರ್ಡ್‌ಗೆ ಕ್ಕೆ 38 ಲಕ್ಷ ರು. ನಿಗಡಿಪಡಿಸಲಾಗಿದೆ. ಬಿಬಿಎಂಪಿ ಬಜೆಟ್ ಅನುಮೋದನೆಗೊಂಡಿದೆ. ಶೀಘ್ರ ಸಾರ್ವಜನಿಕರಿಗೆ ಲಭ್ಯವಾಗಲಿದೆ ಅಂತ  ಆಡಳಿತಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ. 
 

Follow Us:
Download App:
  • android
  • ios