ಬೆಂ.ಗ್ರಾಮಾಂತರ(ಅ.09): ಅಕ್ರಮ ಸಂಬಂಧಗಳು ದುರಂತವಾಗಿ ಕೊನೆಯಾಗುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತಹ ಘಟನೆ ಬೆಂಗಳೂರು ಗ್ರಾಮಾಂತರದ ಆನೇಕಲ್‌ನಲ್ಲಿ ನಡೆದಿದೆ. ಪತ್ನಿ ಜೊತೆ ಸಂಬಂಧವಿಟ್ಟುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ, ಪತ್ನಿಯ ಪ್ರಿಯಕರನಿಂದಲೇ ವ್ಯಕ್ತಿಯೊಬ್ಬರು ಹತ್ಯೆಯಾಗಿದ್ದಾನೆ.

ಆನೇಕಲ್ ತಾಲೂಕಿನ ಶ್ರೀರಾಂಪುರದಲ್ಲಿ ಘಟನೆ ನಡೆದಿದ್ದು, ರಮೇಶ ಕೊಲೆಯಾದವರು. ಮುನಿಯಪ್ಪ ಎಂಬಾತ ರಮೇಶನ ಪತ್ನಿ ಜೊತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ. ಪತ್ನಿ ಜೊತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದನ್ನು ರಮೇಶ ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡ ಮುನಿಯಪ್ಪ ಸಿಂಗಲ್ ಬ್ಯಾರೆಲ್ ಗನ್‌ನಿಂದ ರಮೇಶ್‌ಗೆ ಶೂಟ್ ಮಾಡಿದ್ದಾನೆ.

‘ಮುಂದೆ ಸಿ.ಟಿ.​ರವಿ ಮುಖ್ಯ​ಮಂತ್ರಿ​ಯಾ​ಗ​ಲಿ’

ಅಕ್ರಮ ಸಂಬಂಧವಿರಿಸಿಕೊಂಡಿದ್ದೂ ಅಲ್ಲದೆ ಪ್ರೇಯಸಿಯ ಗಂಡನನ್ನೇ ಕೊಲೆ ಮಾಡಲಾಗಿದೆ. ಮಧ್ಯರಾತ್ರಿ ಕೊಲೆ ಮಾಡಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧವಿರಿಸಿದ್ದಕ್ಕೆ ಬೈಕೊಂಡು ಓಡಾಡ್ತೀಯಾ ಎಂದು ಪ್ರಶ್ನಿಸಿ ಮುನಿಯಪ್ಪ ರಮೇಶ್‌ಗೆ ಶೂಟ್ ಮಾಡಿದ್ದಾನೆ. ಶ್ರೀರಾಂಪುರದ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಕಾರು ಡಿಕ್ಕಿ: ಸವಾರ, ಚಾಲಕ ಸಾವು