ಕಲಬುರಗಿ(ಅ.08): ಜಿಲ್ಲೆಯ ಚಿಂಚೋಳಿ ಹೊರವಲಯದಲ್ಲಿ ಸೋಮವಾರ ರಾತ್ರಿ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಕಾರು ನಡುವೆ ಅಪಘಾತವಾಗಿದ್ದು, ಕಾರು ಚಾಲಕ, ಬೈಕ್ ಸವಾರ ಇಬ್ಬರೂ ಮೃತಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳ್ಳಿ ಪಟ್ಟಣದ ಹೊರವಲಯದಲ್ಲಿ ತಡರಾತ್ರಿ ಬೈಕ್ ಹಾಗೂ ಕಾರು ಮುಖಾಮುಖಿಯಾಗಿದೆ. ಬೈಕ್ ಮತ್ತು ಕಾರ್ ಮುಖಾಮುಖಿಯಾಗಿ ಬೈಕ್ ಮತ್ತು ಕಾರ್ ಚಾಲಕ ಸಾವನ್ನಪ್ಪಿದ್ದಾರೆ.

ಬೆಳಗಾವಿ: ಸಹಾಯ ಮಾಡಲು ಹೋದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ದರೋಡೆ

ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದ ನಿವಾಸಿ ಬೈಕ್ ಸವಾರ ಮಲ್ಲಿಕಾರ್ಜುನ (26) ಮತ್ತು ಚಿಂಚೋಳ್ಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ನಿವಾಸಿ ಶಕೀಲ್ ಕಾರ್ ಚಾಲಕ ಶಕೀಲ್ (40) ಮೃತ ದುರ್ದೈವಿಗಳು. ಚಿಂಚೋಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

38ರ ಮಹಿಳೆ ದಿಢೀರ್ ನಾಪತ್ತೆ; ಮಿಸ್ಸಿಂಗ್ ಕಹಾನಿ ಹಿಂದಿತ್ತು ಆಪತ್ತಿನ ಕತೆ!