ದೇವನಹಳ್ಳಿ [ಅ.08]:  ದೇವನಹಳ್ಳಿ ಹೊರವಲಯದ ಪಾರಿವಾಳ ಗುಟ್ಟದಲ್ಲಿ ಸಿದ್ಧಾಚಲ ಸ್ಥೂಲಭದ್ರ ಧಾಮ ಟ್ರಸ್ಟ್‌ನವರು ನಿರ್ಮಾಣ ಮಾಡಲಿರುವ ಅಂತಾರಾಷ್ಟ್ರೀಯ ಮಟ್ಟದ ಶಾಲಾ ಕಾಲೇಜು ಕಟ್ಟಡಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ ರವಿ ಅವರಿಗೆ ಆಶಿರ್ವಾದ ದೊರಕಿದೆ.

ಸಿದ್ಧಾಚಲ ಧಾಮದ ಗುರೂಜಿ ಚಂದ್ರಯಶ್‌ ವಿಜಯಜೀ ಮಹಾರಜ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿಗಳಾಗಲಿ ಎಂದು ಆಶೀರ್ವದಿಸಿ ನಮ್ಮ ಟ್ರಸ್ಟ್‌ನಿಂದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ, ಐವತ್ತು ಮಂದಿಗೆ ಹೃದಯ ತೊಂದರೆ ಇರುವ ಬಡ ರೋಗಿಗಳಿಗೆ ನಾರಾಯಣ ಹೃದಯಾಲದ ಡಾ.ದೇವಿಶೆಟ್ಟಿಅವರು ಹೃದಯ ಚಿಕಿತ್ಸೆ ನೀಡಿದ್ದಾರೆ ಎಂದ ಅವರು, ಈ ಧಾಮಕ್ಕೆ ಅಗತ್ಯವಾದ ರಸ್ತೆ ದೀಪ ನೀರು ಹಾಗೂ ಉದ್ಯಾನವನ ನಿರ್ಮಿಸಿಕೊಡಬೇಕೆಂದು ಮ​ನವಿ ಮಾಡಿ​ದ​ರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಬಿಜೆಪಿ ಮುಖಂಡರಾದ ಎಕೆಪಿ ನಾಗೇಶ್‌ , ಎಪಿಎಂಸಿ ರಾಜಣ್ಣ, ಎಚ್‌.ಎಂ.ರವಿಕುಮಾರ್‌ ಹಾಗೂ ಇತರರು ಉಪಸ್ಥಿತರಿದ್ದರು.

ಸ್ಥಳೀಯ ಶಾಸ​ಕ​ರಿಗೆ ಆಹ್ವಾ​ನ​ವಿ​ಲ್ಲ:

ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಸಿದ್ಧಾಚಲ ಟ್ರಸ್ಟ್‌ನಿಂದ ಆಹ್ವಾನ ನೀಡದಿರು​ವುದು ಖಂಡನೀಯ ಎಂದು ನಾಗರಿಕರು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾ​ರೆ.