ಹಿಮಾಚಲ ಪ್ರದೇಶ(ಫೆ.23): ಹೊಸ ಕಾರು ಖರೀದಿಸುವ ಪ್ರತಿಯೊಬ್ಬರು ಕಾರಿನ ಕುರಿತು ಸೂಕ್ಷ್ಮವಾಗಿ ಅಧ್ಯಯನ ನಡೆಸುತ್ತಾರೆ. ಪ್ರತಿಯೊಂದು ವಿಚಾರವನ್ನೂ ತಿಳಿದು ಬಳಿಕ ಖರೀದಿಗೆ ಮುಂದಾಗುತ್ತಾರೆ. ಇನ್ನು ಖರೀದಿಸೋ ಮುನ್ನ ಟೆಸ್ಟ್ ಡ್ರೈವ್ ಮಾಡುವುದು ಸಾಮಾನ್ಯ ಹಾಗೂ ಮಾಡಲೇ ಬೇಕು. ಹೀಗೆ ಹೊಸ ಕಾರು ಖರೀದಿಸಲು ಬಂದ ಮಹಿಳೆಯ ಅವಾಂತರಕ್ಕೆ ಕಾರು ಮಾತ್ರವಲ್ಲ ಶೋ ರೂಂ ಕೂಡ ಪುಡಿ ಪುಡಿಯಾಗಿದೆ.

ಇದನ್ನೂ ಓದಿ: ರಿಜಿಸ್ಟ್ರೇಶನ್, ರೋಡ್ ಟ್ಯಾಕ್ಸ್ ಇಲ್ಲ- ಎಲೆಕ್ಟ್ರಿಕ್ ಕಾರಿಗೆ ಕೇಂದ್ರದ ಬಂಪರ್ ಗಿಫ್ಟ್!

ಹಿಮಾಚಲ ಪ್ರದೇಶದ ಹ್ಯುಂಡೈ ಶೋ ರೂಂ ಒಂದರಲ್ಲಿ ಹೊಚ್ಚ ಹೊಸ ಐ20 ಕಾರು ಖರೀದಿಸಲು ಬಂದ ಮಹಿಳೆ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಶೋ ರೂಂನಲ್ಲಿ ಡಿಸ್‌ಪ್ಲೇ ಮಾಡಿದ್ದ ಐ20 ಕಾರಿನ ಒಳ ಪ್ರವೇಶಿದ ಮಹಿಳೆ, ಕಾರನ್ನ ಸ್ಟಾರ್ಟ್ ಮಾಡಿದ್ದಾಳೆ. ಅಷ್ಟೇ ಆಗಿದ್ದರೆ ಏನೂ ಆಗ್ತಿರ್ಲಿಲ್ಲ. ಆದರೆ ಆಕೆ ಗೇರ್ ಕೂಡ ಬದಲಾಯಿಸಿದ್ದಾರೆ. ಆದರೆ ಮಹಿಳೆ ಅಂದುಕೊಂಡತೆ  ಅದು ಮಾನ್ಯುಯೆಲ್ ಕಾರು ಆಗಿರಲಿಲ್ಲ.

ಇದನ್ನೂ ಓದಿ: ಸಾಬೀತಾಯ್ತು ಟಾಟಾ ನೆಕ್ಸಾನ್ ಕಾರು ಸುರಕ್ಷತೆ- ಪಿಲ್ಲರ್ ಬಿದ್ದರೂ ಪ್ರಯಾಣಿಕರು ಸೇಫ್!

ಶೋ ರೂಂನಲ್ಲಿ ನಿಲ್ಲಿಸಿದ್ದ ಐ20 ಅಟೋಮ್ಯಾಟಿಕ್ ಕಾರಾಗಿತ್ತು. ಹೀಗಾಗಿ ಮಹಿಳೆ ಪಾರ್ಕಿಂಗ್ ಮೂಡ್‌ನಿಂದ ಡ್ರೈವ್ ಮೂಡ್‌ಗೆ  ಗೇರ್ ಶಿಫ್ಟ್ ಮಾಡಿದ್ದಾಳೆ. ತಕ್ಷಣವೇ ಕಾರು ಚಲಿಸಲು ಆರಂಭವಾಗಿದೆ. ಗಾಬರಿಗೊಂಡ ಮಹಿಳೆ ಬ್ರೇಕ್ ಎಂದು ಎಕ್ಸಲೇಟರ್ ಒತ್ತಿದ್ದಾರೆ. ಕಾರಣ ಆಟೋಮ್ಯಾಟಿಕ್ ಕಾರಿನಲ್ಲಿ ಕ್ಲಚ್ ಇರೋದಿಲ್ಲ. ಮೊದಲೇ ಗಾಬರಿಗೊಂಡಿದ್ದ ಮಹಿಳೆ ಎಕ್ಸಲೇಟರ್ ಪ್ರೆಸ್ ಮಾಡಿದ ಪರಿಣಾಮ ನಿಲ್ಲಿಸಿದ್ದ ಕಾರು ಒಂದೇ ವೇಗೆದಲ್ಲಿ ಮುಂದೆ ಚಲಿಸಿತು.

ಇದನ್ನೂ ಓದಿ: ರೈಲನ್ನೇ ನಿಲ್ಲಿಸಿತು ಮಹೀಂದ್ರ ಬೊಲೆರೋ ಜೀಪ್!

ಅಷ್ಟರಲ್ಲೇ ಶೋ ರೂಂ ಎಕ್ಸ್‌ಕ್ಯೂಟೀವ್ ಕಾರು ನಿಲ್ಲಿಸೋ ಪ್ರಯತ್ನ ಮಾಡಿದ್ದರೂ ಕಾಲ ಮಿಂಚಿತ್ತು. ಕಾರು ನೇರವಾಗಿ ಶೋ ರೂಂ ಮುಂಭಾಗದ ಗಾಜನ್ನ ಒಡೆದು ಕೆಳಕ್ಕೆ ಹಾರಿತು. ಸಂಪೂರ್ಣ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಶೋ ರೂಂ ಹೊರಗೆ ನಿಲ್ಲಿಸಿದ್ದ ಮತ್ತೊಂದು ಕಾರಿಗೆ ಗುದ್ದಿತು. ಮುಂಭಾಗದಲ್ಲಿದ್ದ ಕಾರಿನಿಂದ ಐ20 ಕಾರು ಮುಂದೆ ಚಲಿಸಲಿಲ್ಲ. ಸ್ವಲ್ವ ಮುಂದೆ ಇದ್ದ ಮುಖ್ಯ ರಸ್ತೆ ತಲುಪಿದ್ದರೆ ಮತ್ತಷ್ಟು ಅವಘಡ ಸಂಭವಿಸುವ ಸಾಧ್ಯತೆ ಇತ್ತು.

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

ಈ ಎಲ್ಲಾ ದೃಶ್ಯಗಳು ಶೋ ರೂಂಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ಬಳಿಕ ಇದಕ್ಕೆಲ್ಲಾ ಶೋ ರೂಂ ಎಕ್ಸ್‌ಕ್ಯೂಟಿವ್ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ. ಮಹಿಳೆಗೆ ಅಟೋಮ್ಯಾಟಿಕ್ ಕಾರಿನ ಸಂಪೂರ್ಣ ಮಾಹಿತಿ ನೀಡದೆ ಕಾರು ಸ್ಟಾರ್ಟ್ ಮಾಡಲು ಅವಕಾಶ ಮಾಡಿಕೊಟ್ಟಿದ್ದೆ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಮಹಿಳೆ ಆವಾಂತರಕ್ಕೆ ಇದೀಗ ಶೋ ರೂಂ ಎಕ್ಸ್‌ಕ್ಯೂಟಿವ್ ಸಂಕಷ್ಟ ಅನುಭವಿಸುವಂತಾಗಿದೆ.