ರೈಲನ್ನೇ ನಿಲ್ಲಿಸಿತು ಮಹೀಂದ್ರ ಬೊಲೆರೋ ಜೀಪ್!

ಅತೀ ದೊಡ್ಡ ರೈಲು ಅನ್ನೋ ಹೆಗ್ಗಳಿಕೆಗ ಭಾರತೀಯ ರೈಲ್ವೇ ಇಲಾಖೆಗೆ ಇದೆ. ಆದರೆ ಇದೇ ರೈಲನ್ನು ಮಹೀಂದ್ರ ಜೀಪ್ ನಿಲ್ಲಿಸಿದೆ. ವೇಗದಿಂದ ಚಲಿಸುತ್ತಿದ್ದ ರೈಲು, ಜೀಪ್ ಪ್ರತಾಪಕ್ಕೆ ನಿಂತಿದ್ದು ಹೇಗೆ? ಇಲ್ಲಿದೆ ವಿಡಿಯೋ
 

Mahindra bolero jeep stops Indian railway in Uttarakhand

ಉತ್ತರಖಂಡ(ಫೆ.15): ವಿಶ್ವದಲ್ಲೇ 4ನೇ ಅತೀ ದೆಡ್ಡ ರೈಲ್ವೇ ಅನ್ನೋ ಹೆಗ್ಗಳಿಕೆ ಭಾರತೀಯ ರೈಲ್ವೇಗೆ ಸಲ್ಲುತ್ತೆ. ಆದರೆ ಮಹೀಂದ್ರ ಬೊಲೆರೊ ಜೀಪ್ ಇದೇ ರೈಲನ್ನ ನಿಲ್ಲಿಸಿದೆ. ಈ ಘಟನೆ ನಡೆದಿರುವುದು ಉತ್ತರಖಂಡದಲ್ಲಿ. ಸದ್ಯ ಈ ವಿಡಿಯೋ ಎಲ್ಲೆಡೆಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!

ಉತ್ತರಖಂಡದ ರೈಲು ಹಳಿಯಲ್ಲಿ ಮಹೀಂದ್ರ ಬೊಲೆರೋ ಜೀಪ್ ಮುಂದಕ್ಕೆ ಚಲಿಸಲಾಗದೆ ನಿಂತು ಹೋಗಿತ್ತು. ತಕ್ಷಣವೇ ಸ್ಥಳೀಯರು ಜೀಪ್ ದೂಡುವ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಇದೇ ವೇಳೆ ವಿರುದ್ಧ ದಿಕ್ಕಿನಿಂದ ರೈಲು ಕೂಡ ಆಗಮಿಸಿತು. ತಕ್ಷಣವೇ ಕೆಲವರು ಕೆಂಪು ಬಾವುಟ ಹಿಡಿದು ರೈಲು ನಿಲ್ಲಿಸಲು ಸೂಚನೆ ನೀಡಿದರು.

ಇದನ್ನೂ ಓದಿ: ರಾಜಧಾನಿ ಪ್ರವೇಶಿಸುವಂತಿಲ್ಲ ಇತರ ರಾಜ್ಯದ ಹಳೇ ವಾಹನ!

ಅದೃಷ್ಟವಶಾತ್ ರೈಲು ನಿಧಾನಗತಿಯಲ್ಲಿ ಚಲಿಸುತ್ತಿತ್ತು. ಇಷ್ಟೇ ಅಲ್ಲ ಚಾಲಕ ಕೂಡ ಕೆಂಪು ಬಾವುಟವನ್ನು ಗಮಿಸಿ ರೈಲನ್ನ ನಿಲಿಸಿದ. ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಜನರ ನೆರವಿನಿಂದ ಬೊಲೆರೊ ಜೀಪ್ ಮುಂದಕ್ಕೆ ತಳ್ಳುವಲ್ಲಿ ಯಶಸ್ವಿಯಾದರು.  ಇದೀಗ ಜೀಪ್ ರೈಲನ್ನೇ ನಿಲ್ಲಿಸಿತು ಅನ್ನೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

Latest Videos
Follow Us:
Download App:
  • android
  • ios