ಡೆಹ್ರಡೂನ್(ಫೆ.17): ಟಾಟಾ ನೆಕ್ಸಾನ್ SUV ಕಾರು ಭಾರತದಲ್ಲಿರುವ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆಯಲ್ಲಿ ಟಾಟಾ ನೆಕ್ಸಾನ್ ಕಾರು ಗರಿಷ್ಠ 5 ಸ್ಟಾರ್ ಪಡೆದಿದೆ. ಈ ಮೂಲಕ ಸುರಕ್ಷತೆಯಲ್ಲಿ 5 ಸ್ಟಾರ್ ಪಡೆದ ಭಾರತದ ಮೊಟ್ಟ ಮೊದಲ ಕಾರು ಅನ್ನೋ ಹಿರಿಮೆಗೂ ಪಾತ್ರವಾಗಿದೆ. ಇದೀಗ ಟಾಟಾ ನೆಕ್ಸಾನ್ ಅತ್ಯಂತ ಸುರಕ್ಷತೆಯ ಕಾರು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. 

ಇದನ್ನೂ ಓದಿ: ಭಾರತದ ಈ ಕಾರು ಸುರಕ್ಷತೆಯಲ್ಲಿ ವಿಶ್ವದಲ್ಲೇ ಅಗ್ರ!

ಡೆಹ್ರಡೂನ್‌ನ ಚಿಂತನ್ ನಾಯಕ್ ಕುಟುಂಬ ಸದಸ್ಯರೊಂದಿಗೆ ಬಿರುಗಾಳಿ ಮಳೆಗೆ ಅಂಗಡಿ ಮಳಿಗೆ ಪಕ್ಕದಲ್ಲಿ ನಿಂತುಕೊಂಡಿದ್ದರು. ಗಾಳಿ ಮಳೆ ಜೋರಾಗುತ್ತಿದ್ದಂತೆ ಪಕ್ಕದಲ್ಲೇ ಪಾರ್ಕ್ ಮಾಡಿದ್ದ ತಮ್ಮ ಟಾಟಾ ನೆಕ್ಸಾನ್ ಕಾರಿನೊಳಗೆ ಕುಳಿತುಕೊಳ್ಳಲು ಮುಂದಾದರು. ಕಾರಿನಲ್ಲಿ ಕುಳಿತ ಕೆಲವೇ ಕ್ಷಣಗಳಲ್ಲಿ ಜಾಹೀರಾತು ಪಿಲ್ಲರ್ ನೇರವಾಗಿ ಕಾರಿನ ಮೇಲಕ್ಕೆ ಬಿದ್ದಿದೆ.

ಇದನ್ನೂ ಓದಿ: ಎಷ್ಟು ಮೈಲೇಜ್ ಕೊಡುತ್ತೆ ಮುಖ್ಯವಲ್ಲ: ಮಾರುತಿಗೆ ಟಾಟಾ ಟಾಂಗ್!

ಕಬ್ಬಿಣದ ಬಿಲ್‌ಬೋರ್ಡ್ ಪಿಲ್ಲರ್ ಕಾರಿನ ಮೇಲಕ್ಕೆ ಬಿದ್ದ ಮರುಕ್ಷಣವೇ ಒಳಗಿದ್ದ ಚಿಂತನ್ ನಾಯಕ್ ಕುಟುಂಬ ಸದಸ್ಯರು ತಕ್ಷಣವೇ ಹೊರ ಬಂದಿದ್ದಾರೆ.  ಪಿಲ್ಲರ್ ಬಿದ್ದ ರಭಸಕ್ಕೆ ಕಾರಿನ ಎಡಭಾಗದ ಡೋರ್ ಜಾಮ್ ಆಗಿದೆ. ಹೀಗಾಗಿ ಬಲಭಾಗದ ಡೋರ್ ಮೂಲಕ ಎಲ್ಲರೂ ಹೊರಬಂದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಕೂಡ ಯಾವುದೇ ಅಪಾಯವಾಗಿಲ್ಲ.