ರಿಜಿಸ್ಟ್ರೇಶನ್, ರೋಡ್ ಟ್ಯಾಕ್ಸ್ ಇಲ್ಲ- ಎಲೆಕ್ಟ್ರಿಕ್ ಕಾರಿಗೆ ಕೇಂದ್ರದ ಬಂಪರ್ ಗಿಫ್ಟ್!
ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕ ರಿಜಿಸ್ಟ್ರೇಶನ್ ಫಿ, ರಸ್ತೆ ತೆರಿಗೆ ಕಟ್ಟಬೇಕಿಲ್ಲ. ಇನ್ನು ಚಾರ್ಜಿಂಗ್ ಕೂಡ ಉಚಿತ. ಇದು ಕೇಂದ್ರ ಸರ್ಕಾರದ ಹೊಸ ಯೋಜನೆ. ಈ ಯೋಜನೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಫೆ.19): ಕೇಂದ್ರ ಸರ್ಕಾರ ಮಹತ್ವಾಂಕ್ಷಿ ಯೋಜನೆ FAME2 (Faster Adoption and Manufacturing of (Hybrid &) Electric Vehicles) ಜಾರಿಯಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬರೋಬ್ಬರಿ 5,000 ಕೋಟಿ ರೂಪಾಯಿ ತೆಗೆದಿರಿಸಿದೆ. ಈ ಮೂಲಕ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಿ, ಮಾಲಿನ್ಯ ತಡೆಗಟ್ಟಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಕೇಂದ್ರ ಸರ್ಕಾರ ನೀಡಲಿದೆ 50 ಸಾವಿರ ರೂ!
FAME2 ಎರಡು ಹಂತವಾಗಿ ಜಾರಿಯಾಗುತ್ತಿದೆ. ಮೊದಲ ಹಂತದಲ್ಲಿ ಸಾರ್ವಜನಿಕ ವಾಹನಗಳಾದ ಬಸ್ ಸೇರಿದಂತೆ ಸಾರಿಗೆ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಬದಲಾಗಲಿದೆ. ಬಳಿಕ ಪ್ಯಾಸೆಂಜರ್ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಯಲಿದೆ. ಗ್ರಾಹಕರನ್ನ ಎಲೆಕ್ಟ್ರಿಕ್ ವಾಹನದತ್ತ ಸೆಳೆಯಲು ಆರಂಭದಲ್ಲಿ ಹೊಸ ಸ್ಕೀಮ್ ಜಾರಿಮಾಡಲು ಕೇಂದ್ರ ನಿರ್ಧರಿಸಿದೆ.
ಇದನ್ನೂ ಓದಿ: ರೆಡ್ ಸಿಗ್ನಲ್ ದಾಟಿದರೆ ಏನಾಗುತ್ತೆ? - ರಸ್ತೆ ಸಾರಿಗೆ ಇಲಾಖೆ ಹೇಳಿದ ಸತ್ಯ!
ಎಲೆಕ್ಟ್ರಿಕ್ ವಾಹನ ಖರೀದಿಸೋ ಗ್ರಾಹಕರು ಕಾರಿಗೆ ರೋಡ್ ಟ್ಯಾಕ್ಸ್, ರಿಜಿಸ್ಟ್ರೇಶನ್ ಫೀ ಕಟ್ಟಬೇಕಿಲ್ಲ. ಇಷ್ಟೇ ಅಲ್ಲ ಚಾರ್ಜಿಂಗ್ ಕೂಡ ಉಚಿತವಾಗಿ FAME2 ಯೋಜನೆಯಡಿ ಕೇಂದ್ರ ಸರ್ಕಾರ ನೀಡಲಿದೆ. ಈಗಾಗಲೇ ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ 50,000 ರೂಪಾಯಿ ನೀಡಲು ಮುಂದಾಗಿದೆ. 2025ರೊಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಓಡಾಟ ಹೆಚ್ಚಿಸಲು ಕೇಂದ್ರ ಶತಪ್ರಯತ್ನ ಮಾಡುತ್ತಿದೆ.