ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!
ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಅಥವಾ ಯಾವುದೇ ಭಾರದ ಬೈಕ್ ಎತ್ತುವುದು ಅತೀ ದೊಡ್ಡ ಸಾಹಸ. ಈ ಸಂದರ್ಭದಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ನೂತನ ವಿಧಾನದ ಮೂಲಕ, ಯಾರ ಸಹಾಯವೂ ಇಲ್ಲದೆ ಬೈಕ್ ಎತ್ತಬಹುದು.
ಬೆಂಗಳೂರು(ಫೆ.13): ರಾಯಲ್ ಎನ್‌ಫೀಲ್ಡ್, ಹಾರ್ಲೆ ಡೇವಿಡ್ಸನ್ ಸೇರಿದಂತೆ ಹೆಚ್ಚಿನ ಸಿಸಿ ಎಂಜಿನ್ ಹೊಂದಿರುವ ಬೈಕ್‌ಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಈ ಬೈಕ್ ನಿಲ್ಲಿಸುವ ವೇಳೆ ಅಥವಾ ಇನ್ಯಾವುದೋ ಕಾರಣದಿಂದ ನೆಲಕ್ಕೆ ಬಿದ್ದಲ್ಲಿ, ಭಾರ ಇರೋ ಈ ಬೈಕ್‌ಗಳನ್ನ ಮೇಲಕ್ಕೆತ್ತುವುದೇ ಅತೀ ದೊಡ್ಡ ಸಮಸ್ಯೆ. ಹೆಚ್ಚಿನ ಸಂದರ್ಭಗಳಲ್ಲಿ ಸಹಾಯಕ್ಕೆ ಯಾರು ಇರುವುದಿಲ್ಲ. ಆದರೆ ನೆಲಕ್ಕೆ ಬಿದ್ದಿರುವ ಬೈಕ್ ಸುಲಭವಾಗಿ ಎತ್ತಲು ಹಲವು ವಿಧಾನಗಳಿದೆ.
ಇದನ್ನೂ ಓದಿ: ಕಾರು ಡ್ರೈವಿಂಗ್ ವೇಳೆ ಗಮನದಲ್ಲಿರಲಿ 5 ಅಂಶ - ನಿರ್ಲಕ್ಷ್ಯಿಸಿದರೆ ಅಪಾಯ!
ಸಾಮಾನ್ಯವಾಗಿ ಬೈಕ್ ನೆಲಕ್ಕೆ ಉರಳಿದರೆ 2 ವಿಧಾನಗಳಲ್ಲಿ ಪ್ರಯತ್ನ ಮಾಡುತ್ತೇವೆ. ಆದರೆ ಈ ರೀತಿ ಬೈಕ್ ಎತ್ತುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಬೈಕ್ ಮೇಲಕ್ಕೆ ಎತ್ತುವ ಸಂದರ್ಭದಲ್ಲಿ ಭಾರವಾಗಿ ಮತ್ತೆ ಕಾಲಿಗೆ ಅಥವಾ ಇನ್ಯಾವುದೇ ಭಾಗಕ್ಕೆ ಬಿದ್ದು ಗಾಯಗಳಾಗೋ ಸಾಧ್ಯತೆ ಇದೆ. ಆದರೆ ಸುಲಭವಾಗಿ ಎತ್ತುವ ವಿಧಾನ ಈ ಕೆಳಗಿನ ವಿಡಿಯೋದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಹೊತ್ತಿ ಉರಿಯಿತು ಚಲಿಸುತ್ತಿದ್ದ ಬೈಕ್ - ತನಿಖೆಗೆ ಮುಂದಾದ ಕಂಪೆನಿ!
ಯಾವುದೇ ಬೈಕ್ ಆಗಿರಲಿ, ಈ ರೀತಿ ಹಿಮ್ಮುಖವಾಗಿ ಮೇಲಕ್ಕೆತ್ತುವುದು ಸುಲಭ. ಇದರಿಂದ ಬೈಕ್ ಎತ್ತುವ ವ್ಯಕ್ತಿಗೆ ಆಗಲಿ ಆಥವಾ ಬೈಕ್‌ಗೆ ಆಗಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಮೂಲಕ ಯಾರ ಸಹಾಯವೂ ಇಲ್ಲದೆ ನೆಲಕ್ಕೆ ಬಿದ್ದ ಬೈಕ್ ಸುಲಭವಾಗಿ ಮೇಲಕ್ಕೆತ್ತಬಹುದು.