ನವದೆಹಲಿ(ಜ.12): ಭಾರತದಲ್ಲಿ ಮಾರುತಿ 800 ಕಾರಿಗೆ ವಿಶೇಷ ಸ್ಥಾನವಿದೆ. ಕಾರಣ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಕಾರು ಮಾರುತಿ 800. ಹೀಗೆ 1984ರ ಮಾರುತಿ ss800 ಕಾರು ಸಂಪೂರ್ಣ ಕೆಟ್ಟು ಹೋಗಿತ್ತು. ಇದೀಗ ಈ ಕಾರನ್ನು ಸಂಪೂರ್ಣಾಗಿ ಸರಿಪಡಿಸಲಾಗಿದ್ದು, ಹೊಚ್ಚ ಹೊಸ ಕಾರಿನಂತಿದೆ. ಇದೀಗ ಈ ಕಾರನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಪಾಳು ಬಿದ್ದಿದ್ದ ಭಾರತದ ಮೊಟ್ಟ ಮೊದಲ ಮಾರುತಿ ಕಾರಿಗೆ ಮರು ಜೀವ!

ದೆಹಲಿಯ AGM ಟೆಕ್ನಾಲಜಿ ಕಂಪನಿ ಈ ಕಾರನ್ನು ಮತ್ತೆ ರಸ್ತೆಗಿಳಿಸುವ ಸಾಹಸಕ್ಕೆ ಕೈಹಾಕಿತು. ಬಳಿಕ ಕಾರಿನ ಮೂಲ ರೂಪಕ್ಕೆ ಯಾವುದೇ ದಕ್ಕೆ ಬರದ ರೀತಿಯಲ್ಲಿ ನವೀಕರಿಸಲು ಯೋಜನೆ ಸಿದ್ದಪಡಿಸಿದೆ. ಕಾರನ್ನು ಸಂಪೂರ್ಣಾಗಿ ಬಿಚ್ಚಿ ಹೊಸ ರೂಪ ನೀಡಲಾಗಿದೆ.

ಇದನ್ನೂ ಓದಿ: ಐತಿಹಾಸಿಕ ಮಾರುತಿ 800 ಕಾರಿಗೆ 35ನೇ ವರ್ಷದ ಸಂಭ್ರಮ!

1984ರಲ್ಲಿ ಕೆಂಪು ಬಣ್ಣದಲ್ಲಿ ಬಿಡುಗಡೆಯಾಗ ಈ ಕಾರನ್ನೂ ಅದೇ ಬಣ್ಣದಲ್ಲಿ ನವೀಕರಿಸಲಾಗಿದೆ. ನೂತನ ಅಲೋಯ್ ವೀಲ್ಹ್ ಹಾಕಲಾಗಿದ್ದು ಈ ಕಾರಿನ ಅಂದ ಮತ್ತಷ್ಟು ಹೆಚ್ಚಾಗಿದೆ. ಎಸಿ, ಇನ್ಸ್‌ಟ್ರುಮೆಂಟ್ ಕನ್ಸೋಲ್, ಮ್ಯೂಸಿಕ್ ಸಿಸ್ಟಮ್, ಟೆಕೋಮೀಟರ್ ಫೀಚರ್ಸ್ ಹೆಚ್ಚುವರಿ ಸೇರಿಸಲಾಗಿದೆ.

ಇದನ್ನೂ ಓದಿ: ಮಾರುತಿ 800 to BMW: ವರ್ಷದಿಂದ ವರ್ಷಕ್ಕೆ ಬದಲಾಗುತ್ತೆ ಸಚಿನ್ ಕಾರು!

ಕಾರಿನ ಡ್ಯಾಶ್ಬೋರ್ಡ್, ಒ    ಳವಿನ್ಯಾಸ, ಹೊಸ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೈಜತೆಗೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ನವೀಕರಣ ಮಾಡಲಾಗಿದೆ.  1984 ಮಾರುತಿ 800 ಕಾರಿನಲ್ಲಿದ್ದ ಎಂಜಿನ್ ಬಳಸಲಾಗಿದೆ.  3-ಸಿಲಿಂಡರ್,  796cc ಎಂಜಿನ್ ಹೊಂದಿದ್ದು, ಸದ್ಯ 45hp ಪವರ್ ಹೊಂದಿದೆ. ಹಳೇ ಎಂಜಿನ್ 35hp ಪವರ್ ಹೊಂದಿತ್ತು. 

1984ರಲ್ಲಿ ಈ ಕಾರಿನ ಬೆಲೆ  52,500 ರೂಪಾಯಿ(ಎಕ್ಸ್ ಶೋ ರೂಂ).  AGM ಟೆಕ್ನಾಲಜಿ ಕಂಪನಿ ಈ ಕಾರಿನ ಬೆಲೆ, ಮಾರಟದ ವಿವರಗಳನ್ನು ಬಹಿರಂಗ ಪಡಿಸಿಲ್ಲ.