ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪ್ರತಿ ವರ್ಷ ಕಾರುಗಳನ್ನು ಬದಲಾಯಿಸುತ್ತಾರೆ.  ಸಚಿನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಸಚಿನ್  ಖರೀದಿಸಿದ ಕಾರುಗಳೆಷ್ಟು? ಇಲ್ಲಿದೆ ಸಚಿನ್ ಕಾರು ಪ್ರೀತಿ.

ಮುಂಬೈ(ಏ.24): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂದು(ಏ.24) 46ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಚಿನ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸಚಿನ್ ಬರ್ತ್‌ಡೇ ಸಂಭ್ರಮ ಒಂದಡೆಯಾದರೆ ಸಚಿನ್ ಕುರಿತ ಹಲವು ಇಂಟ್ರೆಸ್ಟಿಂಗ್ ವಿಚಾರಗಳು ಮಾಹಿತಿ ಇಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ವಿರಾಟ್ ಕೊಹ್ಲಿ ಮನೆ ಸೇರಿತು 4 ಕೋಟಿ ರೂಪಾಯಿ ಕಾರು!

ಸಚಿನ್ ತೆಂಡುಲ್ಕರ್ ಬಳಿ BMW,ಮರ್ಸಿಡೀಸ್ ಬೆಂಝ್, ನಿಸ್ಸಾನ್ GT-R, ಫೆರಾರಿ ಸೇರಿದಂತೆ ದುಬಾರಿ ಕಾರುಗಳಿವೆ. ಆದರೆ ಸಚಿನ್ ಮೊದಲ ಕಾರು ಮಾರುತಿ 800. ಸಚಿನ್ ಬಹಳ ಇಷ್ಟಪಟ್ಟು ಹಾಗೂ ಕಷ್ಟಪಟ್ಟು ಖರೀದಿಸಿದ ಕಾರು ಈ ಮಾರುತಿ 800. ವಿಶೇಷ ಅಂದರೆ ಸಚಿನ್ ಬಳಿ ಈಗಲೂ ಮೊದಲು ಖರೀದಿಸಿದ ಮಾರುತಿ 800 ಕಾರಿದೆ. ಸಚಿನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಇದರಲ್ಲಿ ಕೆಲ ಕಾರುಗಳ ವಿವರ ಇಲ್ಲಿದೆ.

ಇದನ್ನೂ ಓದಿ: ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!

ಫೆರಾರಿ 360 ಮೊಡೆನಾ:
ಫೆರಾರಿ 360 ಮೊಡೆನಾ ಕಾರು ಭಾರತದಲ್ಲಿ ಸಂಚಲ ಮೂಡಿಸಿದ ಕಾರು. ಆಸಿಸ್ ಕ್ರಿಕೆಟ್ ದಿಗ್ಗ ಡಾನ್ ಬ್ರಾಡ್ಮನ್ 29 ಟೆಸ್ಟ್ ಶತಕ ದಾಖಲೆಯನ್ನು ಸಚಿನ್ ಮುರಿದ ಬೆನ್ನಲ್ಲೇ ಫಾರ್ಮುಲಾ 1 ರೇಸಲ್ ಮೈಕಲ್ ಶುಮಾಕರ್ ಫೆರಾರಿ 360 ಮೊಡೆನಾ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಕೆಲ ವರ್ಷಗಳ ಹಿಂದೆ ಸಚಿನ್ ಈ ಕಾರನ್ನು ಮಾರಾಟ ಮಾಡಿದ್ದಾರೆ.

ನಿಸ್ಸಾನ್ GT-R
ಫೆರಾರಿ ಬಳಿಕ ಸಚಿನ್ ತೆಂಡೂಲ್ಕರ್ ನಿಸ್ಸಾನ್ GT-R ಕಾರನ್ನು ಖರೀದಿಸಿದರು. ಸರಿಸುಮಾರು 2.20 ಕೋಟಿ ರೂಪಾಯಿ ಮೌಲ್ಯದ ಈ ಕಾರಿಗೆ ಸಚಿನ್ ಆಲ್ಟರ್ ಕೂಡ ಮಾಡಿಸಿಕೊಂಡಿದ್ದರು. 2017ರಲ್ಲಿ ಸಚಿನ್ ಈ ಕಾರನ್ನು ಮಾರಾಟ ಮಾಡಿದ್ದಾರೆ.

BMW X5M
2002ರ ಮಾಡೆಲ್ BMW X5M ಕಾರು ಸಚಿನ್ ಹೆಚ್ಚು ಬಳಸಿದ್ದಾರೆ. ಈ ಕಾರಿನಲ್ಲೇ ಸಚಿನ್ ಹೆಚ್ಚು ಓಡಾಡಿದ್ದಾರೆ. ಈ ಕಾರು 72,000 ಕಿ.ಮೀ ಪ್ರಯಾಣ ಮಾಡಿದೆ. ಈ ಕಾರಿನ ಬೆಲೆ 80 ಲಕ್ಷ ರೂಪಾಯಿ. ಕಳೆದ ವರ್ಷ ಈ ಕಾರನ್ನೂ ಸಚಿನ್ ಮಾರಾಟ ಮಾಡಿದ್ದಾರೆ.

BMW i8
ತೆಂಡುಲ್ಕರ್ ಬಳಿ ಡಿಸಿ ಡಿಸೈನ್ ಕಸ್ಟಮೈಸ್ ಮಾಡಿರುವ BMW i8 ಕಾರಿದೆ. 2012ರಿಂದ ಸಚಿನ್ BMW ಕಾರಿನ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ. ನೀಲಿ BMW i8 ಕಾರು ಖರೀದಿಸಿದ ಸಚಿನ್ ಈ ಕಾರನ್ನು ಮಾಡಿಫೈ ಮಾಡಿದ್ದಾರೆ. ಇದೀಗ ರೆಡ್ ಹಾಗೂ ಬ್ಲಾಕ್ ಲುಕ್‌ನಲ್ಲಿ ಕಂಗೊಳಿಸುತ್ತಿದೆ. 

BMW i8 ಕಾರಿನ ಜೊತೆ BMW M6 ಗ್ರಾನ್ ಕಪ್, BMW 7 ಸೀರಿಸ್, BMW M5, ಮರ್ಸಡೀಸ್ ಬೆಂಝ್ c36 AMG ಕಾರು ಕೊಡ ಹೊಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಸಚಿನ್ ತಮ್ಮ ಕಾರು ಬದಲಾಯಿಸಿದ್ದಾರೆ. ಕಾರಿನ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದಾರೆ.