ಐತಿಹಾಸಿಕ ಮಾರುತಿ 800 ಕಾರಿಗೆ 35ನೇ ವರ್ಷದ ಸಂಭ್ರಮ!
ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದ ಐತಿಹಾಸಿಕ ಮಾರುತಿ 800 ಕಾರಿಗೆ 35 ವರ್ಷದ ಸಂಭ್ರಮ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲೇ ನಿರ್ಮಾಣಗೊಂಡ ಈ ಕಾರು ಭಾರತೀಯರ ಮನ ಗೆದ್ದ ಕಾರು.
ನವದೆಹಲಿ(ಡಿ.14): ಇಂದಿಗೆ ಸರಿಯಾಗಿ 35 ವರ್ಷಗಳ ಹಿಂದೆ, ಇದೇ ದಿನ ಮಾರುತಿ 800 ಕಾರು ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಭಾರತದಲ್ಲೇ ನಿರ್ಮಾಣವಾದ ಮೊತ್ತ ಮೊದಲ ಮಾರುತಿ 800 ಕಾರನ್ನ ಭಾರತದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಕಿಟ್ ಅಳವಡಿಸಿ ನಿಮ್ಮ ಕಾರನ್ನ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಿ!
ಡಿಸೆಂಬರ್ 14, 1983 ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಮರೆಯಲಾಗದ ದಿನ. ಪ್ರಿಮಿಯರ್ ಪದ್ಮಿನಿ ಹಾಗೂ ಅಂಬಾಸಿಡರ್ ಕಾರುಗಳಿಗೆ ಪೈಪೋಟಿಯಾಗಿ ಮಾರುತಿ 800 ಕಾರು ರಸ್ತೆಗಿಳಿಯಿತು. ಬಿಡುಗಡೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ, 47,500 ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಿದ್ದ ಹರ್ಪಾಲ್ ಸಿಂಗ್‌ಗೆ ಕಾರು ಕಿ ನೀಡಿ ಉದ್ಘಾಟನೆ ಮಾಡಿದರು.
ಇದನ್ನೂ ಓದಿ: 3 ಲಕ್ಷ ರೂಪಾಯಿಗೆ ಖರೀದಿಸಬಹುದಾದ ಟಾಪ್ 3 ಕಾರು!
796 ಸಿಸಿ ಎಂಜಿನ್, 4 ಸೀಟರ್, ಡಿಸ್ಕ್ ಬ್ರೇಕ್, ಫ್ರಂಟ್ ವೀಲ್ಹ್ ಡ್ರೈವ್, ಬಕೆಟ್ ಸೀಟ್ಸ್, ಪ್ಲಾಸ್ಟಿಕ್ ಮೌಲ್ಡ್ ಡ್ಯಾಶ್‌ಬೋರ್ಡ್ ಸೇರಿದಂತೆ ಹಲವು ಫೀಚರ್ಸ್ ಭಾರತೀಯರಿಗೆ ಹೊಸದಾಗಿತ್ತು. ಹೀಗಾಗಿ ಈ ಕಾರು ಭಾರತೀಯರ ಮನ ಗೆದ್ದಿತು.
2013ರಲ್ಲಿ ಹಳೆ ಮಾರುತಿ 800 ಕಾರು ನಿರ್ಮಾಣ ನಿಲ್ಲಿಸಲಾಯಿತು. ಬಳಿಕ ನೂತನ ಮಾರುತಿ 800 ಬಿಡುಗಡೆ ಮಾಡಲಾಗಿದೆ. ಆದರೆ ಈಗಲೂ ಹಳೇ ಮಾರುತಿ 800 ಕಾರು ಜನರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.