ನವದೆಹಲಿ(ಫೆ.15): ಭಾರತದಲ್ಲಿ ಮಾರುತಿ 800 ಕಾರು 35 ವರ್ಷ ಪೂರೈಸಿದೆ. ಡಿಸೆಂಬರ್ 14, 1983ರಲ್ಲಿ ಮೊತ್ತ ಮೊದಲ ಬಾರಿಗೆ ಮಾರುತಿ 800 ಕಾರು ಬಿಡುಗಡೆಯಾಯಿತು. ಹಿಂದೂಸ್ಥಾನ್ ಅಂಬಾಸಿಡರ್, ಪ್ರಿಮಿಯರ್ ಪದ್ಮಿನಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಮಾರುತಿ 800 ಕಾರು ರಸ್ತೆಗಿಳಿಯಿತು.   ಪ್ರಧಾನ ಮಂತ್ರಿ ಇಂದಿರಾ ಗಾಂಧಿ, 47,500 ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಿದ್ದ ಹರ್ಪಾಲ್ ಸಿಂಗ್‌ಗೆ ಕಾರು ಕಿ ನೀಡಿ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಐತಿಹಾಸಿಕ ಮಾರುತಿ 800 ಕಾರಿಗೆ 35ನೇ ವರ್ಷದ ಸಂಭ್ರಮ!

ಹರ್ಪಾಲ್ ಸಿಂಗ್ DIA 6479 ನಂಬರಿನ  ಕಾರು ಭಾರತದ ಮೊತ್ತ ಮೊದಲ ಮಾರುತಿ 800 ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 1983 ರಿಂದ 2010ರ ವರೆಗೆ ಭಾರತದ ಮೊದಲ ಮಾರುತಿ 800 ಕಾರನ್ನ ಹರ್ಪಾಲ್ ಸಿಂಗ್ ಬಳಸಿದ್ದರು. ಆದರೆ 2010ರಲ್ಲಿ ಹರ್ಪಾಲ್ ಸಿಂಗ್ ಮರಣ ಹೊಂದಿದ ಕಾರಣ, ನವದೆಹಲಿಯ ಮನೆ ಮುಂದಿನ ಗ್ರೀನ್ ಪಾರ್ಕ್‌ನಲ್ಲಿ ಕಾರು ಅನಾಥವಾಗಿ ಬಿದ್ದಿತ್ತು.

ಇದನ್ನೂ ಓದಿ: ರೈಲನ್ನೇ ನಿಲ್ಲಿಸಿತು ಮಹೀಂದ್ರ ಬೊಲೆರೋ ಜೀಪ್!

9 ವರ್ಷಗಳ ಕಾಲ ಕಾರು ಅನಾಥವಾಗಿ ಬಿದ್ದ ಕಾರಣ, ಕಾರು ತುಕ್ಕು ಹಿಡಿದು ಹೋಗಿತ್ತು. ಇದನ್ನ ಗಮನಿಸಿದ ನವದೆಹಲಿಯ ಮಾರುತಿ ಕಾರು ಸರ್ವೀಸ್ ಸ್ಟೇಶನ್, ಕಾರಿಗೆ ಮರು ಜೀವ ನೀಡಿದೆ. ಮಾಡೆಲ್, ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಹಳೇ ಕಾರನ್ನ ಹೊಚ್ಚ ಹೊಸದಾಗಿ ಮಾಡಿದ್ದಾರೆ.

ಇದನ್ನೂ ಓದಿ: ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!

ನಿಂತು ಹೋಗಿದ್ದ ಕಾರಣ ಕಾರಿನ ಎಂಜಿನ್ ಕೂಡ ಕೆಟ್ಟು ಹೋಗಿತ್ತು. ಇದೀಗ ಎಂಜಿನ್, ಇಂಧನ ಟ್ಯಾಂಕ್ ಸೇರಿದಂತೆ ಮೊದಲ ಕಾರಿನ ಬಿಡಿ ಭಾಗಗಳನ್ನ ಸರಿಪಡಿಸಲಾಗಿದೆ. 796ಸಿಸಿ ಪೆಟ್ರೋಲ್ ಎಂಜಿನ್, 47 Bhpಪವರ್ ಹಾಗೂ 69 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯಹೊಂದಿದೆ.