Asianet Suvarna News Asianet Suvarna News

ಉದ್ದೇಶಪೂರ್ವಕವಾಗಿ KSRTC ಬಸ್ ಪ್ರಯಾಣಕ್ಕೆ ಅಡ್ಡಿ; ಪುಂಡರಿಗೆ ಪೊಲೀಸ್ ತಕ್ಕ ಶಾಸ್ತಿ!

ಹೈವೇಗಳಲ್ಲಿ, ನಗರಗಳಲ್ಲಿ ಸೇರಿದಂತೆ ಹಲೆವೆಡೆ ಬೈಕ್ ವ್ಹೀಲಿಂಗ್, ಇತರರ ಪ್ರಯಾಣಕ್ಕೆ ಅಡ್ಡಿ ಪಡಿಸಿವುದು ಅಪಾಯಕಾರಿ ಸ್ಟಂಟ್ ಮಾಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ರೀತಿ ಕೆಆಸ್‌ಆರ್‌‌ಟಿಸಿ ಬಸ್ ಪ್ರಯಾಣಕ್ಕೆ ಅಡ್ಡಿ ಪಡಿಸಿದ ಪುಂಡರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

Police seized a Yamaha Cygnet scooter from two young kids after they blocked a KSRTC bus kerala ckm
Author
Bengaluru, First Published Oct 17, 2020, 3:25 PM IST

ಕೊಲ್ಲಂ(ಅ.17): ಮೋಟಾರು ವಾಹನ ಕಾಯ್ದೆಯಲ್ಲಿ ಇತರ ವಾಹನ ಸವಾರರಿಗೆ, ಪ್ರಯಾಣಕ್ಕೆ ಅಡ್ಡಿಪಡಿಸುವುದು ಕೂಡ ನಿಯಮ ಉಲ್ಲಂಘನೆಯಾಗಿದೆ. ಈ ನಿಯಮ ಉಲ್ಲಂಘನೆಗೆ ಗರಿಷ್ಠ 10,000 ರೂಪಾಯಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಪುಂಡರು ಇದಕ್ಕೆಲ್ಲ ತಲೆಕೆಡೆಸಿಕೊಳ್ಳೋ ಜಾಯಾಮಾನದವರಲ್ಲ. ಟ್ರಾಫಿಕ್ ಪೊಲೀಸ್, ಸಿಸಿಟಿವಿ ಇಲ್ಲದ ಹೈವೇಗಳಲ್ಲಿ ಇದೇ ರೀತಿ ಕೇರಳ ಸರ್ಕಾರಿ ಸಾರಿಗೆ ವಾಹನಕ್ಕೆ ಅಡ್ಡಿ ಪಡಿಸಿದ ಯುವಕರಿಬ್ಬರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

ಮೋಟಾರು ವಾಹನ ಕಾಯ್ದೆ: ಮೊಬೈಲ್ ಬಳಕೆಗೆ ಅವಕಾಶ ಆದರೆ ಷರತ್ತು ಅನ್ವಯ!.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತಿತ್ತು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಯುವಕರಿಬ್ಬರು, ಬಸ್ ಪ್ರಯಾಣಕ್ಕೆ ಅಡ್ಡಿಪಡಿಸಿದ್ದಾರೆ. ಬಸ್ ಮುಂದೆ ನಿಧಾನವಾಗಿ ಸಂಚರಿಸಿದ್ದಾರೆ. ಇಷ್ಟೇ ಅಲ್ಲ, ಬಸ್ ಮುಂದೆ ಚಲಿಸಲು ಅನುವು ಮಾಡಿಕೊಟ್ಟಿಲ್ಲ. ಬಸ್‌ಗೆ ರಸ್ತೆಯನ್ನು ಬಿಟ್ಟುಕೊಡದೆ ಧಿಮಾಕು ತೋರಿಸಿದ್ದಾರೆ.

ಬಸ್ ಚಾಲಕ ಪದೇ ಪದೇ ಹಾರ್ನ್ ಹಾಕಿ ಎಚ್ಚರಿಸುವ ಕೆಲಸ ಮಾಡಿದ್ದಾನೆ. ಆದರೆ ಪುಂಡರು ಕೇಳಬೇಕಲ್ಲ. ರಸ್ತೆ ಮಧ್ಯೆದಲ್ಲಿ ಸ್ಕೂಟರ್ ನಿಲ್ಲಿಸಿ ಬಸ್ ಚಾಲನಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.  ನಾವು ಸಂಚರಿಸಿದ ಬಳಿಕ ಬಸ್ ತೆರಳಿದರೆ ಸಾಕು ಎಂದು ಯವಕರು ಬಸ್ ಚಾಲಕನಿಗೆ ವಾರ್ನಿಂಗ್ ನೀಡಿದ್ದಾರೆ. 

ಲೈಸೆನ್ಸ್, ವಿಮೆ ಸೇರಿದಂತೆ ವಾಹನ ದಾಖಲೆ ಪತ್ರಗಳಿಗೆ ಹೊಸ ನಿಯಮ; ಅ.1 ರಿಂದ ಜಾರಿ!

ಯುವಕರ ಪುಂಡಾಟವನ್ನು ಬಸ್ ಒಳಗೆ ಮೊಬೈಲ್ ಮೂಲಕ ಪ್ರಯಾಣಿಕರು ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆಗಿತ್ತು. ವ್ಯಾಟ್ಸಾಪ್, ಫೇಸ್‌ಬುಕ್‌ನಲ್ಲಿ ಭಾರಿ ಸಂಚಲ ಸೃಷ್ಟಿಸಿತ್ತು. ಈ ವಿಡಿಯೋ ಕೇರಳ ಪೊಲೀಸರ ಕೈಸೇರಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಕೂಟರ್ ರಿಜಿಸ್ಟ್ರೇಶನ್ ಮಾಹಿತಿ ಪಡೆದು ಕರೆ ಮಾಡಿದ್ದಾರೆ. ಆದರೆ ಯುವಕ ಫೋನ್ ಸ್ವಿಚ್ ಆಗಿತ್ತು.

ರಿಜಿಸ್ಟ್ರೇಶನ್‌ನಲ್ಲಿ ನೀಡಿರುವ ವಿಳಾಸಕ್ಕೆ ತೆರಳಿದ ಪೊಲೀಸರಿಗೆ ಪುಂಡರ ಸಿಕ್ಕಿಲ್ಲ. ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಮತ್ತೆ ಅದೇ ವಿಳಾಸಕ್ಕೆ ತೆರಳಿದಾಗ ಸ್ಕೂಟರ್ ಪತ್ತೆಯಾಗಿತ್ತು. ಆದರೆ ನಿಯಮ ಉಲ್ಲಂಘಿಸಿದ ಯುವಕರಿಬ್ಬರ ಪತ್ತೆ ಇರಲಿಲ್ಲ. ಸ್ಕೂಟರ್ ವಶಕ್ಕೆ ಪಡೆದ ಪೊಲೀಸರು ಸ್ಕೂಟರ್ ರೈಡ್ ಮಾಡುತ್ತಿದ್ದ ಉಣ್ಣಿ ಕೃಷ್ಣನ್‌ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿದ್ದಾರೆ. ಇನ್ನು ಹೆಲ್ಮೆಟ್ ಹಾಕದೆ, ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ ಕಾರಣಕ್ಕೆ ದುಬಾರಿ ದಂಡ ವಿಧಿಸಲಾಗಿದೆ.
 

Follow Us:
Download App:
  • android
  • ios