ನವದೆಹಲಿ(ಅ.01): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದೆ. ತಿದ್ದುಪಡಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಮೊಬೈಲ್ ಬಳಕೆ ವಿಚಾರ, ವಾಹನ ದಾಖಲೆ ಪತ್ರ  ಸೇರಿದಂತೆ ಕೆಲ ಮಹತ್ವದ ಬದಲಾವಣೆಗಳನ್ನು ಮಾಡಿದೆ. 

ವಾಹನ ಸವಾರರಿಗೆ ಸಿಹಿ ಸುದ್ದಿ- ತೆರಿಗೆ ಇಳಿಸಿದ ರಾಜ್ಯ ಸರ್ಕಾರ!.

ಮೋಟಾರು ವಾಹನ ಕಾಯ್ದೆ ತಿದ್ದುಪಡಿ 2020

  • ವಾಹನ ಚಾಲಕರು ಹೊಸ ದಾರಿ ಅಥವಾ ತಲುಪಬೇಕಾದ ರಸ್ತೆ ಕುರಿತು ಅರಿಯಲು ನ್ಯಾವಿಗೇಶನ್ ಮ್ಯಾಪ್‌‌ಗಾಗಿ ಮೊಬೈಲ್ ಬಳಕೆ ಮಾಡಬುದು. ಆದರೆ ಇದು ಚಾಲಕರ ಚಾಲನೆಗೆ ಅಡ್ಡಿಯಾಗಬಾರದು. ಹಾಗೂ ಇತರ ಯಾವುದೇ ಕಾರಣಕ್ಕೂ ಚಾಲನೆ ವೇಳೆ ಮೊಬೈಲ್ ಬಳಸುವಂತಿಲ್ಲ.
  • ವಾಹನ ಮಾಲೀಕರು ವಾಹನದ ದಾಖಲೆ, ವಿಮೆ ಸೇರಿದಂತೆ ದಾಖಲೆ ಪತ್ರಗಳನ್ನು ಕೇಂದ್ರ ಸರ್ಕಾರ ಸೂಚಿಸಿದ ಡಿಜಿಲಾಕರ್, ಎಂ.ಪರಿವಾಹನ್ ಆ್ಯಪ್‌ನಲ್ಲಿ ಶೇಖರಿಸಬಹುದು. ಹಾಗೂ ದೃಢೀಕರಿಸಿದ ಇ ದಾಖಲೆಗಳು ಮಾನ್ಯವಾಗಿರುತ್ತದೆ.
  • ವಾಹನ ನೋಂದಣಿ(RC), ವಿಮೆ, ಫಿಟ್ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ಹೊಗೆ ತಪಾಸಣೆ ಸೇರಿದಂತೆ ಎಲ್ಲಾ ದಾಖಲೆಗಳನು ಇ ಡಾಕ್ಯುಮೆಂಟ್ ಮಾನ್ಯವಾಗಿರುತ್ತದೆ. ಹೀಗಾಗಿ ದಾಖಲೆ ಪ್ರತಿಗಳನ್ನು ಇಡಬೇಕಾದ ಅಗತ್ಯವಿಲ್ಲ

ಎರಡು ಕಾರಣಗಳಿಗೆ ವಾಹನ ಚಾಲಕರು ಅಥವಾ ಮಾಲೀಕರು ಮೊಬೈಲ್ ಬಳಸಲು ಅವಕಾಶ ನೀಡಿದೆ. ಚಾಲನೆ ವೇಳೆ ನ್ಯಾವಿಗೇಶನ್ ಉದ್ದೇಶಕ್ಕಾಗಿ ಮಾತ್ರ ಮೊಬೈಲ್ ಬಳಸಬಹುದಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.