ಮಹಿಳಾ ದಿನಾಚರಣೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿಗೆ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಪುನೀತ್ ಗಿಫ್ಟ್ ನೀಡಿದ ಕಾರಿನ ಬೆಲೆ ಏಷ್ಟು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
ಬೆಂಗಳೂರು(ಮಾ.08): ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆ ಸಂಭ್ರಮ. ಇದೀಗ ಮಹಿಳಾ ದಿನಾಚರಣೆಯನ್ನ ಸ್ಯಾಂಡಲ್‌ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ವಿಶಿಷ್ಠವಾಗಿ ಆಚರಿಸಿದ್ದಾರೆ. ಪತ್ನಿಗೆ ವಿಶೇಷ ಉಡುಗೊರೆ ನೀಡೋ ಮೂಲಕ ಸರ್ಪ್ರೈಸ್ ನೀಡಿದ್ದಾರೆ.
ಇದನ್ನೂ ಓದಿ: ’ನಟಸಾರ್ವಭೌಮ’ ನೋಡಿ ಪುನೀತ್ ಪತ್ನಿ ಹೇಳಿದ್ದೇನು?
ಪತ್ನಿಗಾಗಿ ಪುನೀತ್ ರಾಜ್‌ಕುಮಾರ್ ನೂತನ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀಲಿ ಬಣ್ಣದ ಐಷಾರಾಮಿ ಕಾರು ಖರೀದಿಸಿ ಪತ್ನಿಗೆ ಮಹಿಳಾ ದಿನದಂದು ಉಡುಗೊರೆಯಾಗಿ ನೀಡಿದ್ದಾರೆ. ಪುನೀತ್ ಖರೀದಿಸಿದ ಈ ಕಾರಿನ ಬೆಲೆ ಬರೋಬ್ಬರಿ 3 ಕೋಟಿ ರೂಪಾಯಿ.
"
ಲ್ಯಾಂಬೋರ್ಗಿನಿ ಉರುಸ್ ಕಾರಿನ ವಿಶೇಷತೆ:
ಲ್ಯಾಂಬೋರ್ಗಿನಿ ಉರುಸ್ ಕಾರು ವಿಶ್ವದ ಫಾಸ್ಟೆಸ್ಟ್ SUV ಕಾರು ಅನ್ನೋ ಹೆಗ್ಗಳಿಗೆಯೊಂದಿಕೆ ಬಿಡುಗಡೆಯಾದ ಕಾರು. ಹೆಚ್ಚಾಗಿ ಲ್ಯಾಂಬೋರ್ಗಿನಿ ಕಾರು ಗ್ರೌಂಡ್ ಕ್ಲೀಯರೆನ್ಸ್ ಕಡಿಮೆ. ಆದರೆ ಇದು SUV ಕಾರಾಗಿರೋದರಿಂದ ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ಕಾರು. ಇಷ್ಟೇ ಅಲ್ಲ ಐಷಾರಾಮಿ ಹಾಗೂ ಅತ್ಯಂತ ಸುರಕ್ಷತೆಯ ಕಾರಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!
ಉರುಸ್ ಕಾರು 4.0 ಲೀಟರ್, ಟ್ವಿನ್ ಟರ್ಬೋ, ಪೆಟ್ರೋಲ್ ಎಂಜಿನ್ ಹೊಂದಿದ್ದು, 641PS ಪವರ್ ಹಾಗೂ 850Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿರುವ ಈ ಕಾರು 0-100 ಸ್ಪೀಡ್‌ಗೆ ತೆಗೆದುಕೊಳ್ಳುವ ಸಮಯ ಕೇವಲ 3.6 ಸೆಕೆಂಡುಗಳು ಮಾತ್ರ. ಇದರ ಗರಿಷ್ಠ ವೇಗ 305 KMPH.
ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?
ಆಕರ್ಷಕ ವಿನ್ಯಾಸ ಹೊಂದಿರುವ ಉರುಸ್ ಕಾರು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ. ಏರ್‌ಬ್ಯಾಗ್, ಪ್ಯಾಸೆಂಜರ್ ಏರ್‌ಬ್ಯಾಗ್, ಸೈಡ್ ಏರ್‌ಬ್ಯಾಗ್, ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಎಲೆಕ್ಟ್ರಾನಿಕ್ ಬ್ರೇಕ್‌ಪೋರ್ಸ್ ಡಿಸ್ಟ್ರಿಬ್ಯೂಶನ್(EBD), ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟ್ ಪ್ರೊಗ್ರಾಮ್(ESP), ಟ್ರಾಕ್ಷನ್ ಕಂಟ್ರೋಲ್(TC) ಸೇರಿದಂತೆ ಅತ್ಯಾಧುನಿಕ ಬೇಕ್ ಸಿಸ್ಟಮ್ ಹೊಂದಿದೆ.
ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್, ಪವರ್ ಡೂರ್ ಲಾಕ್, ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಕಾರ್ನರಿಂಗ್ ಲೈಟ್ಸ್, ಟರ್ನ್ ಇಂಡೀಕೇಶನ್ ORVM, ರೈನ್ ಸೆನ್ಸಿಂಗ್ ವೈಪರ್, ಹೆಡ್‌ಲ್ಯಾಂಪ್ ಬೀಮ್ ಅಡ್ಜಸ್ಟರ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ಇದನ್ನೂ ಓದಿ: ತಾಯಿಗೆ 1.87 ಕೋಟಿ ರೂ ಕಾರು ಗಿಫ್ಟ್ ನೀಡಿದ ಸಲ್ಮಾನ್ - ದುಬಾರಿ ಕಾರಿನ ವಿಶೇಷತೆ ಇಲ್ಲಿದೆ!
ಲ್ಯಾಂಬೋರ್ಗಿನಿ ಉರುಸ್ ಕಾರಿನ ಉದ್ದ 5112 mm, ಅಗಲ 2016 mm, ಎತ್ತರ 1638 mm, ವೀಲ್ಹ್ ಬೇಸ್ 3003 mm, ಬೂಟ್ ಸ್ಪೇಸ್ 616 L. ಇದೀಗ 3 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಈ ಕಾರನ್ನು ಪುನೀತ್ ರಾಜ್‌ಕುಮಾರ್ ಪತ್ನಿಗೆ ಉಡುಗೊರೆ ನೀಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 8, 2019, 7:19 PM IST