ಮುಂಬೈ(ಮಾ.04): ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಬಳಿ ಹಲವು ದುಬಾರಿ ಕಾರುಗಳಿವೆ. ಬಚ್ಚನ್ ಫ್ಯಾಮಿಲಿಯ ಪ್ರತಿಯೊಬ್ಬರು ಕೂಡ ಐಷಾರಾಮಿ ಕಾರು ಬಳಸುತ್ತಾರೆ. ಇದೀಗ ಅಮಿತಾಬ್ ಬಚ್ಚನ್ ತಮ್ಮ ನೆಚ್ಚಿನ ರೋಲ್ಸ್ ರಾಯ್ಸ್ ಫಾಂಟಮ್ ಕಾರನ್ನ ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

ಅಮಿತಾಬ್ ಬಚ್ಚನ್ ಅವರ ಲಕ್ಕಿ ಕಾರನ್ನ ಖರೀದಿಸಿರುವುದು ಬೆಂಗಳೂರಿನ ಉಮ್ರ ಡೆವಲಪ್ಪರ್ಸ್. ಇದೀಗ ಈ ಕಾರು ಮೈಸೂರಿನಲ್ಲಿರುವ ಉಮ್ರ ಡೆವಲಪ್ಪರ್ಸ್ ಅವರ ವಿಂಟೇಜ್ ಕಾರು ಸಂಗ್ರಹಾಲಯ ಸೇರಿಕೊಂಡಿದೆ. ಅಮಿತಾಬ್ ಬಚ್ಚನ್ 2007ರಿಂದ ಈ ಕಾರನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ: ಸುರಕ್ಷತೆಯಲ್ಲಿ 5 ಸ್ಟಾರ್ ಪಡೆದ ಭಾರತದ ಮತ್ತೊಂದು ಕಾರು!

2007ರಲ್ಲಿ ಅಮಿತಾಬ್ ಅಭಿನಯದ ಏಕಲವ್ಯ ಭರ್ಜರಿ ಯಶಸ್ಸು ಕಂಡಿತ್ತು. ಹೀಗಾಗಿ ಚಿತ್ರದ ನಿರ್ದೇಶಕ ವಿಧು ವಿನೋದ್ ಚೊಪ್ರಾ ರೋಲ್ಸ್ ರಾಯ್ಸ್ ಫಾಂಟಮ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಕಾರಿಗೆ ಅಮಿತಾಬ್ ಬಚ್ಚನ್ ಹೆಚ್ಚುವರಿ ಹಣ ನೀಡಿ MH 02 BB 2 ನಂಬರ್ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದರು. 

2007ರಲ್ಲಿ ರೋಲ್ಸ್ ರಾಯ್ಸ್ ಫಾಂಟಮ್ ಕಾರಿನ ಬೆಲೆ 3. 5 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). 6.75 ಲೀಟರ್ V12 ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು ಗರಿಷ್ಠ 460bhp ಪವರ್ ಹಾಗೂ 720Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯಹೊಂದಿದೆ.

ಇದನ್ನೂ ಓದಿ: ಆ್ಯಂಬುಲೆನ್ಸ್ ಬಂದಾಗ ಪಾಲಿಸಬೇಕು ಹಲವು ನಿಯಮ - ಉಲ್ಲಂಘಿಸಿದರೆ ಕಠಿಣ ಶಿಕ್ಷೆ!

ರೋಲ್ಸ್ ರೋಯ್ಸ್ ಕಾರು ಹೊರತು ಪಡಿಸಿದರೆ ಅಮಿತಾಬ್ ಬಚ್ಚನ್ ಬಳಿ ಬೆಂಟ್ರಿ ಕಾಂಟಿನೆಂಟಲ್ GT, ಟೊಯೊಟ ಲ್ಯಾಂಡ್ ಕ್ರೂಸರ್ LC200, ಲ್ಯಾಂಡ್ ರೋವರ್ ರೇಂಜ್ ರೋವರ್ ಅಟೋಬಯೋಗ್ರಫಿ, ಆಡಿ A8L, ಮರ್ಸಡೀಸ್ ಬೆಂಝ್ ಮೇಬ್ಯಾಚ್ S500, ಮರ್ಸೀಡೀಸ್ ಬೆಂದ್ S350, ಪೊರ್ಶೆ ಕ್ಯಾಮ್ಯಾನ್, ಟೊಯೊಟಾ ಕಾರ್ಮಿ ಹಾಗೂ ಮಿನಿ ಕೂಪರ್ ಕಾರಿದೆ. ಇತ್ತೀಚೆಗಷ್ಟೇ ಅಮಿತಾಬ್  ಲೆಕ್ಸಸ್ LX 570 SUV ಕಾರು ಖರೀದಿಸಿದ್ದಾರೆ.