ಮುಂಬೈ(ಫೆ.27): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕಾರು ಕ್ರೇಜ್ ಸ್ವಲ್ಪ ಹೆಚ್ಚು. ಹೀಗಾಗಿ ಕೊಹ್ಲಿ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಇನ್ನು ಭಾರತದಲ್ಲಿ ಆಡಿ ಕಾರಿನ ರಾಯಭಾರಿಯಾಗಿರುವ ಕೊಹ್ಲಿ, ಹಲವು ಆಡಿ ಕಾರುಗಳನ್ನೂ ಹೊಂದಿದ್ದಾರೆ. ಆದರೆ ಕೊಹ್ಲಿ ಆಡಿ R8 ಕಾರಿನ ಈಗಿನ ಪರಿಸ್ಥಿತಿ ನೋಡಿದರೆ ಬೇಸರವಾಗುವುದು ಖಚಿತ.

ಇದನ್ನೂ ಓದಿ: ಭದ್ರತಾ ಸಿಬ್ಬಂದಿ ಹುಟ್ಟು ಹಬ್ಬ ಆಚರಿಸಿದ ವಿರಾಟ್ ಕೊಹ್ಲಿ!

0018 ಇದು ಕೊಹ್ಲಿ  ಆಡಿ R8 ಕಾರಿನ ನಂಬರ್. ತನ್ನ ಜರ್ಸಿ ನಂಬರನ್ನ ಕಾರಿನ ರಿಜಿಸ್ಟ್ರೇನ್ ಮಾಡಿಸಿಕೊಂಡಿರುವ ಕೊಹ್ಲಿಗೆ  ಆಡಿ R8 ಅಚ್ಚು ಮೆಚ್ಚಿನ ಕಾರು. ಆದರೆ ಕೊಹ್ಲಿ ಕಾರುಗಳ ಸಂಖ್ಯೆ ಹೆಚ್ಚಾದ ಕಾರಣ  2012ರ ಮಾಡೆಲ್  ಆಡಿ R8 ಕಾರನ್ನ 2016ರಲ್ಲಿ ಮಾರಾಟ ಮಾಡಿದ್ದಾರೆ. ಈ ಕಾರನ್ನ ಸಾಗರ್ ಥಕ್ಕರ್ ಅನ್ನೋ ಮುಂಬೈ ಮೂಲದ ಉದ್ಯಮಿ ಖರೀದಿಸಿದ್ದರು.

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

2.5 ಕೋಟಿ ಮೌಲ್ಯದ ಈ  ಆಡಿ R8 ಕಾರನ್ನ ಸಾಗರ್ ಕೇವಲ 60 ಲಕ್ಷ ರೂಪಾಯಿಗೆ ಖರೀದಿಸಿದ್ದರು. 2017ರಲ್ಲಿ ಸಾಗರ್ ಕಾಲ್ ಸೆಂಟರ್ ಹಗರಣದಲ್ಲಿ ಸಿಲುಕಿ ಪರಾರಿಯಾಗಿದ್ದಾನೆ. ಈತನಿಗಾಗಿ ಪೊಲೀಸರು ಕಳೆದೊಂದು ವರ್ಷದಿಂದ ಹುಡುಕಾಟ ನಡೆಸುತ್ತಿದ್ದಾರೆ. ಈತನ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ವೇಳೆ ಮುಂಬೈ ಪೊಲೀಸರು ಆಡಿ R8 ಕಾರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: IPL ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಸಾಧಕರು!

ಪೊಲೀಸರು ಆಡಿ R8 ಕಾರನ್ನು ತೆರೆದ ಜಾಗದಲ್ಲಿ ನಿಲ್ಲಿಸಿದ್ದಾರೆ. ಕಳೆದ ವರ್ಷ ಮುಂಬೈನಲ್ಲಿನ ಪ್ರವಾದಲ್ಲಿ ಈ ಕಾರು ಮುಳುಗಿತ್ತು. ಇದೀಗ ಒಂದು ವರ್ಷ ಈ ಕಾರು ನಿಂತಲ್ಲೇ ನಿಂತಿದೆ. ಹೀಗಾಗಿ ಸಂಪೂರ್ಣ ಹಾಳಾಗಿದೆ. ಕೊಹ್ಲಿ ಜರ್ಸಿ ನಂಬರ್ ಹೊಂದಿರುವ ಈ ಕಾರು ಇದೀಗ ಅನಾಥವಾಗಿ ಬಿದ್ದಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ.

ಕೊಹ್ಲಿ ಈ ಕಾರು ಅಚ್ಚು ಮೆಚ್ಚಾಗಿತ್ತು. ಹಲವು ಭಾರಿ ಈ ಕಾರಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಐಪಿಎಲ್ ಟೂರ್ನಿ ವೇಳೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ಜಾಲಿ ರೈಡ್ ಮಾಡಿ ಗಮನಸೆಳೆದಿದ್ದರು. ಇದೀಗ ಈ ಕಾರು  ಅನಾಥವಾಗಿ ಮುಂಬೈ ಪೊಲೀಸರ ವಶದಲ್ಲಿದೆ.