ಮುಂಬೈ(ಡಿ.28): ಭಾರತದ ಆಟೋಮೊಬೈಲ್ ಕ್ಷೇತ್ರದ ಪ್ರತಿಷ್ಠಿತ 14ನೇ ಇಂಡಿಯನ್ ಕಾರ್ ಆಫ್ ದಿ ಇಯರ್(ICOTY) ಹಾಗೂ ಇಂಡಿಯನ್ ಮೋಟರ್ ಸೈಕಲ್ ಆಫ್ ದಿ ಇಯರ್(IMOTY) ಪ್ರಶಸ್ತಿ ಪ್ರಧಾನ ಸಮಾರಂಭ ಮುಂಬೈನಲ್ಲಿ ನಡೆದಿದೆ.  ವರ್ಷದ ಕಾರು, ಬೈಕ್ ಸೇರಿದಂತೆ ಹಲವು ವಿಭಾಗಗಳಲ್ಲಿನ ಆಯ್ಕೆಯಾದ ಆಟೋಮೊಬೈಲ್ ಇಂಡಸ್ಟ್ರಿಗೆ ಪ್ರಶಸ್ತಿ ವಿತರಿಸಲಾಗಿದೆ. 

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

ಮಾರುತಿ ಸುಜುಕಿ ಸ್ವಿಫ್ಟ್ 2019ರ ಇಂಡಿಯನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನವಾಗಿದ್ರೆ. ರಾಯಲ್ ಎನ್‌ಫೀಲ್ಡ್  650 ಇಂಡಿಯನ್ ಮೋಟರ್ ಸೈಕಲ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡಿದೆ. ಇನ್ನು ವರ್ಷದ ಪ್ರಿಮಿಯರ್ ಕಾರು ಆಫ್ ದಿ ಇಯರ್ ವಿಭಾಗದಲ್ಲಿ ವೋಲ್ವೋ XC40 ಕಾರು ಪ್ರಶಸ್ತಿ ಪಡೆದುಕೊಂಡಿದೆ.

ಇದನ್ನೂ ಓದಿ: ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ!

ಜೆಕೆ ಟೈಯರ್ ಇಂಡಸ್ಟ್ರಿ ಚೇರ್ಮೆನ್ ಡಾ.ರಘುಪತಿ ಸಿಂಘಾನಿಯ, ICOTY ಚೇರ್ಮೆನ್ ಯೋಗೇಂದ್ರ ಪ್ರತಾಪ್ ಆಯ್ಕೆಯಾದ ಕಾರು ಬೈಕ್ ಇಂಡಸ್ಟ್ರಿಗೆ ಪ್ರಶಸ್ತಿ ವಿತರಿಸಿದರು. ICOTY ಹಾಗೂ IMOTY ಪ್ರಶಸ್ತಿಗಳು ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಆಸ್ಕರ್ ಇದ್ದಂತೆ ಎಂದು ಜೆಕೆ ಟೈಯರ್ ಇಂಡಸ್ಟ್ರಿ ಚೇರ್ಮೆನ್ ಡಾ.ರಘುಪತಿ ಹೇಳಿದರು.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: