ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ!

ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ವರ್ಷ ಹೊಸ ನೀತಿ ನಿಯಮಗಳು ಸೇರಿಕೊಳ್ಳುತ್ತಿದೆ. ಇದೀಗ 2019ರ ಎಪ್ರಿಲ್‌ನಿಂದ ಎಲ್ಲಾ ವಾಹನಗಳು ಹೆ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

High security registration number plate mandatory for All vehicles from April

ನವದಹೆಲಿ(ಡಿ.27): ಹೊಸ ವರ್ಷದಲ್ಲಿ ಸಾಕಷ್ಟು ಹೊಸ ನಿಯಮಗಳು ಜಾರಿಯಾಗುತ್ತಿದೆ. 2019ರ ಎಪ್ರಿಲ್ 1 ರಿಂದ ಎಲ್ಲಾ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP)ಕಡ್ಡಾಯ ಮಾಡಲಾಗಿದೆ. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯನ್ನ ತಿದ್ದುಪಡಿ ಮಾಡಲಾಗಿದೆ. 2001ರಲ್ಲಿ ಈ ಕಾಯ್ದೆ ಮಂಡಿಸಲಾಗಿತ್ತು. ಬಳಿಕ ಹಲವು ಸುತ್ತಿನ ಚರ್ಚೆ ಬಳಿಕ ಜೂನ್ 5, 2018ರಲ್ಲಿ ಈ ಕಾಯ್ದೆ ಮತ್ತೆ ಮುನ್ನಲೆಗೆ ಬಂದಿತ್ತು. ಇದೀಗ 2019ರ ಎಪ್ರಿಲ್ 1 ರಿಂದ ನೂತನ ನಿಯಮ ಜಾರಿಯಾಗಲಿದೆ.

High security registration number plate mandatory for All vehicles from April

ಇದನ್ನೂ ಓದಿ: ಕ್ಯಾಬ್ ಡ್ರೈವರ್‌ಗೆ ಹೆಲ್ಮೆಟ್‌ನಿಂದ ಥಳಿತ -ಬೈಕ್ ಸವಾರನಿಗೆ ಜೈಲು ಶಿಕ್ಷೆ!

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ನಲ್ಲಿ ಕ್ರೋಮಿಯಮ್ ಹಾಲೋಗ್ರಾಮ್ ಸ್ಟಾಂಪ್ ಅಳವಡಿಸಲಾಗುತ್ತೆ. ಲೇಸರ್ ರೀಡರ್ ಮೂಲಕ ವಾಹನ ರಿಜಿಸ್ಟ್ರೇಶನ್, ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಮೂಲಕ ತಿಳಿಯಲು ಸಾಧ್ಯವಿದೆ. 
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios