Asianet Suvarna News Asianet Suvarna News

ಕಡಿಮೆ ಬೆಲೆ, ಗರಿಷ್ಠ ಮೈಲೈಜ್ BattRE ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಜೈಪುರ ಮೂಲಕ ಸ್ಟಾರ್ಟ್ ಅಪ್ ಕಂಪನಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಹಾಗೂ ಸುಲಭ ಚಾರ್ಜಿಂಗ್ ಹೊಂದಿದೆ. ಇಲ್ಲಿದೆ ವಿಶೇಷತೆ.

BattRe electric mobility launch electric scooter in India
Author
Bengaluru, First Published Jun 7, 2019, 6:31 PM IST

ಜೈಪುರ(ಜೂ.7): ಭಾರತ ಈಗ ಎಲೆಕ್ಟ್ರಿಕ್ ವಾಹನದತ್ತ ಗಮನ ಕೇಂದ್ರಿಕರಿಸಿದೆ. ಈಗಾಗಲೇ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ತಯಾರಿಸುತ್ತಿದೆ. ಬೆಂಗಳೂರಿನ ಎದರ್ ಕಂಪನಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಜೈಪುರ ಮೂಲದ  BattRE ಕಂಪನಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಕುಡಿಯುವ ನೀರಿನಲ್ಲಿ ಕಾರು ವಾಶ್- ಕೊಹ್ಲಿಗೆ ದಂಡ!

BattRE ಎಲೆಕ್ಟ್ರಿಕ್  ಸ್ಕೂಟರ್ ಬೆಲೆ 63,555 ರೂಪಾಯಿ(ಎಕ್ಸ್ ಶೋ ರೂಂ). ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಸದ್ಯ BattRE ಎಲೆಕ್ಟ್ರಿಕ್  ಸ್ಕೂಟರ್ ನಾಗ್ಪುರ, ಹೈದರಾಬಾದ್, ಅನಂತಪುರ ಹಾಗೂ ಕರ್ನೂಲ್ ನಗರಗಳಲ್ಲಿ ಈ ಸ್ಕೂಟರ್ ಲಭ್ಯವಿದೆ. ಶೀಘ್ರದಲ್ಲೇ ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಲ್ಲಿ ಈ ಸ್ಕೂಟರ್ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಧೋನಿ ಗ್ಲೌಸಲ್ಲಿ IA ಚಿಹ್ನೆಗೆ ICC ವಿರೋಧ: ಪಾಕ್‌ಗಿಲ್ಲದ ನಿಯಮ ನಮಗ್ಯಾಕೆ?

 ಕಂಪನಿ ಪುಣೆ, ವಿಶಾಪಟ್ಟಣಂ ಹಾಗೂ ವಾರಂಗಲ್‌ನಲ್ಲಿ ಸರ್ವೀಸ್ ಸೆಂಟರ್ ಆರಂಭಿಸುತ್ತಿದೆ. 48V 30 Ah ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಬ್ಯಾಟರಿ ತೂಕ 12 ಕೆಜಿ. ಇನ್ನೂ ಸ್ಕೂಟರ್ ತೂಕ 64 ಕೆಜಿ.  ಬ್ಯಾಟರಿ ತೆಗೆದು ಚಾರ್ಜ್ ಮಾಡಬಹುದು. 

Follow Us:
Download App:
  • android
  • ios