ಮಹಿಂದ್ರ ಒಡೆತನದ ಪಿನಿನ್‌ಫರಿನಾ ಬ್ಯಾಟಿಸ್ಟ ಹೈಪರ್ ಕಾರು ಬಿಡುಗಡೆ ಮಾಡಿದೆ. ಇದಕ್ಕೊರ್ವ ಈ ಕಾರು ಎಷ್ಟು ಮೈಲೇಜ್ ಕೊಡುತ್ತೆ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ ತಕ್ಕ ಉತ್ತರ ನೀಡಿದ್ದಾರೆ.  

ಮುಂಬೈ(ಮಾ.09): ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇಷ್ಟೇ ಅಲ್ಲ ಹಲವರ ಪ್ರಶ್ನೆಗಳಿಗೆ ತಕ್ಕ ತಿರುಗೇಟು ನೀಡೋ ಮೂಲಕವೂ ಸುದ್ದಿಯಾಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೇಳಲಾದ ಪ್ರಶ್ನೆಗೆ ಖಡಕ್ ಉತ್ತರ ನೀಡೋ ಮೂಲಕ ಸಂಚಲನ ಮೂಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ರಸ್ತೆ ನನ್ನಪ್ಪಂದಲ್ಲ-ಮಹೀಂದ್ರ ಮೋಟಾರ್ಸ್ ಮುಖ್ಯಸ್ಥ ಟ್ವೀಟ್ ಮಾಡಿದ್ದೇಕೆ?

ಜಿನೆವಾ ಮೋಟಾರ್‌ ಶೋನಲ್ಲಿ ಮಹೀಂದ್ರ ಮಾಲೀಕತ್ವದ ಇಟಲಿ ಮೂಲದ ಪಿನಿನ್‌ಫರಿನಾ ಕಂಪನಿ ಹೈಪರ್ ಕಾರು ಅನಾವರಣ ಮಾಡಿದೆ. ಆಕರ್ಷಕ ವಿನ್ಯಾಸ ಹಾಗೂ ಫಾರ್ಮುಲಾ 1 ರೇಸ್ ಕಾರಿಗಿಂತ ವೇಗ ಹೊಂದಿರುವ ಪಿನಿನ್‌ಫರಿನಾ ಬ್ಯಾಟಿಸ್ಟ ಕಾರು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. 

Scroll to load tweet…

ಇದನ್ನೂ ಓದಿ: ಫಾರ್ಮುಲಾ 1 ಕಾರಿಗಿಂತ ವೇಗ- ಮಹೀಂದ್ರ ಹೈಪರ್ ಕಾರು ಅನಾವರಣ!

ಕಾರು ಅನಾವರಣ ಮಾಡಿದ ಬಳಿಕ ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಕಾರಿನ ಕುರಿತು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಒರ್ವ ಈ ಕಾರು ಎಷ್ಟು ಮೈಲೇಜ್ ಕೊಡುತ್ತೆ ಅನ್ನೋ ಪ್ರಶ್ನೆ ಹಾಕಿದ್ದಾನೆ. ಇದಕ್ಕೆ ಆನಂದ್ ಮಹೀಂದ್ರ, ಸರ್‌ಜಿ.., ಇದು ಎಲೆಕ್ಟ್ರಿಕ್ ಕಾರು, ಶಾಕ್ ನೀಡುತ್ತೆ ಎಂದು ಉತ್ತರಿಸಿದ್ದಾರೆ.

Scroll to load tweet…